Thursday, May 14, 2026
Google search engine
Homeರಾಜ್ಯಲಿಫ್ಟ್ ನಲ್ಲಿ ಸಿಲುಕಿ ರಾಜ್ಯಪಾಲ ಗೆಹ್ಲೋಟ್ ಪರದಾಟ!

ಲಿಫ್ಟ್ ನಲ್ಲಿ ಸಿಲುಕಿ ರಾಜ್ಯಪಾಲ ಗೆಹ್ಲೋಟ್ ಪರದಾಟ!

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಲಿಫ್ಟ್ ನಲ್ಲಿ ಸಿಲುಕಿಕೊಂಡು ಪರದಾಡಿದ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶನಿವಾರ ಸಂಭವಿಸಿದೆ.

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.

ಓವರ್ ಲೋಡ್ ಆಗಿದ್ದರಿಂದ ಲಿಫ್ಟ್ ಕೈಕೊಟ್ಟು ಅರ್ಧದಲ್ಲೇ ನಿಂತಿದೆ. ಇದರಿಂದ ಕೆಲವು ನಿಮಿಷಗಳ ಕಾಲ ರಾಜ್ಯಪಾಲರು ಲಿಫ್ಟ್ ನಲ್ಲಿಯೇ ಸಿಲುಕಿಕೊಂಡು ಪರದಾಡಿದ್ದಾರೆ.

ತಕ್ಷಣ ಸಿಬ್ಬಂದಿ ಲಿಫ್ಟ್ ತೆಗೆದು ರಾಜ್ಯಪಾಲರನ್ನು ಹೊರಗೆ ಸುರಕ್ಷಿತವಾಗಿ ಕರೆತಂದಿದ್ದು, ನಂತರ ಕಾರ್ಯಕ್ರಮಕ್ಕೆ ಗೆಹ್ಲೋಟ್ ನಡೆದುಕೊಂಡೇ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments