Monday, May 25, 2026
Google search engine
Homeಕ್ರೀಡೆWPL ಅಂತಿಮ 4 ಎಸೆತದಲ್ಲಿ 20 ರನ್ ಕೊಳ್ಳೆ ಹೊಡೆದು ಆರ್ ಸಿಬಿ ರೋಚಕ ಜಯ...

WPL ಅಂತಿಮ 4 ಎಸೆತದಲ್ಲಿ 20 ರನ್ ಕೊಳ್ಳೆ ಹೊಡೆದು ಆರ್ ಸಿಬಿ ರೋಚಕ ಜಯ ತಂದ ನಾದಿನೆ!

ಬೌಲಿಂಗ್ ನಲ್ಲಿ 4 ವಿಕೆಟ್ ಪಡೆದು ಮಿಂಚಿದ್ದ ನಾದಿನೆ ಡೆ ಕ್ಲಾರ್ಕ್ ಪಂದ್ಯದ ಕೊನೆಯ ಓವರ್ ನಲ್ಲಿ 18 ರನ್ ಚಚ್ಚಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಡಬ್ಲೂಪಿಎಲ್ ಟಿ-20 ಟೂರ್ನಿಯ ಭರ್ಜರಿ ಆರಂಭ ತಂದುಕೊಟ್ಟಿದ್ದಾರೆ.

ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನ ಮುಂಬೈ ಇಂಡಿಯನ್ಸ್ ತಂಡವನ್ನು ಮೊದಲು ಬ್ಯಾಟ್ ಮಾಡುವಂತೆ ಆಹ್ವಾನಿಸಿದರು.

ಕಠಿಣ ಗುರಿ ಬೆಂಬತ್ತಿದ ಆರ್ ಸಿಬಿ ನಾದಿನೆ ಅವರ ಆಲ್ ರೌಂಡ್ ಪ್ರದರ್ಶನದಿಂದ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಆರ್ ಸಿಬಿ ತಂಡಕ್ಕೆ ಸ್ಮೃತಿ ಮಂದಾನ (18) ಮತ್ತು ಗ್ರೇಸ್ ಹ್ಯಾರಿಸ್ (25) ಮೊದಲ ವಿಕೆಟ್ ಗೆ 40 ರನ್ ಜೊತೆಯಾಟದಿಂದ ಉತ್ತಮ ಆರಂಭ ನೀಡಿದರು. ಆದರೆ ಇವರಿಬ್ಬರು ಬೇಗನೇ ನಿರ್ಗಮಿಸುತ್ತಿದ್ದಂತೆ ತಂಡ ನಾಟಕೀಯ ಕುಸಿತಕ್ಕೆ ಒಳಗಾಯಿತು.

ತಂಡದ 65 ರನ್ ಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೆ ಒಳಗಾಗಿತ್ತು. ಈ ಹಂತದಲ್ಲಿ ಅಖಾಡಕ್ಕೆ ಇಳಿದ ನಾದಿನೆ 44 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ ಅಜೇಯ 63 ರನ್ ಸಿಡಿಸಿ ಗೆಲುವಿನ ರೂವಾರಿ ಆದರು.

ಅರುಂಧತಿ ರೆಡ್ಡಿ ಜೊತೆ ನಾದಿನೆ 6ನೇ ವಿಕೆಟ್ ಗೆ 52 ರನ್ ಜೊತೆಯಾಟದಿಂದ ತಂಡದ ಪರ ಹೋರಾಟ ನಡೆಸಿದರು. ಅರುಂಧತಿ 20 ರನ್ ಗಳಿಸಿ ಔಟಾದರೆ, ಪ್ರಿಯಾಂಕಾ ಪಾಟೀಲ್ 1 ರನ್ ಗೆ ಔಟಾಗಿದ್ದಂತೆ ತಂಡ ಮತ್ತೆ ಒತ್ತಡಕ್ಕೆ ಸಿಲುಕಿತು.

ಮುಂಬೈ ಇಂಡಿಯನ್ಸ್ ಬೌಲರ್ ಗಳು ಬಿಗುವಿನ ದಾಳಿ ನಡೆಸಿದ್ದರಿಂದ ಪಂದ್ಯ ಗೆಲ್ಲಲು ಆರ್ ಸಿಬಿ ಗೆ ಕೊನೆಯ ಓವರ್ ನಲ್ಲಿ 18 ರನ್ ಬೇಕಿತ್ತು. ಈ ಹಂತದಲ್ಲಿ ನಾದಿನೆ ಮೊದಲೆರಡು ಎಸೆತಗಳಲ್ಲಿ ರನ್ ಗಳಿಸಲು ಆಗದೇ ಪರದಾಡಿದ್ದರಿಂದ ಸೋಲು ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ನಾದಿನೆ ಕೊನೆಯ 4 ಎಸೆತಗಳಲ್ಲಿ ಸಿಕ್ಸರ್ ಬೌಂಡರಿ ಸೇರಿದಂತೆ 20 ರನ್ ಕೊಳ್ಳೆ ಹೊಡೆದು ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ನಾದಿನೆ ಮಾರಕ ದಾಳಿಗೆ ತತ್ತರಿಸಿ ಸಾಧಾರಣ ಮೊತ್ತ ಕಲೆ ಹಾಕಿತು.

ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಆರ್ ಸಿಬಿ ದಾಳಿಗೆ ತತ್ತರಿಸಿ ಒಂದು ಹಂತದಲ್ಲಿ 67 ರನ್ ಗೆ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿತ್ತು.

ಈ ಹಂತದಲ್ಲಿ ಜೊತೆಯಾದ ನಿಕೊಲಾ ಕ್ಯಾರಿ 29 ಎಸೆತಗಳಲ್ಲಿ 4 ಬೌಂಡರಿ ಒಳಗೊಂಡ 40 ರನ್ ಬಾರಿಸಿದರೆ, ಸಂಜೀವನ ಸಾಜನ 25 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 45 ರನ್ ಸಿಡಿಸಿದರು. ಇವರಿಬ್ಬರು 5ನೇ ವಿಕೆಟ್ ಗೆ 82 ರನ್ ಜೊತೆಯಾಟದಿಂದ  ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.

ಆರಂಭಿಕ ಆಟಗಾರ್ತಿ ಗುನಲಾನ್ ಕಮಲಿನಿ 32 ರನ್ ಬಾರಿಸಿದರೆ, ನಾಯಕಿ ಹರ್ಮನ್ ಪ್ರೀತ್ ಕೌರ್ 20 ರನ್ ಗಳಿಸಿ ನಿರಾಸೆ ಮೂಡಿಸಿದರು.

ಆರ್ ಸಿಬಿ ಪರ ಪರಿಣಾಮಕಾರಿ ದಾಳಿ ನಡೆಸಿದ ನಾದಿನೆ ಡೆ ಕ್ಲಾರ್ಕ್ 26 ರನ್ ನೀಡಿ 4 ವಿಕೆಟ್ ಪಡೆದರು. ಲೌರನ್ ಬೆಲ್ ಮತ್ತು ಶ್ರೇಯಾಂಕಾ ಪಾಟೀಲ್ ತಲಾ 1 ವಿಕೆಟ್ ಗಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments