ಮುಂದಿನ ವರ್ಷ ಅಂದರೆ 2025ರ ಜನವರಿ ಆರಂಭದಿಂದಲೇ ಕಾರ್ಮಿಕರು ಪ್ರಾವಿಡೆಂಟ್ ಫಂಡ್ ಸಂಘಟನೆ [ಇಪಿಎಫ್] ವಿತ್ ಡ್ರಾ ತಮ್ಮ ಉಳಿತಾಯದ ಹಣವನ್ನು ಎಟಿಎಂಗಳಲ್ಲಿ ವಿತ್ ಡ್ರಾ ಮಾಡಿಕೊಳ್ಳಬಹುದಾಗಿದೆ.
ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದ್ವಾರಾ ಎಎನ್ ಐ ಸುದ್ದಿ ಸಂಶಸ್ಥೆಗೆ ಈ ವಿಷಯ ತಿಳಿಸಿದ್ದು, ಕಾರ್ಮಿಕರ ಐಟಿ ನಿಯಮಗಳಲ್ಲಿ ಪರಿಷ್ಕರಣೆ ಮಾಡಲಾಗುತ್ತಿದ್ದು, ಉಳಿತಾಯ ಮೊತ್ತ ಡ್ರಾ ಮಾಡಿಕೊಳ್ಳಲು ಎಟಿಎಂ ಅವಕಾಶ ಹಾಗೂ ಹಣ ವಿತರಣೆ ಸರಳೀಕರಣ ಮಾಡಲಾಗುತ್ತಿದೆ ಎಂದರು.
ಐಟಿ ೨.೧ ನಿಯಮಗಳಲ್ಲಿ ಬದಲಾವಣೆ ಮಾಡಲಾಗುತ್ತಿದ್ದು, ಬ್ಯಾಂಕ್ ಗಳ ಸಹಭಾಗಿತ್ವದಲ್ಲಿ ಎಟಿಎಂಗಳಲ್ಲಿ ಪಿಎಫ್ ಹಣ ವಿತ್ ಡ್ರಾ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದ್ದು, ಈ ಸೌಲಭ್ಯ ಜನವರಿಯಿಂದ ಲಭ್ಯವಾಗಲಿದೆ.
ಯಾವುದೇ ಸರ್ಕಾರಿ ಕಚೇರಿ ಅಲೆಯುವ ಅಥವಾ ಯಾವುದೇ ಮಾನವರ ಮಧ್ಯಸ್ಥಿಕೆ ಇಲ್ಲದೇ ನೇರವಾಗಿ ಕಾರ್ಮಿಕರು ಹಾಗೂ ಉದ್ಯೋಗಿಗಳಿಗೆ ಪಿಎಫ್ ಹಣ ನೇರವಾಗಿ ತಲುಪಲು ವ್ಯವಸ್ಥೆ ಮಾಡಲಾಗುತ್ತಿದೆ.
ಹೇಗೆ ಕೆಲಸ ಮಾಡುತ್ತದೆ?
ಸುಧಾರಿತ ವ್ಯವಸ್ಥೆಯು ಬ್ಯಾಂಕ್ ಎಟಿಎಂ ಕಾರ್ಡ್‌ನಂತೆಯೇ ಮೀಸಲಾದ ಪಿಎಫ್ ಹಿಂಪಡೆಯುವ ಕಾರ್ಡ್ ಅನ್ನು ಒಳಗೊಂಡಿರುತ್ತದೆ. ಆದಾಗ್ಯೂ, ಹಿಂಪಡೆಯುವಿಕೆಯು ಒಟ್ಟು ಪಿಎಫ್ ಒಟ್ಟು ಮೊತ್ತದ ಶೇ.50 ಮಾತ್ರ ವಿತ್ ಡ್ರಾ ಮಾಡಿಕೊಳ್ಳಬಹುದು.
ಐಟಿ ಕೂಲಂಕುಷ ಪರೀಕ್ಷೆಯ ಭಾಗವಾಗಿ ಅನಗತ್ಯ ಕಾರ್ಯ ವಿಧಾನಗಳನ್ನು ತೆಗೆದುಹಾಕಿ ಹಣ ಹಿಂಪಡೆಯುವಿಕೆಯ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ. ಈ ಹೊಸ ವಿಧಾನ ಜನವರಿಯಲ್ಲಿ ಆರಂಭಿಸಲು ಇಲಾಖೆ ನಿರ್ಧರಿಸಿದ್ದರೂ ಸ್ಪಷ್ಟ ದಿನಾಂಕ ಉಲ್ಲೇಖಿಸಿಲ್ಲ.
ಪ್ರಸ್ತುತ 7 ಕೋಟಿ ಜನರು ಇಪಿಎಫ್ ಒ ನೋಂದಣಿ ಹೊಂದಿದ್ದು, ಉದ್ಯೋಗಿಗಳು ಉದ್ಯೋಗದಲ್ಲಿರುವಾಗ PF ಅನ್ನು ಹಿಂಪಡೆಯಲು ಸಾಧ್ಯವಿಲ್ಲ.
ಒಂದು ತಿಂಗಳವರೆಗೆ ನಿರುದ್ಯೋಗಿಗಳಾಗಿದ್ದರೆ, ಅವರು ತಮ್ಮ ಉಳಿತಾಯದಲ್ಲಿ ಶೇ. 75ರಷ್ಟು ಹಿಂತೆಗೆದುಕೊಳ್ಳಬಹುದು ಮತ್ತು 2 ತಿಂಗಳ ನಂತರ, ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು.