Saturday, June 20, 2026
Google search engine
Homeರಾಜ್ಯಕಳಪೆ ರಸ್ತೆ ಕಾಮಗಾರಿ: ಅಧಿಕಾರಿ ಸಸ್ಪಂಡ್, ಕಂಪನಿ ಬ್ಲಾಕ್ ಲಿಸ್ಟ್ ಗೆ ಹಾಕಿದ ಸಚಿವ ಕೃಷ್ಣ...

ಕಳಪೆ ರಸ್ತೆ ಕಾಮಗಾರಿ: ಅಧಿಕಾರಿ ಸಸ್ಪಂಡ್, ಕಂಪನಿ ಬ್ಲಾಕ್ ಲಿಸ್ಟ್ ಗೆ ಹಾಕಿದ ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿಕೊಂಡ ಬೆನ್ನಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಸಚಿವ ಕೃಷ್ಣ ಬೈರೇಗೌಡ, ಕಳಪೆ ರಸ್ತೆ ಕಾಮಗಾರಿ ಮಾಡಿದ ಕಂಪನಿಯನ್ನು ಬ್ಲಾಕ್ ಲಿಸ್ಟ್ ಗೆ ಹಾಕಲು ಹಾಗೂ ಅನುಮೋದಿಸಿದ ಅಧಿಕಾರಿಯನ್ನು ಅಮಾನತು ಮಾಡುವಂತೆ ಸೂಚಿಸಿದ್ದಾರೆ.

ವಾರ್ಡ್ ಸಂಖ್ಯೆ 110 ಸಂಪಂಗಿರಾಮನಗರ ವ್ಯಾಪ್ತಿಯಲ್ಲಿ ಇನ್‌ಫ್ರಾಸ್ಟಕ್ಟರ್‌ ಪ್ರೋಗ್ರಾಮ್ ಅಡಿಯಲ್ಲಿ ಆರ್ಟೀಲಿಯಲ್ ಮತ್ತು ಸಬ್ ಆರ್ಟೀಲಿಯಲ್ ರಸ್ತೆಗಳಲ್ಲಿ ಕೈಗೊಂಡಿರುವ ಆಸ್ಟಾಲಿಂಗ್ ಕಾಮಗಾರಿಗಳಲ್ಲಿ ಕಳಪೆ ನಿರ್ಮಾಣ ಮಾಡಿರುವುದು ಕಂಡುಬಂದಿದೆ.

ಕಾಮಗಾರಿ ನಿರ್ವವಹಿಸಿರುವ ಸಂರ್ಭದಲ್ಲಿ ಕ್ರಿಯಾಯೋಜನೆ ಅನುಸಾರ ಸರಿಯಾದ ಪ್ರಮಾಣದ (Proportionate) ಹಾಗೂ ದಪ್ಪ (Thickness) ಆಸ್ಪಾಲ್ಡಿಂಗ್ ಮಾಡದೆ ಕಡಿಮೆ ಪ್ರಮಾಣದಲ್ಲಿ ಆಸ್ಪಾಲಿಂಗ್ ಮಾಡಿರುವುದು ಕಂಡುಬಂದಿರುತ್ತದೆ.

ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ಗುತ್ತಿಗೆದಾರರ ಜೊತೆ ಶಾಮೀಲಾಗಿ ಕರ್ತವ್ಯ ಲೋಪ ಎಸಗಿದ ಕಾರಣಕ್ಕೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ವಾರ್ಡ್ ಸಂಖ್ಯೆ 110 ಸಂಪಂಗಿರಾಮನಗರ ರಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಅಭಿಯಂತರರಾದ ಪೂಜಾರಪ್ಪ ಅವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ 1957ರ ಸಿಸಿಎ ನಿಯಮ 10 ರನ್ನಯ ಸೇವೆಯಿಂದ ಅಮಾನತ್ತುಪಡಿಸಿ ಆದೇಶಿಸಿದೆ. ಅಲ್ಲದೆ ಗುತ್ತಿಗೆದಾರರ ಕಂಪೆನಿಯನ್ನೂ ಬ್ಲಾಕ್ ಲಿಸ್ಟ್ ಮಾಡಿ ಆದೇಶಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments