Monday, June 15, 2026
Google search engine
Homeರಾಜ್ಯಜೈಪುರದಲ್ಲಿ ಲಂಚ ಕೇಳಿದ ಕರ್ನಾಟಕ ಪೊಲೀಸರು: ಸಹಿಸಲ್ಲ ಎಂದು ಸಚಿವ ಖರ್ಗೆ ಕಿಡಿ

ಜೈಪುರದಲ್ಲಿ ಲಂಚ ಕೇಳಿದ ಕರ್ನಾಟಕ ಪೊಲೀಸರು: ಸಹಿಸಲ್ಲ ಎಂದು ಸಚಿವ ಖರ್ಗೆ ಕಿಡಿ

ಬೆಂಗಳೂರು: ರಾಜ್ಯದ ಪೊಲೀಸರು ಜೈಪುರದಲ್ಲಿ ಲಂಚ ಕೇಳಿ ಸಿಕ್ಕಿಬಿದ್ದಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ, ಇದರಿಂದ ರಾಜ್ಯದ ಜನತೆಯ ಹಿತಕ್ಕೆ ಧಕ್ಕೆಯುಂಟಾಗಿದೆ. ರಕ್ಷಕರೇ ಭಕ್ಷಕರಾಗುವುದನ್ನು ಸಹಿಸಲಾಗುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.

ಲಂಚ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜೈಪುರದಲ್ಲಿ ಸಿಕ್ಕಿಬಿದ್ದ ಮೂವರು ಪೊಲೀರನ್ನು ಈಗಾಗಲೇ ಅಮಾನತು ಗೊಳಿಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ಸೋಮವಾರ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನಾಗರಿಕರಿಗೆ ತೊಂದರೆ ನೀಡಿ, ಲಂಚ ಕೇಳುವ ಭ್ರಷ್ಟಾಚಾರದ ವ್ಯವಸ್ಥೆಗೆ ಮೇಲಟ್ಟದಿಂದಲೂ ಕಡಿವಾಣ ಹಾಕಲು ಖಾಯಂ ವ್ಯವಸ್ಥೆಯನ್ನು ಶೀಘ್ರವೇ ರೂಪಿಸಲಾಗುವುದು ಎಂದು ಹೇಳಿದರು.
ಜೈಪುರದ ಲಂಚ ಪ್ರಕರಣದಲ್ಲಿ ಉನ್ನತಾಧಿಕಾರಿಗಳು ಭಾಗಿಯಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಆದೇಶಿಸಲಾಗಿದೆ ಎಂದರು.

ವ್ಯವಸ್ಥೆ ತುಕ್ಕು ಹಿಡಿದಿದೆ. ಅದನ್ನು ಸರಿಪಡಿಸಲು ಸ್ವಲ್ಪ ಸಮಯಬೇಕು. ಭ್ರಷ್ಟಾಚಾರವನ್ನು ಬೇರು ಮಟ್ಟದಿಂದ ಕಿತ್ತೊಗೆಯಬೇಕಿದೆ. ಇದನ್ನು ಕೆಳ ಹಂತದಲ್ಲಷ್ಟೇ ಅಲ್ಲ ಮೇಲಟ್ಟದಿಂದಲೂ ಸರಿಪಡಿಸಬೇಕಿದೆ. ಯಾರೇ ಹಣ ಕೇಳಿದರೂ ನಮಗೆ ದೂರು ನೀಡಿ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ.

ಪೊಲೀಸ್ ಠಾಣೆಗಳಲ್ಲಿ ಜನರಿಗೆ ತೊಂದರೆ ಕೊಡುವುದು, ಅವ್ಯವಹಾರ ಮಾಡುವುದು, ಲಂಚ ಕೇಳುವುದು, ಕರ್ತವ್ಯ ನಿರ್ವಹಿಸುವಾಗ ಭ್ರಷ್ಟಚಾರ ನಡೆಸುವುದು ಕಂಡು ಬಂದರೆ, ಜನರು ನೇರವಾಗಿ ನಮಗೆ ದೂರು ನೀಡುವ ವ್ಯವಸ್ಥೆಯನ್ನು ಗೃಹ ಇಲಾಖೆಯಲ್ಲಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ನನ್ನ ಇಲಾಖೆಯ ಆಗೂ- ಹೋಗುಗಳ ಹೊಣೆಗಾರಿಕೆಯನ್ನು ತೆಗೆದುಕೊಳ್ಳಲು ನಾನು ಸಿದ್ಧನಿದ್ದೇನೆ. ಅದೇ ರೀತಿ ಬಿಜೆಪಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಆರ್.ಅಶೋಕ್‌, ಬಸವರಾಜ ಬೊಮಾಯಿ, ಅರಗ ಜ್ಞಾನೇಂದ್ರ ಅವರ ಕಾಲದಲ್ಲಿ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಚಾರ ಇರಲಿಲ್ಲವೇ? ಈಗ ನಮ ಅಧಿಕಾರಿಗಳು ತಪ್ಪು ಮಾಡಿದರೆ, ನಾನು ಕ್ರಮ ಕೈಗೊಳ್ಳುವುದಾಗಿ ಧೈರ್ಯವಾಗಿ ಹೇಳುತ್ತಿದ್ದೇನೆ. ಇದೇ ರೀತಿ ಅಶೋಕ್ ಅವರು ಒಂದೇ ಒಂದು ಹೇಳಿಕೆಯನ್ನು ಜವಾಬ್ದಾರಿಯುತವಾಗಿ ನೀಡಿದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.

ಹಿಂದೆ ಅವರ ಸರ್ಕಾರದಲ್ಲಿ ಲಂಚಪಡೆಯುವಾಗ ಶಾಸಕರೇ ಲೋಕಾಯುಕ್ತ ದಾಳಿಗೆ ಸಿಲುಕಿದ್ದರು. ಅದಕ್ಕೆ ಬಿಜೆಪಿಯ ನಾಯಕರು ಏನು ಹೇಳುತ್ತಾರೆ. ಅದರ ಬಗ್ಗೆಯೂ ಅವರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಿ. ಬೇರೆಯವರ ಬಗ್ಗೆ ಮಾತನಾಡುವಾಗ ತಮ ಹೊಣೆಗಾರಿಕೆಗಳ ಬಗ್ಗೆ ಕೂಡ ನೈತಿಕವಾಗಿ ಪ್ರತಿಕ್ರಿಯಿಸಬೇಕೆಂದು ತಿರುಗೇಟು ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments