ಉತ್ತರ ಪ್ರದೇಶ ಸರ್ಕಾರವು ಪ್ರಯಾಗ್ರಾಜ್‌ನಲ್ಲಿ ನಡೆಯುವ ಮಹಾ ಕುಂಭಮೇಳ 2025ಕ್ಕಾಗಿ ಅದ್ದೂರಿ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಈ ವರ್ಷ ನಡೆಯುವ ಕುಂಭಮೇಳದಲ್ಲಿ ಜಗತ್ತಿನಾದ್ಯಂತ 40 ಕೋಟಿ ಭಕ್ತರು ಆತಿಥ್ಯ ವಹಿಸುವ ನಿರೀಕ್ಷೆಯಿದ್ದು, ಭಕ್ತರಿಗೆ ಆತಿಥ್ಯ ಕಲ್ಪಿಸಲು ಸಕಲ ಸೌಲಭ್ಯಗಳುಳ್ಳ ಟೆಂಟ್ ನಗರಿಯನ್ನು ನಿರ್ಮಿಸಲಾಗುತ್ತಿದೆ.
ಈ 45 ದಿನಗಳ ಉತ್ಸವವು ಜನವರಿ 13ರಿಂದ ಫೆಬ್ರವರಿ 26ರವರೆಗೆ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳನ್ನು ಪ್ರದರ್ಶಿಸುತ್ತದೆ.
ಮಹಕುಂಭ ಗ್ರಾಮ ಐಷಾರಾಮಿ ಟೆಂಟ್ ಸಿಟಿಯಂತಹ ಸೂಪರ್ ಡೀಲಕ್ಸ್ ವಸತಿಗಳನ್ನು ಒಳಗೊಂಡಂತೆ ಮಹಾಕುಂಭ ನಗರವನ್ನು ಸಾವಿರಾರು ಟೆಂಟ್ಗಳು ಮತ್ತು ಆಶ್ರಯಗಳೊಂದಿಗೆ ತಾತ್ಕಾಲಿಕ ನಗರವಾಗಿ ಪರಿವರ್ತಿಸಲಾಗುತ್ತಿದೆ.
ಇದು ಆಧುನಿಕ ಸೌಕರ್ಯಗಳೊಂದಿಗೆ ಡೀಲಕ್ಸ್ ಟೆಂಟ್ ಗಳು ಮತ್ತು ವಿಲ್ಲಾಗಳನ್ನು ನೀಡುತ್ತದೆ. 92 ರಸ್ತೆಗಳ ನವೀಕರಣ ಮತ್ತು 17 ಪ್ರಮುಖ ರಸ್ತೆಗಳ ಅಗಲೀಕರಣ ಮುಕ್ತಾಯದ ಹಂತದಲ್ಲಿದೆ.
ಮಹಾಕುಂಭ ಮೇಳ ಫೆಬ್ರವರಿ 26ರಂದು ಮಹಾ ಶಿವರಾತ್ರಿಯಂದು ಮುಕ್ತಾಯಗೊಳ್ಳುತ್ತದೆ. ಈ ಮೇಳ ನಡೆಯುವ ಪ್ರದೇಶವನ್ನು 1.6 ಲಕ್ಷ ಟೆಂಟ್‌ಗಳು, 1.5 ಲಕ್ಷ ಶೌಚಾಲಯಗಳನ್ನು ಸಿದ್ಧಪಡಿಸಲಾಗಿದೆ.
1250 ಕಿಮೀ ಉದ್ದದ ಪೈಪ್ಲೈನ್ ನೀರಿನ ಪೂರೈಕೆಯನ್ನು ಒದಗಿಸಲಾಗುತ್ತದೆ. 67,000 ಎಲ್‌ಇಡಿ ದೀಪಗಳು, 2000 ಸೌರ ದೀಪಗಳ ವ್ಯವಸ್ಥೆ ಮಾಡಲಾಗಿದೆ.
3,308 ಪಾಂಟೂನ್‌ಗಳನ್ನು (ರಬ್ಬರ್ ತೂಗು ಸೇತುವೆ) ಬಳಸಿಕೊಂಡು 30 ಪಾಂಟೂನ್ ಸೇತುವೆಗಳ ನಿರ್ಮಾಣ ನಡೆಯುತ್ತಿದೆ. ಅವುಗಳಲ್ಲಿ 28 ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ.
ಈ ಸೇತುವೆಗಳು ಕುಂಭ ಮೇಳದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಳೀಯ ನಿವಾಸಿಗಳು, ಸಂತರು ಮತ್ತು ಆಡಳಿತಾಧಿಕಾರಿಗಳಿಗೆ ಸಂಚಾರವನ್ನು ಸುಗಮಗೊಳಿಸುತ್ತದೆ.
3000 ವಿಶೇಷ ರೈಲುಗಳ ವ್ಯವಸ್ಥೆ
ಪ್ರಯಾಗರಾಜ್‌ನಲ್ಲಿ ಮಹಾಕುಂಭ ಜನವರಿ ೧೩ರಂದು ಪ್ರಾರಂಭವಾಗುತ್ತದೆ. ಭಾರತೀಯ ರೈಲ್ವೆ 3000 ವಿಶೇಷ ರೈಲುಗಳನ್ನು ನಿರ್ವಹಿಸಲಿದೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿರುವ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಜನವರಿ 13ರಂದು ಮಹಾ ಕುಂಭಮೇಳ ಪ್ರಾರಂಭವಾಗಲಿದೆ.
3000 ವಿಶೇಷ ರೈಲುಗಳ ಕಾರ್ಯಾಚರಣೆ ಸೇರಿದಂತೆ ಭಕ್ತರ ಒಳಹರಿವಿಗೆ ಅನುಕೂಲವಾಗುವಂತೆ ಭಾರತೀಯ ರೈಲ್ವೇ ಸಮಗ್ರ ವ್ಯವಸ್ಥೆಗಳನ್ನು ಪ್ರಕಟಿಸಿದೆ. ಈ ಪೈಕಿ 560 ರೈಲುಗಳು ರಿಂಗ್ ರೈಲು ಮಾರ್ಗಗಳಲ್ಲಿ ಸಂಚರಿಸಲಿವೆ.
ಭಾರತೀಯ ರೈಲ್ವೆಯು 15 ದಿನಗಳ ಮುಂಚಿತವಾಗಿ ಟಿಕೆಟ್ಗಳನ್ನು ಕಾಯ್ದಿರಿಸಲು ಅನುಮತಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.