Monday, June 15, 2026
Google search engine
Homeಕ್ರೀಡೆಸೂಪರ್ ಓವರ್ ನಲ್ಲಿ ಮುಗ್ಗರಿಸಿದ ಭಾರತ ‘ಎ’: ಶ್ರೀಲಂಕಾಗೆ ರೋಚಕ ಜಯ

ಸೂಪರ್ ಓವರ್ ನಲ್ಲಿ ಮುಗ್ಗರಿಸಿದ ಭಾರತ ‘ಎ’: ಶ್ರೀಲಂಕಾಗೆ ರೋಚಕ ಜಯ

ಸೂಪರ್ ಓವರ್ ನಲ್ಲಿ ಮುಗ್ಗರಿಸಿದ ಭಾರತ `ಎ’ ವಿರುದ್ಧ ಏಕದಿನ ಪಂದ್ಯದಲ್ಲಿ ಶ್ರೀಲಂಕಾ `ಎ’ ತಂಡ ರೋಚಕ ಜಯ ಸಾಧಿಸಿದೆ.

ಡಂಬುಲಾದಲ್ಲಿ ಸೋಮವಾರ ನಡೆದ ಸರಣಿಯ 4ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 49.2 ಓವರ್ ಗಳಲ್ಲಿ 265 ರನ್ ಗೆ ಪತನಗೊಂಡಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಶ್ರೀಲಂಕಾ ತಂಡ ಕೊನೆಯ ಎಸೆತದಲ್ಲಿ ಎಡವಿದ್ದರಿಂದ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 265 ಕಲೆ ಹಾಕಿದ್ದರಿಂದ ಟೈನಲ್ಲಿ ಅಂತ್ಯಗೊಂಡಿತು.

ನಂತರ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಎ ತಂಡ 16 ರನ್ ಕಲೆ ಹಾಕಿದರೆ ಭಾರತ 9 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲುಂಡಿತು. ವೈಭವ್ ಸೂರ್ಯವಂಶಿ 3 ಎಸೆತಗಳಲ್ಲಿ 6 ರನ್ ಗಳಿಸಲಷ್ಟೇ ಶಕ್ತವಾದರು.

ಇದಕ್ಕು ಮುನ್ನ ಶ್ರೀಲಂಕಾದ ಬೌಲರ್ ಗಳ ದಾಳಿಗೆ ತತ್ತರಿಸಿದ ಭಾರತ ನಿಯಮಿತವಾಗಿ ವಿಕೆಟ್ ಕಳೆದುಕೊಂಡು ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. ಕೆಳ ಕ್ರಮಾಂಕದಲ್ಲಿ ಸೂರ್ಯಾಂಶ್ ಶಿಂಧೆ 66 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 72 ರನ್ ಬಾರಿಸಿದರು. 9ನೇ ಕ್ರಮಾಂಕದಲ್ಲಿ ಆಡಲು ಬಂದ ವಿಪ್ರಜ್ ನಿಗಮ್ 49 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ ಅರ್ಧಶತಕ ಗಳಿಸಿದ್ದೂ ಅಲ್ಲದೇ ತಂಡದ ಮೊತ್ತ ಉಬ್ಬಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮತ್ತೊಂದೆಡೆ ಶ್ರೀಲಂಕಾ ತಂಡ ಕೂಡ ನಿಯಮಿತವಾಗಿ ವಿಕೆಟ್ ಕಳೆದುಕೊಂಡರೂ ಸಧೀರ ಸಮರವಿಕ್ರಮ 113 ಎಸೆತಗಳಲ್ಲಿ 7 ಬೌಂಡರಿ ಸಹಾಯದಿಂದ 93 ರನ್ ಬಾರಿಸಿದ್ದಾಗ ಔಟಾಗಿ ಶತಕ ವಂಚಿತರಾದರು. ಆರಂಭಿಕ ನಿರೋಶನ್ 37 ರನ್ ಬಾರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments