Kannadavahini

ಬಾರಿಸು ಕನ್ನಡ ಡಿಂಡಿಮವ

air force
ತಾಜಾ ಸುದ್ದಿ ದೇಶ

ಭಾರತೀಯ ಸೇನೆಗೆ 45,000 ಕೋಟಿ ವೆಚ್ಚದಲ್ಲಿ 156 ಪ್ರಚಂಡ ಹೆಲಿಕಾಫ್ಟರ್ ಪೂರೈಸಲಿದೆ ಎಚ್‍ಎಎಲ್!

ಭಾರತೀಯ ಸೇನಾಪಡೆ ಹಾಗೂ ವಾಯುಪಡೆಗಳಿಗೆ ಅತ್ಯಾಧುನಿಕ ಪ್ರಚಂಡ ಹೆಲಿಕಾಫ್ಟರ್ ಗಳನ್ನು ಪೂರೈಸಲು ಬೆಂಗಳೂರು ಮೂಲದ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಗೆ 45,000 ಕೋಟಿ ಟೆಂಡರ್ ಲಭಿಸಿದೆ.

156 ಪ್ರಚಂಡ ಹೆಲಿಕಾಫ್ಟರ್ ಪೂರೈಸಲು ಎಚ್ ಎಎಲ್ ಗೆ ರಕ್ಷಣಾ ಸಚಿವಾಲಯ ಪ್ರಸ್ತಾಪ ಸಲ್ಲಿಸಿದೆ. ಈ ಮೂಲಕ ಎಚ್ ಎಚ್ ಎಎಲ್ ಗೆ ಬೃಹತ್ ಮೊತ್ತದ ಟೆಂಡರ್ ಲಭಿಸಿದೆ.

156 ಹಗುರ ಅತ್ಯಾಧುನಿಕ ಹೆಲಿಕಾಫ್ಟರ್ ಗಳ ಪೈಕಿ 90 ಭಾರತೀಯ ಸೇನಾಪಡೆಗೆ ಹಾಗೂ 66 ನೌಕಾಪಡೆಗೆ ಸೇರಲಿವೆ ಎಂದು ಎಚ್‍ ಎಎಲ್ ತಿಳಿಸಿದೆ.

ಪ್ರಚಂಡ ಹೆಲಿಕಾಫ್ಟರ್ ಹಗುರವಾಗಿದ್ದು, ಇದು 16,500 ಅಡಿ ಎತ್ತರದಿಂದ ಒಂದೇ ಬಾರಿಗೆ ನೆಲದ ಮೇಲಿಳಿಯುವ ಹಾಗೂ ಅಷ್ಟೇ ವೇಗವಾಗಿ ಒಂದೇ ಜಾಗದಲ್ಲಿ ಮೇಲಕ್ಕೇರುವ ಸಾಮರ್ಥ್ಯ ಹೊಂದಿರುವ ವಿಶ್ವದ ಏಕೈಕ ಯುದ್ಧಕ್ಕೆ ಬಳಸಬಹುದಾದ ಹೆಲಿಕಾಫ್ಟರ್ ಆಗಿದೆ.

ಪ್ರಚಂಡ ಹೆಲಿಕಾಫ್ಟರ್ ನೆಲದಿಂದ ಆಕಾಶಕ್ಕೆ ಹಾಗೂ ಆಕಾಶದಿಂದ ಆಕಾಶದಲ್ಲೇ ಗುರಿಯನ್ನು ಮುಟ್ಟುವ ಕ್ಷಿಪಣಿಯನ್ನು ಚಿಮ್ಮಿಸಬಲ್ಲ ಅಥವಾ ದಾಳಿಯನ್ನು ನಡೆಸಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಎಚ್‍ ಎಎಲ್ ವಿವರಿಸಿದೆ.

ಕಳೆದ ಏಪ್ರಿಲ್ ನಲ್ಲಿ ರಕ್ಷಣಾ ಸಚಿವಾಲಯ 97 ಎಲ್ ಸಿಎ ಮಾರ್ಕ್ 1ಎ ಫೈಟರ್ ಜೈಟ್ ಗಳ ಪೂರೈಕೆಗಾಗಿ ಎಚ್ ಎಎಲ್ ಗೆ 65 ಸಾವಿರ ಕೋಟಿ ರೂ. ಟೆಂಡರ್ ನೀಡಿತ್ತು.

LEAVE A RESPONSE

Your email address will not be published. Required fields are marked *