ಜನವರಿಯಲ್ಲಿ ಉಡಾವಣೆ ದಿನಾಂಕ ಘೋಷಿಸುವ ಮೂಲಕ 100ನೇ ಬಾಹ್ಯಕಾಶ ಯೋಜನೆ ನಡೆಸುವುದಾಗಿ ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೊ) ಅಧ್ಯಕ್ಷ ಎಸ್.ಸೋಮನಾಥ್ ಘೋಷಿಸಿದ್ದಾರೆ.
2024ನೇ ಸಾಲಿನಲ್ಲಿ 99ನೇ ಉಡಾವಣೆಯನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಶತಕದತ್ತ ದಾಪುಗಾಲಿರಿಸಿದ ಇಸ್ರೊ, 2025ನೇ ಸಾಲಿನ ಮೊದಲ ತಿಂಗಳಲ್ಲೇ ಶತಕದ ಮೈಲುಗಲ್ಲು ಸ್ಥಾಪಿಸುವ ಉಮೇದಿನಲ್ಲಿದೆ.
ಸೋಮವಾರ ಜನವರಿಯಲ್ಲಿ ಇಸ್ರೊ 100ನೇ ಯೋಜನೆ ಕೈಗೊಳ್ಳುವುದಾಗಿ ಘೋಷಿಸಿದರು. ಆದರೆ ಯೋಜನೆಯ ವಿವರ ಹಾಗೂ ದಿನಾಂಕವನ್ನು ಬಹಿರಂಗಪಡಿಸಲಿಲ್ಲ.
ಭಾನುವಾರ ಸ್ಪಾಡೆಕ್ಸ್ ಮತ್ತು ಪೊಯೆಮ್-4 ಕ್ಷಿಪಣಿ ಉಡಾವಣೆ ಮಾಡಿದ್ದು, ಈ ಕಾರ್ಯಾಚರಣೆ ವರ್ಷಪೂರ್ತಿ ನಡೆಯಲಿದೆ. ಇದೇ ವೇಳೆ 2025ರಲ್ಲಿ ಮೂರು ವರ್ಷ ಮಹತ್ವಾಕಾಂಕ್ಷಿ ಯೋಜನೆಗಳು ಕೈಗೆತ್ತಿಕೊಳ್ಳಲಿದೆ.