Sunday, August 16, 2026
Google search engine
Homeಬೆಂಗಳೂರುಜುಲೈನಲ್ಲಿ ಬೆಂಗಳೂರು ದಕ್ಷಿಣ ಸಂಪರ್ಕಿಸುವ ಹಳದಿ ಮಾರ್ಗ ಮೆಟ್ರೋ ಸಂಚಾರ ಆರಂಭ?

ಜುಲೈನಲ್ಲಿ ಬೆಂಗಳೂರು ದಕ್ಷಿಣ ಸಂಪರ್ಕಿಸುವ ಹಳದಿ ಮಾರ್ಗ ಮೆಟ್ರೋ ಸಂಚಾರ ಆರಂಭ?

ಬೆಂಗಳೂರು: ನಗರದ ಜನರ ಬಹುನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗಗಳಲ್ಲಿ ಹಳದಿ ಮಾರ್ಗ (ಯೆಲ್ಲೋ ಲೈನ್‌) ಒಂದಾಗಿದ್ದು, ದಕ್ಷಿಣ ಬೆಂಗಳೂರಿನ ವಿವಿಧ ಬಡಾವಣೆಗಳನ್ನು ವ್ಯಾಪಿಸಿರುವ ಈ ಮಾರ್ಗದ ಆರ್‌ವಿ ರಸ್ತೆ – ಬೊಮ್ಮಸಂದ್ರ ನಡುವಿನ 18.8 ಕಿ.ಮೀ ನಲ್ಲಿ 16 ನಿಲ್ದಾಣಗಳು ಬರಲಿವೆ.

ಗ್ರೀನ್‌ಲೈನ್‌ ಜತೆ ಸಂಪರ್ಕ ಹೊಂದಿರುವುದರಿಂದ ಈ ಮಾರ್ಗವು ದಕ್ಷಿಣ ಬೆಂಗಳೂರು ಜನರನ್ನು ನಗರ ಕೇಂದ್ರ ಭಾಗಕ್ಕೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ.

ಹಳದಿ ಮಾರ್ಗದ ಕಾಮಗಾರಿ ಈಗಾಗಲೇ ಪೂರ್ಣವಾಗಿದ್ದು, ರೈಲು ಸಂಚಾರ ಪ್ರಾಯೋಗಿಕ ಪರೀಕ್ಷೆಯೂ ಮುಕ್ತಾಯವಾಗಿದೆ.
ಸಂಚಾರಕ್ಕೆ ಅಗತ್ಯವಿರುವ 3 ರೈಲುಗಳ ಪೈಕಿ ಈಗ 2 ರೈಲುಗಳು ಕೂಡ ಆಗಮಿಸಿದ್ದು, ಇನ್ನೊಂದು ರೈಲು ಬಂದ ಕೂಡಲೇ ವಾಣಿಜ್ಯ ಸಂಚಾರ ಆರಂಭವಾಗಲಿದೆ.

3 ನೇ ರೈಲು ಏಪ್ರಿಲ್ ಅಂತ್ಯಕ್ಕೆ ಆಗಮಿಸಲಿದ್ದು, ಮೇನಲ್ಲಿ ಆ ರೈಲಿನ ಸಿಗ್ನಿಲಿಂಗ್‌, ತೂಕ ಸಾಮರ್ಥ್ಯ ಪರೀಕ್ಷೆ ನಡೆಸಿ ಜೂನ್‌ ಅಂತ್ಯ ಅಥವಾ ಜುಲೈನಲ್ಲಿ ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಿಸಲು ಸಿದ್ಧತೆ ನಡೆಸಲಾಗಿದೆ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರ್ ರಸ್ತೆ,ಇನ್ಫೋಸಿಸ್‌ ಫೌಂಡೇಶನ್ ಕೋನಪ್ಪನ ಅಗ್ರಹಾರ,ಎಲೆಕ್ಟ್ರಾನಿಕ್‌ ಸಿಟಿ,ಬಿರಿಟೇನ ಅಗ್ರಹಾರ,ಹೊಸ ರೋಡ್,ಕೂಡ್ಲು ಗೇಟ್ , ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್ ಬಿಟಿಎಂ ಲೇಔಟ್ ಜಯದೇವ ಆಸ್ಪತ್ರೆ,ರಾಗಿ ಗುಡ್ಡ ದೇವಸ್ಥಾನ ಆರ್‌.ವಿ (ರಾಷ್ಟ್ರೀಯ ವಿದ್ಯಾಲಯ) ರಸ್ತೆ ಬರಲಿವೆ.

ಹಸಿರು ಮಾರ್ಗ, ಗುಲಾಬಿ, ನೀಲಿ ಮಾರ್ಗಕ್ಕೆ ಹಳದಿ ಮಾರ್ಗವು ಸಂಪರ್ಕಿಸುತ್ತದೆ.ಹಳೆ ಮಾರ್ಗದ ಪ್ರಯೋಗಿಕ ಪರೀಕ್ಷೆ ಮುಕ್ತಾಯವಾಗಿ ಪ್ರಮಾಣ ಪತ್ರವೂ ಬಂದಿದೆ. ರೈಲು ಪೂರೈಕೆಗೆ ಗುತ್ತಿಗೆ ಪಡೆದಿರುವ ಕಂಪನಿಯು ಸಿಆರ್‌ಆರ್‌ಸಿ ಚೀನಾದಿಂದ ಒಂದು ರೈಲು, ಕೊಲ್ಕತ್ತಾದಿಂದ ಜನವರಿ 6 ರಂದು 2ನೇ ರೈಲನ್ನು ಕಳುಹಿಸಿ ಕೊಟ್ಟಿದೆ.

ಮೂರನೇ ರೈಲು ಏಪ್ರಿಲ್‌ ಅಂತ್ಯಕ್ಕೆ ಆಗಮಿಸಲಿದೆ.ಸಂಚಾರಕ್ಕೆ 3 ರೈಲುಗಳು ಅಗತ್ಯವಿದೆ. ಸದ್ಯ 2 ರೈಲು ಲಭ್ಯವಿದ್ದು, ಮತ್ತೊಂದು ರೈಲು ಬಂದ ಕೂಡಲೇ ವಾಣಿಜ್ಯ ಸೇವೆ ಆರಂಭವಾಗಲಿದೆ. ಅಂದಾಜು ಜೂನ್‌ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ರೈಲು ಸಂಚಾರ ಆರಂಭವಾಗುವ ಸಾಧ್ಯತೆಗಳಿವೆ.

ಬಿಎಂಆರ್‌ಸಿಎಲ್ ಕೊಲ್ಕತ್ತಾದ ಟಿಟಾಗರ್ ರೈಲ್ ಸಿಸ್ಟಮ್ಸ್‌ ಲಿಮಿಟೆಡ್‌ ಜತೆ 36 ರೈಲುಗಳಿಗೆ ಒಪ್ಪಂದ ಮಾಡಿಕೊಂಡಿದೆ. ಈ ಪೈಕಿ 15 ರೈಲುಗಳು ಹಳದಿ ಮಾರ್ಗದಲ್ಲಿ ಓಡಾಡಲಿವೆ. ಉಳಿದ 21 ರೈಲುಗಳನ್ನು ನೇರಳೆ ಮತ್ತು ಹಸಿರು ಮಾರ್ಗಕ್ಕೆಂದು ಮೀಸಲಿಡುವ ಯೋಜನೆ ಇದೆ. ಈವರೆಗೂ 2 ರೈಲುಗಳನ್ನು ಮಾತ್ರ ಪೂರೈಕೆ ಮಾಡಿದೆ. ಬಾಕಿ 34 ರೈಲು ಬರಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments