ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ಆರಾಧ್ಯ ದೈವ ನಾಣಿಕೆರೆಯ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿ ನೂತನ ರಥೋತ್ಸವ ಭಾನುವಾರ ಸಂಜೆ ಶ್ರದ್ಧಾ- ಭಕ್ತಿಯಿಂದ ನೇರವೇರಿತು.
ನೂತನ ಹೈಟೆಕ್ ಸ್ವರ್ಶದ ಜೋಡು ರಥೋತ್ಸವದ ನಿಮಿತ್ತ ಬೆಳಿಗ್ಗೆ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿಯ ಬಿಳಿ ಆನೆ ಉತ್ಸವ,ನಂತರ ಗಂಗೆ ತರುವುದು ನಂತರ ಜೋಡು ರಥಗಳ ಮಧ್ಯೆ ರಥಾಂಗ ಹೋಮ ನಡೆಯಿತು.ಹೋಮದ ನಂತರ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿಯ ಮಡಿ ತೇರು ಎಳೆಯಲಾಯಿತು.ನಂತರ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ನಾನಾ ಪೂಜಾ ವಿಧಾನಗಳು ನಡೆದವು.ನಂತರ ಭಕ್ತರು ಸರದಿಸಾಲಿನಲ್ಲಿ ನಿಂತು ಹೂ-ಕಾಯಿ ಅರ್ಪಿಸಿ ದರ್ಶನ ಪಡೆದರು.
ನಂತರ ಭಕ್ತರು ಧೀರ್ಘ ದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು.ನಂತರ ಸಂಜೆ ತಳಿರುತೋರಣ,ಅಲಂಕಾರಿಕ ಬೊಂಬೆಗಳಿಂದ ಅಲಂಕೃತಗೊಂಡ ಲಕ್ಷ್ಮಿ ನಾರಾಯಣ ಸ್ವಾಮಿ ಹಾಗೂ ಆಂಜನೇಯ ಸ್ವಾಮಿ ರಥಕ್ಕೆ ಪೂಜೆಸಲ್ಲಿಸಿ, ಸಕಲ ವಾದ್ಯ ಮೇಳದೊಂದಿಗೆ ರಥೋತ್ಸವ ನಡೆಯಿತು, ನಂತರ ನಡೆದ ಪಟ ಹರಾಜಿನಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಪಟವನ್ನು ಮಿಲಿಟರಿ ಮಂಜುನಾಥ್ ರವರು 8 ಲಕ್ಷ ರೂಪಾಯಿಗೆ ಪಡೆದುಕೊಂಡರು ನಂತರ ಶ್ರೀ ಆಂಜನೇಯ ಸ್ವಾಮಿ ಪಟವನ್ನು ಮರಿಯಮ್ಮನಹಳ್ಳಿಯ ಕಾಸ್ಲಿ ಬಾಲು ರವರು 12 ಲಕ್ಷದ 10 ಸಾವಿರ ರೂಪಾಯಿಗೆ ಪಡೆದುಕೊಂಡರು.
ರಥಕ್ಕೆ ಪೂಜೆ ಸಲ್ಲಿಸಿದ ನಂತರ ಪಾದಗಟ್ಟೆಯವರೆಗೂ ರಥಗಳು ಸಾಗುತ್ತಿದ್ದಂತೆ ಭಕ್ತರು ತೇರುಗಳಿಗೆ ಹೂ-ಹಣ್ಣು ಉತ್ತುತ್ತಿ,ದವನ, ಎಸೆದು ಪುನೀತರಾದರು.ನೂತನ ತೇರುಗಳು ಮರಳಿ ಸ್ವ ಸ್ಥಾನಕ್ಕೆ ರಥಗಳು ಬಂದು ನಿಂತ ನಂತರ ಭಕ್ತರಿಂದ ಕರತಾಡನ ನಡೆಯಿತು. ರಥೋತ್ಸವದಲ್ಲಿ ಬೆಂಗಳೂರು, ಹೊಸಪೇಟೆ,ಬಳ್ಳಾರಿ ಗಂಗಾವತಿ,ಕೊಪ್ಪಳ, ದಾವಣಗೆರೆ,ಚಿತ್ರದುರ್ಗ,ಹಾಗೂ ವಿವಿಧ ಜಿಲ್ಲೆ ತಾಲೂಕು ಹಾಗೂ ಗ್ರಾಮೀಣ ಪ್ರದೇಶದ ಜನರು ಸೇರಿದಂತೆ ವಿವಿಧ ಪಟ್ಟಣಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು,ಶಾಸಕ ಕೆ ನೇಮಿರಾಜ್ ನಾಯ್ಕ್,ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ವಿಜಯನಗರ ಎಸ್ಪಿ ಬಿಎಲ್ ಹರಿಬಾಬು, ಎಎಸ್ಪಿ ಸಲೀಂ ಪಾಷಾ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ,ಸಿಪಿಐ ವಿಕಾಸ್ ಲಮಾಣಿ,ಪಟ್ಟಣದ ಪಿಎಸ್ಐ ಮೌನೇಶ್ ರಾಥೋಡ್,ಹಾಗೂ ಬೀಬಿ ಮರಿಯಾಂಬಿ,ಅಲ್ಲದೇ ಜಿಲ್ಲೆಯ ವತಿಯಿಂದ ಡಿವೈಎಸ್ಪಿ 1 ಸಿಪಿಐ 3 ಪಿಎಸ್ಐ 8 ಮತ್ತು 350 ಪೋಲಿಸ್ ಸಿಬ್ಬಂದಿಯವರು ಬಂದೋಬಸ್ತ ಹಮ್ಮಿಕೊಂಡಿದ್ದರು.



