Monday, July 1, 2024
Google search engine
Homeತಾಜಾ ಸುದ್ದಿಕಲ್ಕಿ 2898 ಎಡಿ ಭಾರತದಲ್ಲಿ 95 ಕೋಟಿ ಗಳಿಸಿ ಸಾರ್ವಕಾಲಿಕ ದಾಖಲೆ!

ಕಲ್ಕಿ 2898 ಎಡಿ ಭಾರತದಲ್ಲಿ 95 ಕೋಟಿ ಗಳಿಸಿ ಸಾರ್ವಕಾಲಿಕ ದಾಖಲೆ!

ಕಲ್ಕಿ 2898 ಎಡಿ ಸಿನಿಮಾ ಮೊದಲ ದಿನವೇ ಭಾರತದಲ್ಲಿ 95 ಕೋಟಿ ರೂ. ಗಳಿಸಿ ಭಾರತೀಯ ಚಿತ್ರರಂಗದಲ್ಲೇ ಅತೀ ದೊಡ್ಡ ಆರಂಭದ ದಾಖಲೆ ಬರೆದಿದೆ.

ನಾಗ್ ಅಶ್ವಿನಿ ನಿರ್ದೇಶಿಸಿ, ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ನಂತಹ ದಿಗ್ಗಜರು ನಟಿಸಿದ ಕಲ್ಕಿ ಚಿತ್ರಕ್ಕೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆಗಳು ಬಂದಿದ್ದು, ಚಿತ್ರ ವಾರಾಂತ್ಯದವರೆಗೂ ಅಬ್ಬರಿಸುವ ಸೂಚನೆ ನೀಡಿದೆ.

ಕಲ್ಕಿ ಚಿತ್ರ ಭರ್ಜರಿ ಆರಂಭ ಪಡೆಯುವ ಮೂಲಕ ಶಾರೂಖ್ ಖಾನ್ ಅಭಿಯನದ ಜವಾನ್ ಚಿತ್ರದ ಗಳಿಕೆಯ ದಾಖಲೆಯನ್ನು ಮುರಿದಿದೆ. ಜವಾನ್ ಚಿತ್ರ ಮೊದಲ ದಿನವೇ ಭಾರತದಲ್ಲಿ 65.5 ಕೋಟಿ ರೂ. ಗಳಿಸಿತ್ತು.

ಜಾಗತಿಕ ಮಟ್ಟದಲ್ಲಿ ಮೊದಲ ದಿನವೇ 180 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗಿದ್ದು, ಅಧಿಕೃತ ಅಂಕಿ-ಅಂಶಗಳು ಬರಬೇಕಿದೆ. ಈಗಾಗಲೇ ಆಸ್ಟ್ರೇಲಿಯಾದಲ್ಲಿ ಟಿಕೆಟ್ ಬುಕ್ಕಿಂಗ್ ನಲ್ಲಿಯೇ ದಾಖಲೆ ಬರೆದಿದೆ.

ಕಲ್ಕಿ ಚಿತ್ರದ ತೆಲುಗು ಅವತರಣಿಕೆಯಲ್ಲಿ ಗರಿಷ್ಠ ಆದಾಯ ಬಂದಿದ್ದು, ಮೊದಲ ದಿನವೇ 64.5 ಕೋಟಿ ರೂ. ಗಳಿಸಿದೆ. ತಮಿಳಿನಲ್ಲಿ 4 ಕೋಟಿ, ಹಿಂದಿಯಲ್ಲಿ 24 ಕೋಟಿ ಹಾಗೂ ಮಲಯಾಳಂನಲ್ಲಿ 2.2 ಕೋಟಿ ರೂ. ಗಳಿಸಿದೆ.

ಚಿತ್ರದಲ್ಲಿ ವಿಶ್ವದರ್ಜೆಯ ವಿಎಫ್ಎಕ್ಸ್ ಬಳಸಲಾಗಿದೆ. ಅದ್ಭುತ ಸೆಟ್ಟಿಂಗ್, ಗಾಳಿಯಲ್ಲಿ ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿದ್ದು, ಪ್ರತಿಯೊಬ್ಬ ಸ್ಟಾರ್ ನಟನೂ ಅದ್ಭುತವಾಗಿ ನಟಿಸಿದ್ದರಿಂದ ಚಿತ್ರ ಕಣ್ಣಿಗೆ ಹಬ್ಬ ಉಂಟು ಮಾಡುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments