Monday, September 28, 2026
Google search engine
Homeದೇಶಲೋಕಸಭಾ ಟಿಕೆಟ್ ಆಫರ್ ಮಾಡಿದ್ದ ಜ್ಞಾನೇಶ್: ಕೇರಳ ಅಧಿಕಾರಿ ಬಾಂಬ್

ಲೋಕಸಭಾ ಟಿಕೆಟ್ ಆಫರ್ ಮಾಡಿದ್ದ ಜ್ಞಾನೇಶ್: ಕೇರಳ ಅಧಿಕಾರಿ ಬಾಂಬ್

ತಿರುವನಂತಪುರಂ: ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಕೇಂದ್ರ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಆಹ್ವಾನ ನೀಡಿದ್ದರು ಎಂದು ಕೇರಳದ ನಿವೃತ್ತ ಮುಖ್ಯ ಕಾರ್ಯದರ್ಶಿ ಗಂಭೀರ ಆರೋಪ ಮಾಡಿದ್ದಾರೆ.

ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಜಿಜಿ ಥಾಮಸ್ 2016ರಲ್ಲಿ ಮುಖ್ಯ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಜ್ಞಾನೇಶ್ ಕುಮಾರ್ ಈ ಆಹ್ವಾನ ನೀಡಿದ್ದರು ಎಂದು ಹೇಳಿದ್ದಾರೆ.

2016ರಲ್ಲಿ ನಾನು ಸೇವೆಯಿಂದ ನಿವೃತ್ತಿ ಆಗಲು ಬಯಸಿದ್ದೆ. ಆಗ ನನ್ನ ಬಗ್ಗೆ ಮಾಹಿತಿ ಪಡೆದ ಜ್ಞಾನೇಶ್ ಕುಮಾರ್, 2019ರ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರು. ಅಲ್ಲದೇ ಕೇಂದ್ರದಲ್ಲಿ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ನಾನು ಆ ಆಹ್ವಾನವನ್ನು ತಿರಸ್ಕರಿಸಿದ್ದೆ. ಅಲ್ಲದೇ ಕರ್ತವ್ಯದಲ್ಲಿರುವ ಐಎಎಸ್ ಅಧಿಕಾರಿ ಈ ರೀತಿ ರಾಜಕೀಯ ಆಹ್ವಾನ ನೀಡಿದ್ದರಿಂದ ಅಚ್ಚರಿಗೆ ಒಳಗಾಗಿದ್ದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments