ಪತ್ನಿ ಜೊತೆ ಜಗಳದಿಂದ ಬೇಸತ್ತ ಪತ್ನಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ರಕ್ಷಿಸಲು ಹೋದ ನಾಲ್ವರು ಸೇರಿದಂತೆ 5 ಮಂದಿಯೂ ಮೃತಪಟ್ಟ ಆಘಾತಕಾರಿ ಘಟನೆ ಜಾರ್ಖಂಡ್ ನಲ್ಲಿ ಸಂಭವಿಸಿದೆ.
ಹಜಾರಿಬಾಜ್ ಜಿಲ್ಲೆಯ ಜಾರ್ಜಿ ಎಂಬಲ್ಲಿ ಪತ್ನಿ ರೂಪಾ ದೇವಿ ಜೊತೆ ಜಗಳವಾಡಿದ ಸುಂದರ್ ಕರ್ಮಾಲಿ (27) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಾವಿಗೆ ಬೈಕ್ ಡಿಕ್ಕಿ ಹೊಡೆಸಿ ಸುಂದರ್ ಕರ್ಮಾಲಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ. ಇದನ್ನು ನೋಡಿದ ಗ್ರಾಮಸ್ಥರು ಒಬ್ಬರ ಹಿಂದೆ ಒಬ್ಬರಂತೆ ನಾಲ್ವರು ರಕ್ಷಿಸಲು ಬಾವಿಗೆ ಹಾರಿದ್ದಾರೆ.
ರಕ್ಷಣೆಗೆ ಹಾರಿದ ರಾಹುಲ್ ಕರ್ಮಾಲಿ (26), ವಿನಯ್ ಕರ್ಮಾಲಿ, ಪಂಕಜ್ ಕರ್ಮಾಲಿ ಮತ್ತು ಸೂರಜ್ ಭುನಿಯಾ (24) ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವಗಳನ್ನು ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಪೊಲೀಸರು ಬಾವಿಯನ್ನು ಮುಚ್ಚಿ ಯಾರೂ ಬಳಸದಂತೆ ಎಚ್ಚರಿಕೆ ವಹಿಸಿದ್ದಾರೆ. ಅಲ್ಲದೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.