Friday, October 25, 2024
Google search engine
Homeಆರೋಗ್ಯಕರುಳಿನ ಉರಿಯೂತ, ಜೀರ್ಣಕ್ರಿಯೆ ಸಮಸ್ಯೆಗೆ ಈ ಆಹಾರ ಪದ್ಧತಿ ಮನೆಮದ್ದು!

ಕರುಳಿನ ಉರಿಯೂತ, ಜೀರ್ಣಕ್ರಿಯೆ ಸಮಸ್ಯೆಗೆ ಈ ಆಹಾರ ಪದ್ಧತಿ ಮನೆಮದ್ದು!

ಸಾಮಾನ್ಯವಾಗಿ ನಾವು ಹೊಟ್ಟೆಯಲ್ಲಿ ಒಂದು ತರಹದ ಉರಿಯನ್ನು ಕೆಲವು ಸಲ ಅನುಭವಿಸುತ್ತೇವೆ ಆದರೆ ನಾವು ಅದನ್ನು ಸಣ್ಣ ಅಸ್ವಸ್ಥತೆ ಎಂದು ನಿರ್ಲಕ್ಷಿಸುತ್ತೇವೆ ಅಥವಾ ಇತರರಲ್ಲಿ ಹಂಚಿಕೊಳ್ಳಲು ಮುಜುಗರ ಪಟ್ಟುಕೊಳ್ಳುತ್ತೇವೆ. ಈ ಉರಿಗೆ ಕರುಳಿನ ಉರಿಯೂತ ಎಂದು ಕರೆಯುತ್ತಾರೆ. ವಿಶೇಷವಾಗಿ ದೊಡ್ಡಕರುಳು ಹಾಗೂ ಗುದನಾಳದ ಒಳಭಾಗದಲ್ಲಿ ಉಂಟಾಗುವ ಸಮಸ್ಯೆಯೇ ಇದಕ್ಕೆ ಕಾರಣವಾಗಿರುತ್ತದೆ.

ಈ ಭಾಗಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯ ಕೊನೆಯ ಹಂತವಾಗಿದ್ದು ಇಲ್ಲಿ ಆಹಾರದಿಂದ ನೀರನ್ನು ಹೀರಿಕೊಂಡು ತ್ಯಾಜ್ಯಗಳನ್ನು ಸುಲಭವಾಗಿ ವಿಸರ್ಜಿಸಲು ಸಾಧ್ಯವಾಗುವಂತೆ ಒಳಭಾಗದ ಪದರದಲ್ಲಿ ಲೋಳೆಯಂತಹ ದ್ರವ ಅಂಟಿಕೊಂಡಿರುತ್ತದೆ. ಈ ದ್ರವದ ಉತ್ಪತ್ತಿ ಕಡಿಮೆಯಾದರೆ ಅಥವಾ ಇಲ್ಲದೇ ಹೋದಾಗ ಈ ಚರ್ಮದಲ್ಲಿ ಭಾರೀ ಉರಿ ಕಾಣಿಸಿಕೊಳ್ಳುತ್ತದೆ. ಪರಿಣಾಮವಾಗಿ ಅತಿಸಾರ ಹಾಗೂ ನೋವು ಸಹಾ ಕಾಣಿಸಿಕೊಳ್ಳುತ್ತದೆ.

ಸಾಮಾನ್ಯವಾಗಿ ಹೆಚ್ಚಿನವರಲ್ಲಿ ಇದು ಭಾರೀ ಎನ್ನುವಷ್ಟು ತೊಂದರೆ ಉಂಟುಮಾಡುವುದಿಲ್ಲ, ಆದರೆ ಕೆಲವರಿಗೆ ಮಾತ್ರ ಇದು ತುಂಬಾ ಹೆಚ್ಚಾಗಿದ್ದು ಪದೇ ಪದೇ ಮರುಕಳಿಸುವಂತಿರುವುದರಿಂದ ವೈದ್ಯರ ಸಲಹೆ ಪಡೆಯಲೇಬೇಕಾಗುತ್ತದೆ. ಅಚ್ಚರಿ ಎಂದರೆ ಈ ತೊಂದರೆ ಇರುವ ರೋಗಿಗಳಲ್ಲಿ ಶೇ.60ರಷ್ಟು ವ್ಯಕ್ತಿಗಳು ಮಹಿಳೆಯರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ನಲವತ್ತಕ್ಕಿಂತ ಕಡಿಮೆ ವಯಸ್ಸಿನವರು. ಈ ತೊಂದರೆಗೆ ಕೆಲವು ಸುಲಭ ಮನೆಮದ್ದುಗಳಿದ್ದು ಯಾವುದೇ ಅಡ್ಡಪರಿಣಾಮದ ಭಯವಿಲ್ಲ.

ನೈಸರ್ಗಿಕ ಮೊಸರು

ಕರುಳಿನ ಉರಿಯನ್ನು ನಿವಾರಿಸಲು ಮೊಸರು ನಿಸರ್ಗ ನೀಡಿದ ಅತ್ಯುತ್ತಮ ಪರಿಹಾರಗಳಲ್ಲೊಂದಾಗಿದೆ. ಮೊಸರಿನಲ್ಲಿರುವ ಜೀರ್ಣಕ್ರಿಯೆಗೆ ಸಹಕರಿಸುವ ಸ್ನೇಹಿ ಬ್ಯಾಕ್ಟೀರಿಯಾಗಳು ಕರುಳಿನ ಒಳಗೆ ಪಿಎಚ್ ಮಟ್ಟವನ್ನು ಸಾಮಾನ್ಯ ಮಟ್ಟದಲ್ಲಿರಿಸಲು ನೆರವಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಜೀರ್ಣಾಂಗಗಳಲ್ಲಿ ಲ್ಯಾಕ್ಟಿಕ್ ಆಮ್ಲವನ್ನು ಉತ್ಪತ್ತಿ ಮಾಡಿ ಜಠರ ಮತ್ತು ಕರುಳುಗಳಿಂದ ವಿಷಕಾರಿ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತವೆ.

ಪ್ರತಿದಿನವೂ ಒಂದು ಕಪ್ ಮೊಸರನ್ನು ತಪ್ಪದೇ ಸೇವಿಸಿ. ನಿಮ್ಮ ನಿತ್ಯದ ಆಹಾರಗಳಲ್ಲಿ ಹಣ್ಣುಗಳು, ಹಸಿ ತರಕಾರಿಗಳು ಹಾಗೂ ಇವುಗಳಿಂದ ತಯರಿಸಿದ ಸಾಲಾಡ್ ಹಾಗೂ ಸ್ಮೂಥಿಗಳಲ್ಲಿ ಮೊಸರನ್ನು ಬೆರೆಸಿ ಸೇವಿಸಿ.

ಆಲೂಗಡ್ಡೆಯ ರಸ

ಆಲೂಗಡ್ಡೆ ಕ್ಷಾರೀಯವಾಗಿದ್ದು ಕರುಳಿನ ಉರಿಗೆ ಕಾರಣವಾಗುವ ಆಮ್ಲೀಯತೆಯನ್ನು ನಿಷ್ಕ್ರಿಯಗೊಳಿಸುವ ಕ್ಷಮತೆ ಹೊಂದಿದೆ. ವಿಶೇಷವಾಗಿ ಅತಿಸಾರ ಹಾಗೂ ಕರುಳಿನ ಹುಣ್ಣು ಆಗಿದ್ದಾಗ (ulcerous colitis) ಈ ರಸ ಅತ್ಯುತ್ತಮ ಪರಿಹಾರ ಒದಗಿಸುತ್ತದೆ.

ಒಂದು ಹಸಿ ಆಲೂಗಡ್ಡೆಯನ್ನು ಚಿಕ್ಕದಾಗಿ ತುರಿದು ಹಿಂಡಿ ರಸ ತೆಗೆದು ಸಂಗ್ರಹಿಸಿಡಿ. ಈ ರಸವನ್ನು ನೇರವಾಗಿ ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯಿರಿ.

ಅಕ್ಕಿಯ ನೀರು 

ಎರಡು ದೊಡ್ಡ ಚಮಚ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ಬೇಯಿಸಿ. ಅಕ್ಕಿ ಪೂರ್ಣವಾಗಿ ಬೆಂದ ಬಳಿಕ ಉರಿಯನ್ನು ಆರಿಸಿ ನೀರು ಹಾಗೇ ತಣಿಯಲು ಬಿಡಿ. ಈ ನೀರು ನೀವು ಕುಡಿಯಲು ಸಾಧ್ಯವಾಗುವಷ್ಟು ತಣಿದ ಬಳಿಕ ಇದನ್ನು ಸೋಸಿ ನೀರನ್ನು ಸಂಗ್ರಹಿಸಿ. ಈ ನೀರನ್ನು ದಿನಕ್ಕೆ ಒಂದರಿಂದ ಎರಡು ಲೋಟದಷ್ಟು ಕುಡಿಯಿರಿ.

ಕ್ಯಾರೆಟ್

ನಿಮ್ಮ ಮನೆಯಲ್ಲಿ ಜ್ಯೂಸರ್ ಇದ್ದರೆ ಒಂದೆರಡು ಕ್ಯಾರೆಟ್ ಗಳನ್ನು ತುರಿದು ಹಿಂಡಿ ರಸ ಸಂಗ್ರಹಿಸಿ. ಇಲ್ಲವಾದರೆ, ಎರಡು ಕ್ಯಾರೆಟ್ಟುಗಳನ್ನು ನೀರಿನಲ್ಲಿ ಉಪ್ಪಿಲ್ಲದೇ ಕುದಿಸಿ ಮೃದುವಾದ ಬಳಿಕ ಇದನ್ನು ಜಜ್ಜಿ ಪ್ಯೂರಿ ತಯಾರಿಸಿ. ಈ ರಸವನ್ನು ಅಥವಾ ಪ್ಯೂರಿಯನ್ನು ದಿನಕ್ಕೊಂದು ಬಾರಿ ಸೇವಿಸಿ. ಉರಿಯೂತ ಪೂರ್ಣವಾಗಿ ಗುಣವಾಗುವವರೆಗೆ ಇದರ ಸೇವನೆಯನ್ನು ಮುಂದುವರೆಸಿ.

ಬಾಳೆಹಣ್ಣು

ಒಂದು ಚೆನ್ನಾಗಿ ಕಳಿತ ಬಾಳೆಹಣ್ಣು ಹಾಗೂ ಒಂದು ದೊಡ್ಡಚಮಚ ಜೇನು ಬೆರೆಸಿ ದಿನಕ್ಕೊಂದು ಬಾರಿ ಸೇವಿಸಿ. ಅಥವಾ ಬಾಳೆಹಣ್ಣನ್ನು ಕೊಂಚಕೊಂಚವಾಗಿ ಇಡೀ ದಿನ ತಿನ್ನುತ್ತಿರಿ ಹಾಗೂ ಬಾಳೆಹಣ್ಣು ಸೇರಿಸಿ ತಯಾರಿಸಿದ ಸ್ಮೂಥಿಗಳನ್ನು ಕುಡಿಯಿರಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments