Friday, May 17, 2024
Google search engine
Homeತಾಜಾ ಸುದ್ದಿಮರಳುಗಾಡು ದುಬೈನಲ್ಲಿ ಮತ್ತೆ ಮಳೆಯ ಅಬ್ಬರ: ವಿಮಾನ ಸಂಚಾರ ಅಸ್ತವ್ಯಸ್ತ!

ಮರಳುಗಾಡು ದುಬೈನಲ್ಲಿ ಮತ್ತೆ ಮಳೆಯ ಅಬ್ಬರ: ವಿಮಾನ ಸಂಚಾರ ಅಸ್ತವ್ಯಸ್ತ!

ಮರಳುಗಾಡು ದುಬೈ ಮತ್ತು ಅಬುಧಾಬಿಯಲ್ಲಿ ಗುರುವಾರ ಮತ್ತೆ ಭಾರೀ ಮಳೆಯಾಗಿದ್ದು, ಜನ ಜೀವನ ಹಾಗೂ ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಇತ್ತೀಚೆಗಷ್ಟೇ ದುಬೈ ಸೇರಿದಂತೆ ಅರಬ್ ದೇಶಗಳಲ್ಲಿ ದಾಖಲೆ ಮಳೆಯಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಇದೀಗ ಗುರುವಾರ ಮತ್ತೊಮ್ಮೆ ಭಾರೀ ಮಳೆಯಾಗಿ ಅಚ್ಚರಿ ಮೂಡಿಸಿದೆ.

ಭಾರೀ ಮಳೆಯಿಂದಾಗಿ ದುಬೈನ 5 ವಿಮಾನಗಳು ತಡವಾಗಿ ಆಗಮಿಸಲಿದ್ದರೆ, 9 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಅಬುಧಾಬಿಯಲ್ಲೂ ಹಲವಾರು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಾರೀ ಗುಡುಗು-ಸಿಡಿಲು ಸಹಿತ ಮಳೆಯಾಗಿದೆ. ದೇಶದ ಬಹುತೇಕ ಕಡೆ ಮಳೆಯಾಗುವ ಸಾಧ್ಯತೆ ಇದ್ದು, ದಟ್ಟವಾದ ಮೋಡ ಕವಿದ ವಾತಾವರಣ ಇದೆ. ಆದ್ದರಿಂದ ಜನರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments