Monday, September 16, 2024
Google search engine
Homeತಾಜಾ ಸುದ್ದಿರಾಜ್ಯದ 1.5 ದಶಲಕ್ಷ ಮನೆಗಳಿಗೆ ವೈಫೈ ಸೇವೆ ವಿಸ್ತರಿಸಿದ ಏರ್‌ಟೆಲ್ !

ರಾಜ್ಯದ 1.5 ದಶಲಕ್ಷ ಮನೆಗಳಿಗೆ ವೈಫೈ ಸೇವೆ ವಿಸ್ತರಿಸಿದ ಏರ್‌ಟೆಲ್ !

ಭಾರತದ ಮಂಚೂಣಿ ದೂರಸಂಪರ್ಕ ಸೇವಾ ಪೂರೈಕೆದಾರರಾದ ಭಾರತಿ ಏರ್‌ಟೆಲ್ (ಏರ್‌ಟೆಲ್), ಇಂದು ತನ್ನ ವೈಫೈ ಸೇವೆಗಳನ್ನು ಕರ್ನಾಟಕದಲ್ಲಿ ಹೆಚ್ಚುವರಿಯಾಗಿ 1.5 ದಶಲಕ್ಷ ಹೊಸ ಮನೆಗಳಿಗೆ ವಿಸ್ತರಿಸಿದೆ ಎಂದು ಪ್ರಕಟಿಸಿದೆ.

ಏರ್‌ಟೆಲ್ ವೈಫೈ ನೊಂದಿಗೆ, ಗ್ರಾಹಕರು ಕೇವಲ ಅತ್ಯಧಿಕ ವೇಗದ ವಿಶ್ವಾಸಾರ್ಹ ವೈರ್ಲೆಸ್ ಇಂಟರ್ನೆಟ್ ಸೇವೆಯನ್ನು ಮಾತ್ರ ಪಡೆಯದೆ ಅನಿಮಿತ ಸ್ಟ್ರೀಮಿಂಗ್ ಅವಕಾಶ, 20ಕ್ಕೂ ಅಧಿಕ ಓಟಿಟಿ ಸೇವೆಗಳು ಮತ್ತು 350ಕ್ಕೂ ಅಧಿಕ ಟಿವಿ ಚಾನೆಲ್ ಗಳನ್ನು ಸಹ ವೀಕ್ಷಿಸಿ ಆನಂದಿಸಬಹುದು.

ಈ ಕುರಿತು ಮಾತನಾಡಿದ ಭಾರತಿ ಏರ್‌ಟೆಲ್ ಕರ್ನಾಟಕದ ಸಿಇಒ ವಿವೇಕ್ ಮೆಹೆಂದಿರತ್ತ, ಏರ್‌ಟೆಲ್ ವೈಫೈ ಇಂದು ಕರ್ನಾಟಕದ ಪ್ರತಿಯೊಂದು ಮೂಲೆಯನ್ನು ಸೇರಿದೆ ಎಂದು ಹೇಳಲು ನನಗೆ ಬಹಳ ಸಂತೋಷವಾಗುತ್ತಿದೆ. ಏರ್‌ಟೆಲ್ ವೈಫೈ ನೊಂದಿಗೆ ಗ್ರಾಹಕರು ಈಗ 20ಕ್ಕೂ ಅಧಿಕ ಓಟಿಟಿಗಳು, 350ಕ್ಕೂ ಅಧಿಕ ಟಿವಿ ಚಾನೆಲ್ ಗಳನ್ನು ಒಳಗೊಂಡಂತೆ ವಿಸ್ತೃತ ಶ್ರೇಣಿಯ ಮನೋರಂಜನಾ ಆಯ್ಕೆಗಳನ್ನು ಅನ್ಲಾಕ್ ಮಾಡಬಹುದು.

ಈ ವಿಶ್ವಾಸಾರ್ಹ ಅತ್ಯಧಿಕ ವೇಗದ ವೈರ್ಲೆಸ್ ವೈಫೈ ಸೇವೆಗಳನ್ನು ಅವರು ಪ್ರತಿ ತಿಂಗಳು ರೂ. 699ರಿಂದ ಆರಂಭವಾಗುವ ಅಗ್ಗದ ಟಾರಿಫ್ ನೊಂದಿಗೆ ಪಡೆಯಬಹುದು. ಈ ಕೊಡುಗೆಯಿಂದ ಗ್ರಾಹಕರು ತಡೆರಹಿತ ಮನೋರಂಜನೆಯನ್ನು ಆನಂದಿಸುತ್ತಾರೆ ಎಂದು ಭಾವಿಸುತ್ತೇನೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments