Wednesday, 28 October 2026 — Kannadavahini
BREAKING NEWS
ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್ ರಾಜ್ಯ ಅ. 24ರಿಂದ ಹೊಸ ಮೆರುಗಿನಲ್ಲಿ ‘ಗೋಲ್ಡನ್ ಚಾರಿಯಟ್’ ಐಷಾರಾಮಿ ಯಾತ್ರೆ ಆರಂಭ ಅಪರಾಧ ಬೆಂಗಳೂರಿನಲ್ಲಿ ನಿಗೂಢ ಸ್ಫೋಟ: ಎನ್ ಐಎ ತನಿಖೆ ರಾಜ್ಯ ಐತಿಹಾಸಿಕ ಜಂಬೂಸವಾರಿ: ಚಾಮುಂಡೇಶ್ವರಿ ಮೆರವಣಿಗೆಗೆ ಸಿಎಂ ಪುಷ್ಪಾರ್ಚನೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್ ರಾಜ್ಯ ಅ. 24ರಿಂದ ಹೊಸ ಮೆರುಗಿನಲ್ಲಿ ‘ಗೋಲ್ಡನ್ ಚಾರಿಯಟ್’ ಐಷಾರಾಮಿ ಯಾತ್ರೆ ಆರಂಭ ಅಪರಾಧ ಬೆಂಗಳೂರಿನಲ್ಲಿ ನಿಗೂಢ ಸ್ಫೋಟ: ಎನ್ ಐಎ ತನಿಖೆ ರಾಜ್ಯ ಐತಿಹಾಸಿಕ ಜಂಬೂಸವಾರಿ: ಚಾಮುಂಡೇಶ್ವರಿ ಮೆರವಣಿಗೆಗೆ ಸಿಎಂ ಪುಷ್ಪಾರ್ಚನೆ
ಕ್ರೀಡೆ

ಖೋ-ಖೋ ವಿಶ್ವಕಪ್‌ 2025: ದಕ್ಷಿಣ ಕೊರಿಯಾ ವಿರುದ್ಧ ಗೆದ್ದು ಇತಿಹಾಸ ಬರೆದ ಭಾರತ ಮಹಿಳಾ ತಂಡ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 2 ವೀಕ್ಷಣೆಗಳು
kho kho world cup
kho kho world cup

ಭಾರತ ಮಹಿಳಾ ಖೋ ಖೋ ತಂಡ ರಾಜಧಾನಿ 157 ಅಂಕಗಳಿಂದ ದಕ್ಷಿಣ ಕೊರಿಯಾ ತಂಡವನ್ನು ಸೋಲಿಸಿ ದೆಹಲಿಯಲ್ಲಿ ನಡೆಯುತ್ತಿರುವ ಖೋ-ಖೋ ವಿಶ್ವಕಪ್‌ ಟೂರ್ನಿಯಲ್ಲಿ ಐತಿಹಾಸಿಕ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.

ಮಂಗಳವಾರ ರಾತ್ರಿ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡ 17-518 ಅಂಕಗಳೊಂದಿಗೆ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿತು.

ಚೈತ್ರಾ ಬಿ, ಮೀರು ಮತ್ತು ನಾಯಕಿ ಪ್ರಿಯಾಂಕಾ ಇಂಗಳೆ ಸತತವಾಗಿ ಮಿಂಚುವ ಮೂಲಕ ಟೀಮ್‌ ಇಂಡಿಯಾಗೆ ಬಲ ತುಂಬಿದರು. ಮೊದಲ ಎರಡು ಬ್ಯಾಚ್‌ಗಳು ತಲಾ ಒಂದು ಪಾಯಿಂಟ್‌ ಗಳಿಸಿದವು. ಈ ಕಾರ್ಯತಂತ್ರದ ಆರಂಭವು ಮೊದಲ ತಿರುವಿನ ಕೊನೆಯಲ್ಲಿ ದಕ್ಷಿಣ ಕೊರಿಯಾ ಪಡೆಯಬಹುದಾದ 10 ಟಚ್‌ ಪಾಯಿಂಟ್‌ಗಳನ್ನು ತಟ್ಥಗೊಳಿಸಲು ನೆರವಾಯಿತು.

ತ್ವರಿತವಾಗಿ ಭಾರತೀಯರು ಪೂರ್ಣ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿದರು. ಕೇವಲ ತೊಂಬತ್ತು ಸೆಕೆಂಡುಗಳಲ್ಲಿ ನಸ್ರೀನ್‌ ಶೇಖ್‌, ಪ್ರಿಯಾಂಕಾ ಇಂಗಳೆ ಮತ್ತು ರೇಷ್ಮಾ ರಾಥೋಡ್‌ ಅವರನ್ನೊಳಗೊಂಡ ತಂಡವು ಡಿಫೆಂಡರ್‌ಗಳ ವಿರುದ್ಧ ಮೂರು ಆಲ್‌ಔಟ್‌ ಗೆಲುವುಗಳನ್ನು ಸಾಧಿಸಿತು. ಇದರೊಂದಿಗೆ ಅಂಕಗಳನ್ನು 24 ಕ್ಕೆ ಏರಿಸಿತು. ಕೇವಲ 18 ಸೆಕೆಂಡುಗಳ ನಂತರ, ಅವರು ದಕ್ಷಿಣ ಕೊರಿಯಾ ವಿರುದ್ಧ ನಾಲ್ಕನೇ ಆಲ್‌ಔಟ್‌ ಪಾಯಿಂಟ್ಸ್‌ ಗಿಟ್ಟಿಸಿದ ಭಾರತೀಯರು ತನ್ನ ಮುನ್ನಡೆಯನ್ನು 22 ಅಂಕಗಳಿಗೆ ವಿಸ್ತರಿಸಿದರು.

ರೇಷ್ಮಾ ರಾಥೋಡ್‌ 6 ಟಚ್‌ ಪಾಯಿಂಟ್‌ಗಳೊಂದಿಗೆ ಗಮನ ಸೆಳೆದರೆ, ಮೀನು 12 ಅಂಕಗಳೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿ ತಂಡದ ಸ್ಕೋರ್‌ ಗಮನಾರ್ಹವಾಗಿ ಹೆಚ್ಚಿಸಿದರು. 2ನೇ ತಿರುವಿನ ವೇಳೆಗೆ ಟೀಮ್‌ ಇಂಡಿಯಾ 16 ಬ್ಯಾಚ್‌ಗಳನ್ನು ಹೊರಹಾಕಿ, ಅಂಕಗಳನ್ನು 94-10 ಕ್ಕೆ ಏರಿಸಿತು.

ಟರ್ನ್‌ 3ರಲ್ಲಿ ಅದೇ ತೀವ್ರತೆಯನ್ನು ಭಾರತೀಯರು ಕಾಯ್ದುಕೊಂಡರು. ಮಹಿಳಾ ತಂಡವು ಸೂಧಿರ್ತಿದಾಯಕ  ಓಟದೊಂದಿಗೆ ಮೂರು ಅಂಕಗಳನ್ನು ಸೇರಿಸಿತು. ಟರ್ನ್‌ 3ರ ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಕೊರಿಯಾ ಕೇವಲ ಎಂಟು ಅಂಕಗಳನ್ನು ಗಳಿಸಲು ಸಾಧ್ಯವಾಯಿತು, ಏಕೆಂದರೆ ಭಾರತದ ಪ್ರಾಬಲ್ಯವು ಅಡೆತಡೆಯಿಲ್ಲದೆ ಮುಂದುವರಿಯಿತು.

ಅಂತಿಮ ತಿರುವು ಪಂದ್ಯದ ಮೇಲೆ ಟೀಮ್‌ ಇಂಡಿಯಾದ ನಿರಂತರ ನಿಯಂತ್ರಣವನ್ನು ಪ್ರದರ್ಶಿಸಿತು. ಎದುರಾಳಿಗಳಿಗೆ ಯಾವುದೇ ಲಯವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ದಕ್ಷಿಣ ಕೊರಿಯಾದ 18 ಅಂಕಗಳ ವಿರುದ್ಧ ಭಾರತ 175 ಅಂಕಗಳನ್ನು ಗಳಿಸುವುದರೊಂದಿಗೆ ಪಂದ್ಯವು ಕೊನೆಗೊಂಡಿತು. ಪಂದ್ಯಾವಳಿಯು ನಿರ್ಣಾಯಕ ಹಂತವನ್ನು ಪ್ರವೇಶಿಸುತ್ಿದ್ದಂತೆ ತಮ್ಮ ಗುಂಪಿನಲ್ಲಿರುವ ಇತರ ತಂಡಗಳಿಗೆ ಅದ್ಭುತ ಸಂದೇಶವನ್ನು ಕಳುಹಿಸಿತು.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8389 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment