Saturday, May 18, 2024
Google search engine
Homeಕ್ರೀಡೆಆರ್ ಸಿಬಿ- ಚೆನ್ನೈ ನಡುವಣ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬೆಲೆ ಕನಿಷ್ಠ 1700 ರೂ.!

ಆರ್ ಸಿಬಿ- ಚೆನ್ನೈ ನಡುವಣ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬೆಲೆ ಕನಿಷ್ಠ 1700 ರೂ.!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಐಪಿಎಲ್ 2024ರ ಟಿ-20 ಟೂರ್ನಿಯ ಉದ್ಘಾಟನಾ ಪಂದ್ಯದ ಟಿಕೆಟ್ ದರ ಕನಿಷ್ಠ 1700 ರೂ. ನಿಗದಿಪಡಿಸಲಾಗಿದೆ.

ಚೆನ್ನೈನ ಚೆಪಾಕ್ ಮೈದಾನದಲ್ಲಿ ಪ್ರತಿಷ್ಠಿತ ತಂಡಗಳ ನಡುವಿನ ಪಂದ್ಯದ ಟಿಕೆಟ್ ಮಾರಾಟ ಆನ್ ಲೈನ್ ನಲ್ಲಿ  ಮಾರ್ಚ್ 18, ಸೋಮವಾರದಂದು ರಾತ್ರಿ 9.30ರಿಂದ ಆರಂಭಗೊಳ್ಳಲಿದೆ.

ಮಾರ್ಚ್ 22ರಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಆತಿಥ್ಯದಲ್ಲಿ ನಡೆಯುವ ಪಂದ್ಯದಲ್ಲಿ ಆರ್ ಸಿಬಿ ಆಡಲಿದ್ದಾರೆ.

ಚೆನ್ನೈ-ಆರ್ ಸಿಬಿ ಪಂದ್ಯದ ಟಿಕೆಟ್ ದರ ಕನಿಷ್ಠ 1700 ರೂ. ಆಗಿದ್ದು, ನಂತರದ ಬೆಲೆ 4000 ರೂ. ಹಾಗೂ ಟೆರೆಸ್ ಟಿಕೆಟ್ ಗರಿಷ್ಠ 7500 ರೂ. ಆಗಿದೆ.

ಟಿಕೆಟ್ ಪ್ರತಿಯೊಬ್ಬರಿಗೆ ಗರಿಷ್ಠ 2 ಟಿಕೆಟ್ ಮಾತ್ರ ಮಾರಾಟ ಮಾಡಲಾಗುವುದು. ಉದ್ಘಾಟನಾ ಪಂದ್ಯದ ದಿನ ಮೈದಾನ ಪ್ರವೇಶಕ್ಕೆ ಸಂಜೆ 4.30ರಿಂದ ತೆರೆಯಲಾಗುವುದು ಎಂದು ಚೆನ್ನೈ ಕ್ರಿಕೆಟ್ ಸಂಸ್ಥೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments