Monday, October 21, 2024
Google search engine
Homeತಾಜಾ ಸುದ್ದಿದೇಶದ 10 ಕಡೆ ಪರಮಾಣು ವಿದ್ಯುತ್ ಸ್ಥಾವರ ಕಾರ್ಯಾರಂಭಕ್ಕೆ ಕೇಂದ್ರ ತಯಾರಿ!

ದೇಶದ 10 ಕಡೆ ಪರಮಾಣು ವಿದ್ಯುತ್ ಸ್ಥಾವರ ಕಾರ್ಯಾರಂಭಕ್ಕೆ ಕೇಂದ್ರ ತಯಾರಿ!

ದೇಶದಲ್ಲಿ ಕನಿಷ್ಠ 10 ಪರಮಾಣು ಸ್ಥಾವರ ಸ್ಥಾಪಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಗುಜರಾತ್ ನಲ್ಲಿ ಕನಿಷ್ಠ 2 ಪರಮಾಣು ಸ್ಥಾವರ ವಿದ್ಯುತ್ ವಾಣಿಜ್ಯ ಬಳಕೆಗೆ ಉತ್ಪಾದನೆ ಆರಂಭಿಸಿವೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.

ಗುಜರಾತ್, ರಾಜಸ್ಥಾನ್, ಮತ್ತು ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪರಮಾಣು ಸ್ಥಾವರ ಸ್ಥಾಪನೆ ಮಾಡಲಾಗುತ್ತಿದೆ. 700 ಮೆ.ವ್ಯಾ. ಸಾಮರ್ಥ್ಯದ ಸ್ಥಾವರಗಳು ಮುಂದಿನ ಕೆಲವು ವರ್ಷಗಳಲ್ಲಿ ಕಾರ್ಯಾರಂಭಿಸಲಿವೆ ಎಂದು ಸಮಿತಿ ಹೇಳಿದೆ.

ಹವಾಮಾನ ವೈಪರಿತ್ಯ ಕುರಿತು ಪರಿಸರ, ಅರಣ್ಯ ಸಂಸದೀಯ ಸಮಿತಿ ಚರ್ಚೆಯ ವೇಳೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ ಈ ವಿವರಗಳನ್ನು ನೀಡಿದೆ.

ಗುಜರಾತ್ ನ ಕಾರ್ಕಾಪರ್ ನಲ್ಲಿ ಎರಡು ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲಾಗುತ್ತಿದೆ. 2007ರಲ್ಲಿ ನ್ಯೂಕ್ಲಿಯರ್ ರಿಯಾಕ್ಟರ್ ಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, 2010ರಲ್ಲಿ ಕಾಮಗಾರಿಗಳು ಆರಂಭವಾಗಿದ್ದವು. ಇದೀಗ ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸಲಾಗುತ್ತಿದೆ ಎಂದು ಸಭೆಯ ನಂತರ ಸಂಸದೀಯ ಸಮಿತಿ ಸದಸ್ಯರಲ್ಲಿ ಒಬ್ಬರಾಗಿರುವ ಕಾಂಗ್ರೆಸ್ ಮುಖಂಡ ಜೈರೂಮ್ ರಮೇಶ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments