Home ತಾಜಾ ಸುದ್ದಿ ನಿರ್ದೇಶಕ ಗುರುಪ್ರಸಾದ್ ಸಾವಿಗೂ ರಾಜಕೀಯ ಬಣ್ಣ ಹಚ್ಚಿದರೇ ನಟ ಜಗ್ಗೇಶ್?

ನಿರ್ದೇಶಕ ಗುರುಪ್ರಸಾದ್ ಸಾವಿಗೂ ರಾಜಕೀಯ ಬಣ್ಣ ಹಚ್ಚಿದರೇ ನಟ ಜಗ್ಗೇಶ್?

by Editor
0 comments
jaggesh

ಸ್ಯಾಂಡಲ್ ವುಡ್ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಸುದ್ದಿಗೆ ಕನ್ನಡ ಚಿತ್ರರಂಗ ಮಾತ್ರವಲ್ಲ, ನಾಡಿನ ಜನತೆಯೂ ಬೆಚ್ಚಿಬಿದ್ದಿದ್ದಾರೆ. ವ್ಯಕ್ತಿ ಕೆಟ್ಟವನಾಗಿದ್ದರೂ ಆತನ ಬಗ್ಗೆ ಕೆಟ್ಟದಾಗಿ ಮಾತನಾಡದೇ ಶೋಕ ವ್ಯಕ್ತಪಡಿಸುವುದು ಸಂಸ್ಕೃತಿ ಹಾಗೂ ಸಜ್ಜನತೆಯ ಲಕ್ಷಣ.

ವೃತ್ತಿಜೀವನದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದಾಗ ಮಠದಂತಹ ಚಿತ್ರ ಮಾಡಿ ಕನ್ನಡ ಚಿತ್ರರಂಗದಲ್ಲಿ ಮರುಜೀವ ನೀಡಿದ ಗುರುಪ್ರಸಾದ್ ಸಾವಿನ ಬಗ್ಗೆ ನಟ ಜಗ್ಗೇಶ್ ಪ್ರತಿಕ್ರಿಯೆ ನೀಡುವ ಭರದಲ್ಲಿ ರಾಜಕೀಯ ಬಣ್ಣ ಹಚ್ಚಲು ಪ್ರಯತ್ನಿಸಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ.

ಹೌದು, ಗುರುಪ್ರಸಾದ್ ಬೆಂಗಳೂರಿನ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕೊಳೆತ ಸ್ಥಿತಿಯಲ್ಲಿ ಶವಪತ್ತೆಯಾಗಿದೆ. ಮಠ, ಡೈರಕ್ಟರ್ ಸ್ಪೆಷಲ್, ಎದ್ದೇಳು ಮಂಜುನಾಥ ಮುಂತಾದ ಚಿತ್ರಗಳನ್ನು ನೀಡಿದ್ದ ಗುರುಪ್ರಸಾದ್, ಪುನೀತ್ ರಾಜ್ ಕುಮಾರ್ ಜೊತೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕೇಳಿ ಆಘಾತವಾಯಿತು. ಆದರೆ ಸಾಲದ ಕಾಟ, ಮಾನಸಿಕ ಒತ್ತಡ, ಹತಾಶೆ ಎಲ್ಲಾ ಅವರೇ ಮಾಡಿಕೊಂಡಿದ್ದು, ದುಶ್ಚಟದ ದಾಸನಾಗಿ ವ್ಯಕ್ತಿ ಕೆಟ್ಟ ದಾರಿ ತುಳಿದಾಗ ಕೊನೆಗೆ ಅವರ ಜೀವನ ಹೀಗೆ ಅಂತ್ಯವಾಗುತ್ತೆ. ಆದ್ದರಿಂದ ಎಲ್ಲರಿಗೂ ನಾನು ಹೇಳುವುದು ಏನೆಂದರೆ ದುಶ್ಚಟಗಳಿಂದ ದೂರ ಇರ್ರಿ ಎಂದು ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.

banner

ಇತ್ತೀಚಿನ ದಿನಗಳಲ್ಲಿ ನನಗೆ ಆತನ ಬಗ್ಗೆ ಗೊತ್ತಾಗಿದ್ದು ಏನೆಂದರೆ, ಆತ ಬಿಜೆಪಿ ವಿರೋಧಿ ಅಂತ. ಗುರುಪ್ರಸಾದ್ ಎಡಪಂಥೀಯ ಚಿಂತಕ. ‘ಇವನ ಮಾನ ಮರ್ಯಾದೆಯೆಲ್ಲ ಹೆಂಗೆ ಹರಾಜು ಹಾಕ್ತೀನಿ ನೋಡುತ್ತಾ ಇರಿ’ ಎಂದು ಅವನು ನನ್ನ ಬಗ್ಗೆ ಹೇಳಿಕೊಂಡಿದ್ದನಂತೆ. ಅದು ನನಗೆ ಗೊತ್ತಾಗಿಹೋಯ್ತು. ನಾನು ತುಂಬಾ ಭಯಭೀತನಾದೆ. ಹಾಗಾಗಿ ನನಗೆ ಸಿನಿಮಾ ತೋರಿಸು ಅಂತ ರಂಗನಾಯಕ ಬಿಡುಗಡೆ ಮುನ್ನವೇ ಕೇಳಿದೆ. ಆದರೆ ಅವನು ತೋರಿಸಲಿಲ್ಲ.

ಸಿನಿಮಾ ಚಿತ್ರೀಕರಣದ ವೇಳೆ ನನಗೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದ. ಆದರೆ ನಾನು ಸುಮ್ಮನಿದ್ದೆ. ಸಿನಿಮಾ ರಿಲೀಸ್​ ಆದ ಬಳಿಕ ನನ್ನ ಜೀವನದಲ್ಲೇ ಆಗದೇ ಇರುವಷ್ಟು ಅವಮಾನ ಆ ಒಂದು ಸಿನಿಮಾದಿಂದ ಆಯಿತು. ಚಿತ್ರದಲ್ಲಿ ಡೈಲಾಗ್ ಮೂಲಕ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಬೈಯ್ಯುತ್ತಿದ್ದ. ಹಾಡಿನಲ್ಲಿ ಕತ್ತೆ ಧ್ವನಿ, ಡೈಲಾಗ್ ಇರದೇ ಇದ್ದರೂ ಸೇರಿಸಿದ. ಶೂಟಿಂಗ್ ವೇಳೆ ಕತ್ತೆ ಬೇಕು ಅಂದಿದ್ದಕ್ಕೆ 30-40 ಕತ್ತೆ ತರಿಸಿದ್ದ ವ್ಯಕ್ತಿ ಬಳಿ 40 ಲಕ್ಷ ಸಾಲ ಮಾಡಿದ್ದರು. ಆತ ಕೂಡ ಕೋರ್ಟ್ ಕೇಸ್ ಹಾಕಿದ್ದಾನೆ ಎಂದು ಅವರು ವಿವರಿಸಿದರು.

ನನ್ನ ಬಾಯಿಂದ ಮೀಟೂ ಅಂತೆಲ್ಲಾ ಹೇಳಿಸಿದ. ನಿರ್ದೇಶಕ ಹೇಳಿದಂತೆ ಕೇಳಬೇಕು ನಾವು. ಆದರೆ ನಾನು ಹೇಳಿದೆ ಅಂತ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದರು ಎಂದು ಜಗ್ಗೇಶ್ ಹೇಳಿದರು.

ಪರಿಚಯ ಆದ ಮೊದಲು ಗುರುಪ್ರಸಾದ್ ಪುಸ್ತಕಗಳ ಜೊತೆ ಬರುತ್ತಿದ್ದ. ಇತ್ತೀಚೆಗೆ 6 ಬಾಟಲಿಗಳ ಜೊತೆ ಬರುತ್ತಿದ್ದ. ಸುಂದರ ಹೆಂಡತಿ ಅರುಂಧತಿ ಜೊತೆ ಮದುವೆ ಆಗಿ ಮಗಳು ಇದ್ದಾಳೆ. ಅವರಿಬ್ಬರು ಯೋಗ ಪಟುಗಳು. ಅವರಿಗೆ ವಿಚ್ಛೇದನ ನೀಡಿ ಸಿನಿಮಾ ಪಾತ್ರಕ್ಕೆ ಬಂದಿದ್ದ ಮತ್ತೊಬ್ಬಳನ್ನು ಮದುವೆ ಆಗಿದ್ದಾನೆ. ಈಗ ಏನೋ ರಕ್ತ ಎಲ್ಲಾ ಬಂದಿದೆಯಂತೆ. ನೋಡೋಕೂ ಆಗಲ್ಲವಂತೆ ಎಂದು ಜಗ್ಗೇಶ್ ಹೇಳಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಚಿಕ್ಕಮಗಳೂರು: ಇಬ್ಬರು ಮಕ್ಕಳ ಎದುರೇ ಪ್ರಿಯಕರನಿಂದ ಕೊಲೆಯಾದ ಗೃಹಿಣಿ! ಬಂಡುಕೋರರ ವಶಕ್ಕೆ ಡಾಮಸ್ಕೊ: ಸಿರಿಯಾ ಅಧ್ಯಕ್ಷ ಅಸ್ಸಾದ್ ಪರಾರಿ! 2ನೇ ಟೆಸ್ಟ್: ಆಸ್ಟ್ರೇಲಿಯಾ 10 ವಿಕೆಟ್ ಜಯಭೇರಿ, ಸರಣಿ 1-1ರಿಂದ ಸಮ ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಸುಭಾಷ್ ಘಾಯ್ ಆಸ್ಪತ್ರೆಗೆ ದಾಖಲು! ಶೋಕಾಸ್ ನೋಟಿಸ್‍ಗೆ ಯತ್ನಾಳ್ ಉತ್ತರ ಗಮನಿಸಿ ಮುಂದಿನ ನಿರ್ಧಾರ: ರಾಧಾಮೋಹನ್ ದಾಸ್ ಅಗ್ರವಾಲ್ ಕಿದ್ವಾಯಿಯಲ್ಲಿ ಒಂದೇ 24 ಲಕ್ಷ ಆರ್ ಟಿಪಿಸಿಆರ್ ಪರೀಕ್ಷೆ, 146 ಕೋಟಿ ಬಿಲ್: ಡಿಸಿಎಂ ಡಿಕೆ ಶಿವಕುಮಾರ್ ಶ್ರೀರಂಗ ಕುಡಿಯವ ನೀರು ಪೂರೈಸುವ ಯೋಜನೆ 2026ಕ್ಕೆ ಪೂರ್ಣ: ರಾಜ್ಯ ಸರ್ಕಾರ 2ನೇ ಟೆಸ್ಟ್: ಸೋಲಿನ ಸುಳಿಯಲ್ಲಿ ಭಾರತ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆ ಇಲ್ಲ: ಬಿಜೆಪಿ ಕೋರ್ ಸಮಿತಿ ಸಭೆಯಲ್ಲಿ ತೀರ್ಮಾನ 2nd Test: ಆಸ್ಟ್ರೇಲಿಯಾಗೆ ಹೆಡ್ ಶತಕದ ಬಲ: ಭಾರತಕ್ಕೆ 157 ರನ್ ಹಿನ್ನಡೆ