Monday, July 6, 2026
Google search engine
Homeಅಪರಾಧಆತ್ಮಹತ್ಯೆ ಮಾಡಿಕೊ ಎಂದ ಪ್ರಿಯಕರ, ನೇಣಿಗೆ ಶರಣಾದ ಪ್ರೇಯಸಿ!

ಆತ್ಮಹತ್ಯೆ ಮಾಡಿಕೊ ಎಂದ ಪ್ರಿಯಕರ, ನೇಣಿಗೆ ಶರಣಾದ ಪ್ರೇಯಸಿ!

ತನಗಿಂತ ಎರಡು ವರ್ಷ ದೊಡ್ಡವಳು ಎಂಬ ಕಾರಣಕ್ಕೆ ನನಗೆ ನೀನು ಬೇಡ, ಆತ್ಮಹತ್ಯೆ ಮಾಡಿಕೊ ಎಂದು ಪ್ರಿಯಕರ ಪದೇಪದೆ ನಿಂದಿಸಿದ್ದರಿಂದ ನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಕೆಲಸ ಮಾಡುತ್ತಿದ್ದ  ಹಾಸನದ ಜಾಗರವಳ್ಳಿ ಗ್ರಾಮದ ಜಯರಾಮ್‌ನಾಯ್ಕ್ ಹಾಗೂ ಶೋಭಾ ದಂಪತಿ ಪುತ್ರಿ ಪ್ರಿಯಾಂಕಾ (21) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಪ್ರಿಯಾಂಕಾ ನಾಗಸಂದ್ರದ ಶಿವಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಆಲೂರು ತಾಲ್ಲೂಕಿನ ಸುಮಂತ್‌ ಪರಿಚಯವಾಗಿ ಕಳೆದ ಮೂರು ತಿಂಗಳಿನಿಂದ ಪರಸ್ಪರ ಪ್ರೀತಿಸುತ್ತಿದ್ದರು. ತಾನು ಪ್ರೀತಿಸುತ್ತಿದ್ದ ಯುವತಿ ವಯಸ್ಸಿನಲ್ಲಿ ತನಗಿಂತ ಎರಡು ವರ್ಷ ದೊಡ್ಡವಳಾಗಿದ್ದರೂ ಮದುವೆಯಾಗಲು ನಿಶ್ವಯಿಸಿದ್ದರು

ಯುವಕ ತನ್ನ ಪ್ರೇಯಸಿ ಮೇಲೆ ಅನುಮಾನಗೊಂಡು ಕಿರುಕುಳ ನೀಡುತ್ತಿದ್ದ. ನೀನು ನನಗೆ ಬೇಡ ಆತ್ಮಹತ್ಯೆ ಮಾಡಿಕೋ ಎಂದು ಪದೇ ಪದೇ ಮಾನಸಿಕ ಹಿಂಸೆ ನೀಡುತ್ತಿದ್ದ. ಇದರಿಂದ ಬೇಸತ್ತ ಪ್ರಿಯಾಂಕಾ ತಾನು ವಾಸವಿದ್ದ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಆತ್ಮಹತ್ಯೆ ಮಾಡಿಕೊಳ್ಳುವ ಕೊನೇ ಕ್ಷಣದಲ್ಲಿ ಸುಮಂತ್ ಒತ್ತಡ ಹಾಕಿರುವ ಬಗ್ಗೆ ತನ್ನ ಮೊಬೈಲ್‌ನಲ್ಲಿ ಆಡಿಯೋ ರೆಕಾರ್ಡ್ ಮಾಡಿದ್ದು ಮೊಬೈಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಸುಮಂತ್ ಕಿರುಕುಳ ಹಾಗೂ ಪ್ರಚೋದನೆಯೇ ಕಾರಣವಾಗಿದ್ದು ಆತನ ವಿರುದ್ಧ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್‌ ದಾಖಲಾಗಿದ್ದೂ ಆರೋಪಿಯನ್ನ ಪೊಲೀಸರು ಬಂಧಿಸಿಲ್ಲ. ಹೀಗಾಗಿ ಕೂಡಲೇ ಆರೋಪಿಯನ್ನ ಬಂಧಿಸದಿದ್ದರೆ ಠಾಣೆ ಎದುರೇ ಅನಿರ್ಧಿಷ್ಟಾವಧಿ ಧರಣಿ ನಡೆಸುವುದಾಗಿ ಪ್ರಿಯಾಂಕಾ ಪೋಷಕರು ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments