Wednesday, October 30, 2024
Google search engine
Homeತಾಜಾ ಸುದ್ದಿ11 ಮಕ್ಕಳು, ಅಮ್ಮಂದಿರು ಒಂದೇ ಕಡೆ ಇರಲು 35 ದಶಲಕ್ಷ ಡಾಲರ್ ಬಂಗಲೆ ಖರೀದಿಸಿದ ಇಲಾನ್...

11 ಮಕ್ಕಳು, ಅಮ್ಮಂದಿರು ಒಂದೇ ಕಡೆ ಇರಲು 35 ದಶಲಕ್ಷ ಡಾಲರ್ ಬಂಗಲೆ ಖರೀದಿಸಿದ ಇಲಾನ್ ಮಸ್ಕ್!

ತನ್ನ 11 ಮಕ್ಕಳು ಮತ್ತು ಅವರ ತಾಯಂದಿರು ಒಂದೇ ಕಡೆ ವಾಸಿಸಲು ಅನುಕೂಲವಾಗುವಂತೆ ವಿಶ್ವದ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ 35 ದಶಲಕ್ಷ ಡಾಲರ್ ಮೌಲ್ಯದ ಬೃಹತ್ ಬಂಗಲೆಯನ್ನು ಖರೀದಿಸಿದ್ದಾರೆ.

ಅಮೆರಿಕದ ಟೆಕ್ಸಾಸ್ ನ ಆಸ್ಟೀನ್ ನಲ್ಲಿ 14,400 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ 6 ಬೆಡ್ ರೂಮಿನ ಬಂಗಲೆಯನ್ನು ಇಲಾನ್ ಮಸ್ಕ್ ಖರೀದಿಸಿದ್ದಾರೆ.

ಮಕ್ಕಳು ಒಂದೇ ಕಡೆ ಬೆಳೆಯುವುದರಿಂದ ಪರಸ್ಪರ ಪರಿಚಯ ಆಗುತ್ತಾರೆ. ಇದರಿಂದ ಮಕ್ಕಳ ನಡುವೆ ನಂಟು ಬೆಳೆಯುತ್ತದೆ ಎಂಬ ಕಾರಣಕ್ಕೆ ಇಲಾನ್ ಮಸ್ಕ್ ತನ್ನ ಟೆಕ್ಸಾಸ್ ಕಚೇರಿಯಿಂದ 10 ನಿಮಿಷ ಪ್ರಯಾಣದ ದೂರದಲ್ಲಿರುವ ಪ್ರದೇಶದಲ್ಲಿ ಬಂಗಲೆ ಖರೀದಿಸಿದ್ದಾರೆ.

ಇಲಾನ್ ಮಸ್ಕ್ 2002ರಲ್ಲಿ ನಾನು 12 ಮಕ್ಕಳ ತಂದೆಯಾಗಬೇಕು ಎಂದು ಹೇಳಿಕೊಂಡಿದ್ದರು. ಮಾಜಿ ಪತ್ನಿ ಜಸ್ಟಿನ್ ಮಸ್ಕ್ ಗೆ ಮೊದಲ ಮಗು ಜನಿಸಿದಾಗ ಆಗುವ ಸೋಂಕಿನಿಂದ 10 ತಿಂಗಳಿಗೆ ಮೃತಪಟ್ಟಿತ್ತು. 2008ರಲ್ಲಿ ವಿಚ್ಛೇದನ ಪಡೆಯುವ ಮುನ್ನ ದಂಪತಿಗೆ 5 ಮಕ್ಕಳು ಆಗಿದ್ದವು. ಒಂದು ಅವಳಿ ಜವಳಿ ಆದರೆ ಮತ್ತೊಂದು ತ್ರಿವಳಿ ಆಗಿದ್ದವು.

ನಂತರ ಇಲಾನ್ ಮಸ್ಕ್ ಬ್ರಿಟಿಷ್ ನಟಿ ತಲ್ಲುಹಾ ರಿಲೇ ಅವರನ್ನು 2 ಬಾರಿ ಮದುವೆ ಆಗಿ 2 ಬಾರಿ ವಿಚ್ಛೇದನ ಪಡೆದರು. ಆದರೆ ಇಬ್ಬರಿಗೆ ಮಕ್ಕಳು ಆಗಲಿಲ್ಲ.

2020 ಮತ್ತು 2020ರ ನಡುವೆ ಇಲಾನ್ ಮಸ್ಕ್ ಸಂಗೀತಗಾರ್ತಿ ಕ್ಲಾರಿ ಬೌಚರ್ ಅವರನ್ನು ಮದುವೆ ಆಗಿದ್ದು, ಮಗುವಿಗೆ ಎಕ್ಸ್ ಎಂದು ನಾಮಕರಣ ಮಾಡಿದ್ದರು. 2021ರಲ್ಲಿ ಇಲಾನ್ ಮಸ್ಕ್ ರಹಸ್ಯವಾಗಿ ಅವಳಿ ಮಕ್ಕಳನ್ನು ಶಿವಾನ್ ಜಿಲ್ಲಿಸ್ ಅವರಿಂದ ಪಡೆದಿದ್ದರು.

ಇಲಾನ್ ಮಸ್ಕ್ ಅವರ ನ್ಯೂರೋಲಿಂಕ್ ಸಂಸ್ಥೆಯಲ್ಲಿ ಶಿವಾನ್ ಜಿಲ್ಲಿಸ್ ಕಾರ್ಯಕಾರಿ ಸದಸ್ಯೆಯಾಗಿ ಕೆಲಸ ಮಾಡುತ್ತಿದ್ದು, ಇಲಾನ್ ಮಸ್ಕ್ ಖರೀದಿಸಿದ ಬಂಗಲೆಗೆ ಮೊದಲು ಹೋಗಿ ವಾಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments