Saturday, July 6, 2024
Google search engine
Homeತಾಜಾ ಸುದ್ದಿಅಮೆರಿಕದ ಸೇತುವೆ ಕುಸಿದು 6 ಮಂದಿ ಸಾವು, ಹಡಗಿನಲ್ಲಿದ್ದ 23 ಭಾರತೀಯ ಸಿಬ್ಬಂದಿ ಪಾರು

ಅಮೆರಿಕದ ಸೇತುವೆ ಕುಸಿದು 6 ಮಂದಿ ಸಾವು, ಹಡಗಿನಲ್ಲಿದ್ದ 23 ಭಾರತೀಯ ಸಿಬ್ಬಂದಿ ಪಾರು

ಸರಕು ಸಾಗಾಣೆ ಹಡಗು ಡಿಕ್ಕಿ ಹೊಡೆದಿದ್ದರಿಂದ ಅಮೆರಿಕದ ಪ್ರತಿಷ್ಠಿತ ಸೇತುವೆ ಕುಸಿದುಬಿದ್ದಿತ್ತು. ಇದರಿಂದ ಮೃತಪಟ್ಟವರ ಸಂಖ್ಯೆ 6ಕ್ಕೇರಿದೆ.

ಅಮೆರಿಕದ ಬಲ್ಟಿಮೋರ್ ಎಂಬಲ್ಲಿ ಇರುವ ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಡ್ಜ್ ಕುಸಿದು ಬಿದ್ದಿದ್ದು, ಹಡಗಿನಲ್ಲಿದ್ದ ಎಲ್ಲಾ 23 ಸಿಬ್ಬಂದಿ ಭಾರತೀಯರಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ.

ಸಿಂಗಾಪುರ ಮೂಲದ ದಾಲಿ ಹೆಸರಿನ ಸರಕು ಸಾಗಾಣೆ ಹಡಗು ಡಿಕ್ಕಿ ಹೊಡೆದಿದ್ದರಿಂದ ಸೇತುವೆ ಕುಸಿದು ಬಿದ್ದಿತ್ತು. ಆದರೆ ಹಡಗಿನಲ್ಲಿದ್ದ ಸಿಬ್ಬಂದಿ ಸಮಯಪ್ರಜ್ಞೆ ತೋರಿದ್ದರಿಂದ ತಕ್ಷಣ ರಕ್ಷಣಾ ಕಾರ್ಯ ನಡೆಸಿ ಹೆಚ್ಚಿನ ದುರಂತವನ್ನು ತಪ್ಪಿಸಲಾಗಿದೆ.

ಸೇತುವೆ ಕುಸಿದಿದ್ದರಿಂದ ನಾಪತ್ತೆಯಾಗಿದ್ದ 6 ಮಂದಿ ಸೇತುವೆ ದುರಸ್ತಿ ಕೆಲಸ ಮಾಡುತ್ತಿದ್ದವರು. ಇವರೆಲ್ಲರೂ ಮೃತಪಟ್ಟಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೈನ್ ತಿಳಿಸಿದ್ದು, ಸಮಯಪ್ರಜ್ಞೆ ತೋರಿದ ಭಾರತೀಯ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments