Tuesday, September 17, 2024
Google search engine
Homeಜಿಲ್ಲಾ ಸುದ್ದಿದುಬೈನಲ್ಲಿ ಭೀಕರ ಅಪಘಾತ: ಪ್ರವಾಸದಲ್ಲಿದ್ದ ಬೆಳಗಾವಿಯ ನಾಲ್ವರು ಸಜೀವದಹನ

ದುಬೈನಲ್ಲಿ ಭೀಕರ ಅಪಘಾತ: ಪ್ರವಾಸದಲ್ಲಿದ್ದ ಬೆಳಗಾವಿಯ ನಾಲ್ವರು ಸಜೀವದಹನ

ಪ್ರವಾಸಕ್ಕೆಂದು ದುಬೈ ಪ್ರವಾಸಕ್ಕೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಓಮನ್ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಗೋಕಾಕ್ ನ ನಿವಾಸಿಗಳಾದ ವಿಜಯಾ ತಹಶಿಲ್ದಾರ, ಪೂಜಾ, ಪವನ್ ಕುಮಾರ, ಆದಿಶೇಷ ಮೃತಪಟ್ಟು ದುರ್ದೈವಿಗಳು.

ಹೈಮಾ ಎಂಬ ಪ್ರದೇಶದಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಲಾರಿಗೆ ಡಿಕ್ಕಿ ಹೊಡೆದು ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ನಾಲ್ವರು ಕಾರಿನಲ್ಲಿಯೇ ಸಜೀವದಹನಗೊಂಡಿದ್ದಾರೆ ಎಂದು ಸ್ಥಳೀಯ ಸರ್ಕಾರ ಹೇಳಿದೆ.

ಮೃತರ ಶವಗಳನ್ನು ಭಾರತಕ್ಕೆ ತರಲು ಅನುಕೂಲ ಮಾಡುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments