ಭಾರೀ ಮಳೆಯಿಂದಾಗಿ ನಿಯಂತ್ರಣ ತಪ್ಪಿದ ಬಸ್ ಸೇತುವೆ ಮೇಲಿಂದ ಬಿದ್ದ ಪರಿಣಾಮ 8 ಮಂದಿ ಪ್ರಯಾಣಿಕರು ಮೃತಪಟ್ಟ ಘಟನೆ ಪಂಜಾಬ್ ನಲ್ಲಿ ಸಂಭವಿಸಿದೆ.
ಬಟಿಂಡಾದಲ್ಲಿ ಶುಕ್ರವಾರ ಈ ದುರ್ಘಟನೆ ಸಂಭವಿಸಿದ್ದು, ಸೇತುವೆಗೆ ಅಡ್ಡಲಾಗಿ ಯಾವುದೇ ಸುರಕ್ಷತೆ ಇಲ್ಲದೇ ಇರುವ ಕಾರಣ ಬಸ್ ಕೆಳಗೆ ಪ್ರಪಾತಕ್ಕೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಟಿಂಡಾದಿಂದ ತಲವಾಂಡಿ ಸಾಬೊಗೆ 20 ಪ್ರಯಾಣಿಕರು ಹೊತ್ತು ಬಸ್ ಪ್ರಯಾಣಿಸುತ್ತಿತ್ತು. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಭದ್ರತಾ ಸಿಬ್ಬಂದಿ ಜೊತೆ ರಕ್ಷಣೆಗೆ ಕೈ ಜೋಡಿಸಿದ್ದಾರೆ.
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಳೆಯಿಂದ ಚಾಲಕ ಬಸ್ ನಿಯಂತ್ರಣ ಕಳೆದುಕೊಂಡನೇ ಅಥವಾ ಬೇರೆ ಯಾರ ಕಾರಣಕ್ಕೆ ಅಪಘಾತ ಸಂಭಿಸಿದೆ ಎಂದು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.