Wednesday, October 16, 2024
Google search engine
Homeತಂತ್ರಜ್ಞಾನವಿಂಕ್ ಸ್ಟುಡಿಯೋ ಆರಂಭಿಸಿದ ಎರಡು ವರ್ಷಗಳಲ್ಲಿ ಮೈಲಿಗಲ್ಲು ಸಾಧನೆ

ವಿಂಕ್ ಸ್ಟುಡಿಯೋ ಆರಂಭಿಸಿದ ಎರಡು ವರ್ಷಗಳಲ್ಲಿ ಮೈಲಿಗಲ್ಲು ಸಾಧನೆ

ಭಾರತದ ನಂಬರ್ ಒನ್ ಮ್ಯೂಸಿಕ್ ಸ್ಟ್ರೀಮಿಂಗ್ ಆಪ್ ಆಗಿರುವ ವಿಂಕ್ ಮ್ಯೂಸಿಕ್ ತನ್ನ ಡೌನ್ಲೋಡ್ಗಳು ಮತ್ತು ದಿನನಿತ್ಯದ ಸಕ್ರಿಯ ಬಳಕೆದಾರರೊಂದಿಗೆ ರಾಷ್ಟ್ರವ್ಯಾಪಿ ಪ್ರೇಕ್ಷಕರಿಗೆ ತಮ್ಮ ನವೀನ ಹಾಡುಗಳನ್ನು ಬಿಡುಗಡೆಗೊಳಿಸುವ ವೇದಿಕೆಯಾದ ವಿಂಕ್ ಸ್ಟುಡಿಯೋದ ಸ್ವತಂತ್ರ ಆರ್ಟಿಸ್ಟ್ ಗಳ ಹಾಡಿಗೆ ಉದ್ಯಮ-ಮಂಚೂಣಿ ಮೈಲಿಗಲ್ಲು 1.7 ಕ್ಕಿಂತ ಹೆಚ್ಚಿನ ಸ್ಟ್ರೀಮ್ ಮೈಲಿಗಲ್ಲನ್ನು ಸಾಧಿಸಿದೆ.

ವಿಂಕ್ ಸ್ಟುಡಿಯೋ ಆರಂಭದ 2 ವರ್ಷಗಳಲ್ಲಿಯೇ ಈ ಹಾಡುಗಳು ಬಹಳ ಗಮನಾರ್ಹವಾಗಿ ಈ ಮೈಲಿಗಲ್ಲನ್ನು ದಾಟಿದ್ದು, ಸ್ವತಂತ್ರ ಹಾಡುಗಳನ್ನು ಉತ್ತೇಜಿಸುವ ವಿಂಕ್ ನ ಬದ್ಧತೆಯನ್ನು ಎತ್ತಿಹಿಡಿಯುತ್ತದೆ ಮತ್ತು ಪ್ರತಿಭಾವಂತ ಹಾಗೂ ಮುಂಬರುವ ಕಲಾವಿದರಿಗೆ ಮನ್ನಣೆಯನ್ನು ನೀಡುತ್ತದೆ.

ಭಾರತಿ ಏರ್ಟೆಲ್ ನ ಪ್ರಮುಖ ಮಾರ್ಕೆಟಿಂಗ್ ಅಧಿಕಾರಿಯಾಗಿರುವ ಅಮಿತ್ ತ್ರಿಪಾಠಿ ಅವರು ಮಾತನಾಡಿ, “ನಾವು ಹೊಸ, ಮುಂಬರುವ ಕಲಾವಿದರು ತಮ್ಮ ಸಂಗೀತಕ್ಕಾಗಿ ಆದಾಯಗಳಿಸುವುದಕ್ಕಾಗಿ ವೇದಿಕೆಯನ್ನು ಕೊಡಲು ವಿಂಕ್ ಸ್ಟುಡಿಯೋ ಆರಂಭಿಸಿದೆವು.

ಇದರೊಂದಿಗೆ ನಾವು ನಮ್ಮ ಗ್ರಾಹಕರಿಗಾಗಿಯೂ ಸಹ ಆಯ್ಕೆ ಮಾಡಲು ಒಂದು ದೊಡ್ಡ ಸಂಗೀತ ಸಂಗ್ರಹಾಲಯವನ್ನೇ ನೀಡಿದ್ದೇವೆ. ಈ ಹಾಡುಗಳಿಗಾಗಿ 1.7 ಮಿಲಿಯನ್ ಸ್ಟ್ರೇಮ್ಸ್ ನ ಮೂಲಕ ನಮ್ಮ ಪ್ರೇಕ್ಷಕರು ನಮ್ಮ ಕಂಟೆಂಟ್ ಅನ್ನು ಎಷ್ಟು ಆನಂದಿಸುತ್ತಾರೆ ಎಂಬುದನ್ನು ತೋರಿಸುತ್ತದೆ.

ಎರಡು ವರ್ಷಗಳ ಕಡಿಮೆ ಅವಧಿಯಲ್ಲಿಯೇ, ವಿಂಕ್ ಮೇಲೆ ನಾವು ಎಲ್ಲಾ ಭಾಷೆಗಳಿಗೆ ಆದ್ಯತೆ ನೀಡುತ್ತಿರುವ ಕಾರಣ ದೇಶಾದ್ಯಂತ ಉತ್ತರದಿಂದ ದಕ್ಷಿಣದವರೆಗೂ ಕಲಾವಿದರನ್ನು ಸೈನಿಂಗ್ ಮಾಡಿಕೊಳ್ಳುವಂತಹ ಜನಪ್ರಿಯತೆಯನ್ನು ವಿಂಕ್ ಸ್ಟುಡಿಯೋ ಹೊಂದಿದೆ. ಸಂಗೀತದಲ್ಲಿ ವೃತ್ತಿಯನ್ನು ನಿರ್ಮಿಸಲು ಹೆಚ್ಚಿನ ಕಲಾವಿದರಿಗೆ ವೈವಿಧ್ಯತೆ ನೀಡುವುದನ್ನು ಮುಂದುವರೆಸುತ್ತೇವೆ.” ಎಂದರು.

ದೇಶದಲ್ಲಿ ಸಂಗೀತ ಪ್ರತಿಭೆಯನ್ನು ಗುರುತಿಸುವ ಉದ್ದೇಶದಿಂದ ವಿಂಕ್ ಸ್ಟುಡಿಯೋ ಪಯಣ ಆರಂಭವಾಯಿತು ಮತ್ತು ಇದು ಸಂಗೀತ ಉದ್ಯಮದಲ್ಲಿ ಸುಸ್ಥಿರ ವೃತ್ತಿಜೀವನವನ್ನು ನಿರ್ಮಿಸಲು ಕಲಾವಿದರನ್ನು ಸಕ್ರಿಯಗೊಳಿಸುತ್ತದೆ.

ಮೊದಲ ರೀತಿಯ ಕಲಾವಿದರ ಬೆಳವಣಿಗೆಯ ವೇದಿಕೆಯಾಗಿರುವ ವಿಂಕ್ ಸ್ಟುಡಿಯೋ ವೈಯಕ್ತೀಕರಿಸಿದ ಮಾರ್ಗದರ್ಶನ, ವ್ಯಾಪಕ ವಿತರಣೆ ಮತ್ತು ಹಣಗಳಿಕೆಯ ಅವಕಾಶಗಳ ಮೂಲಕ ಭಾರತದಲ್ಲಿ ಕಲಾವಿದರ ಬೆಂಬಲವನ್ನು ಕ್ರಾಂತಿಗೊಳಿಸಿದೆ.

ವಿಂಕ್ ಸ್ಟುಡಿಯೋ ಕಲಾವಿದರಿಗೆ ಇತರ ಸಂಗೀತ ಸಂಸ್ಥೆಗಳೊಂದಿಗೆ ಸಹಯೋಗಗಳು, ವೆಬ್ ಸರಣಿಗಾಗಿ ಹಿನ್ನೆಲೆ ಗಾಯನಗಳು, ಒಟಿಟಿ, ನೇರ ಕಾರ್ಯಕ್ರಮಗಳು ಮತ್ತು ಇತರ ಅವಕಾಶಗಳನ್ನು ಒಳಗೊಂಡಂತೆ ಹಲವಾರು ಅವಕಾಶಗಳನ್ನು ಒದಗಿಸುತ್ತದೆ.

ವಿಂಕ್ ಮ್ಯೂಸಿಕ್ ಈ ಕಲಾವಿದರ ಹಾಡುಗಳೊಂದಿಗೆ ವಿಶೇಷ ಪ್ಲೇಪಟ್ಟಿಗಳನ್ನು ಅದರ ಅನ್ವೇಷಣೆಯನ್ನು ಹೆಚ್ಚಿಸಲು ಮತ್ತು ಅದರ ಪರಿಣಾಮವಾಗಿ ಸ್ಟ್ರೀಮ್‌ಗಳನ್ನು ಸಂಗ್ರಹಿಸುತ್ತದೆ. ವಿಂಕ್‌ನ ದೊಡ್ಡ ಗ್ರಾಹಕರ ನೆಲೆಯು ಕಲಾವಿದರಿಗೆ ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಅವರ ಹಾಡುಗಳನ್ನು ಸುಲಭವಾಗಿ ಹಣಗಳಿಸಲು ಸಹಾಯ ಮಾಡುತ್ತದೆ.

ಇದು ದೇಶಾದ್ಯಂತದ ಸ್ವತಂತ್ರ ಕಲಾವಿದರು ವೇದಿಕೆಗೆ ಸೇರುವ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ಅವರ ಸಂಗೀತಕ್ಕೆ ಹೆಚ್ಚಿನ ಪ್ರೇಕ್ಷಕರನ್ನು ಹುಡುಕುತ್ತದೆ. ಇಲ್ಲಿಯವರೆಗೆ, ಪ್ಲಾಟ್‌ಫಾರ್ಮ್ 2000+ ಕಲಾವಿದರಿಗೆ ಹಣಗಳಿಕೆ ಮತ್ತು ಅನ್ವೇಷಣೆ ಸಮಸ್ಯೆಗಳನ್ನು ಪರಿಹರಿಸುವಾಗ ಸೃಜನಶೀಲ ಔಟ್‌ಲೆಟ್‌ನೊಂದಿಗೆ ಸಹಾಯ ಮಾಡಿದೆ.

ಈ ಉದ್ಯಯೋನ್ಮುಖ ಕಲಾವಿದರೊಂದಿಗೆ, ನಿಕಿತಾ ಗಾಂಧಿ, ವಿಶಾಲ್ ಧಾಡ್ಲಾನಿ, ರಾಹತ್ ಫತೇಹ್ ಅಲಿ ಖಾನ್ ರೀತಿಯ ಜನಪ್ರಿಯ ಸಂಗೀತಕಾರರು ಸಹ ತಮ ಸಂಗೀತವನ್ನು ಬಿಡುಗಡೆಗೊಳಿಸಲು ವಿಂಕ್ ಸ್ಟುಡಿಯೋದೊಂದಿಗೆ ತಮ್ಮ ಕೈಜೋಡಿಸಿದ್ದಾರೆ. ಈ ವೇದಿಕೆಯು ಪ್ರತೀಕ್ ಗಾಂಧಿ, ರಾಜ್ ಬರ್ಮನ್, ಹರ್ಷ ಪ್ರವೀಣ್ ಮತ್ತು ರೀನಾ ಗಿಲ್ಬರ್ಟ್ ರೀತಿಯ ಕಲಾವಿದರ ವೃತ್ತಿಜೀವನವನ್ನು ವಿಂಕ್ ಸ್ಟುಡಿಯೊದ ಉನ್ನತ ಪ್ರದರ್ಶನ ಕಲಾವಿದರನ್ನಾಗಿಸಲು ಅನುವು ಮಾಡಿಕೊಟ್ಟಿದೆ.

ಕೇ ಕೇ ಮೆನನ್ ಮತ್ತು ಸ್ವಸ್ತಿಕಾ ಮುಖರ್ಜಿ ನಟಿಸಿರುವ ಅವರ ಚಲನಚಿತ್ರ “ಲವ್ ಆಲ್” ನ ಪ್ರಚಾರಕ್ಕಾಗಿ LGF ಸ್ಟುಡಿಯೋಸ್‌ನಂತಹ ಸ್ವತಂತ್ರ ನಿರ್ಮಾಪಕರನ್ನು ಬೆಂಬಲಿಸುವುದರ ಜೊತೆಗೆ ಮಂಜ್ ಮ್ಯೂಸಿಕ್ ಮತ್ತು ಅನುಷಾ ದಾಂಡೇಕರ್ ಅವರ “ಲವ್ ಟೋಕನ್” ನಂತಹ ಸ್ವತಂತ್ರ ಸಿಂಗಲ್ಸ್ ವಿತರಣೆಯನ್ನು ಸಹ ವಿಂಕ್ ಬೆಂಬಲಿಸಿದೆ.

Top Indie Artists & Songs
Artists Track Link
Prateek Gandhi https://wynk.in/u/QuKTBOSaG
Harsha Prawin https://wynk.in/u/MbUlb4fuE
Raj Barman https://wynk.in/u/9zv3IGVY1
Dheemusix https://wynk.in/u/fkfgWv2BQ
Gagan Baderiya https://wynk.in/u/FmndYbFWf
Top Indie Language Songs
Language Track Link Artist
Punjabi Chahat
Arhaan Hussain
Kannada Kanasu
Dheemusix
Tamil Potta Pulla Vaasam Theadi
Martin Kartenjer
Telugu Padessave Pilla
Harsha Prawin
Hindi Mashhoor Banegi
Prateek Gandhi

Wynk Journey
⮚ Sept 2014: Launched in India; crosses one lakh downloads within 4 days
⮚ Feb 2015: Crosses 5 million app downloads
⮚ June 2015: Launches Data Save Mode
⮚ Nov 2015: Crosses 12 million installs
⮚ Jan 2016: Introduces MP3 player function – Plays local MP3 file
⮚ Mar 2017: Crosses 50 million installs
⮚ Jan 2018: Crosses 75 million installs
⮚ Dec 2018: Voted India’s most entertaining app on Playstore
⮚ Jan 2019: Crosses 100 million installs
⮚ Aug 2022: Launched Wynk Studio
⮚ Aug 2023: Brings Dolby Atmos to the app
⮚ Sept 2023: Ventures into film music distribution with ‘Love All’
For more details visit https://studio.wynk.in/ and https://wynk.in/music

About Airtel
Headquartered in India, Airtel is a global communications solutions provider with over 490 Mn customers in 17 countries across South Asia and Africa. The company ranks amongst the top three mobile operators globally and its networks cover over two billion people. Airtel is India’s largest integrated communications solutions provider and the second largest mobile operator in Africa. Airtel’s retail portfolio includes high speed 4G/4.5G mobile broadband, Airtel Xstream Fiber that promises speeds up to 1 Gbps with convergence across linear and on-demand entertainment, streaming services spanning music and video, digital payments and financial services. For enterprise customers, Airtel offers a gamut of solutions that includes secure connectivity, cloud and data centre services, cyber security, IoT, Ad Tech and cloud-based communication. For more details visit www.airtel.com

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments