Monday, May 11, 2026
Home ದೇಶ 1988ರ ನಂತರ ಪಂಜಾಬ್‌ ನಲ್ಲಿ ಭೀಕರ ಪ್ರವಾಹ: 37 ಮಂದಿ ಬಲಿ

1988ರ ನಂತರ ಪಂಜಾಬ್‌ ನಲ್ಲಿ ಭೀಕರ ಪ್ರವಾಹ: 37 ಮಂದಿ ಬಲಿ

by Vahini
0 comments
punjab flood

1988ರ ನಂತರ ಇದೇ ಮೊದಲ ಬಾರಿ ಭಾರೀ ಮಳೆಯಾಗಿದ್ದು, ಇದರಿಂದ ರಾಜ್ಯದ 23 ಜಿಲ್ಲೆಗಳಲ್ಲೂ ಸೄಷ್ಟಿಯಾದ ಪ್ರವಾಹದಿಂದ 37 ಮಂದಿ ಮೃತಪಟ್ಟಿದ್ದಾರೆ.

ಪಂಜಾಬ್‌ ನ ಪ್ರಮುಖ ನದಿಗಳಾದ ಸಟ್ಲೇಜ್‌, ರವಿ ಹಾಗೂ ಬಿಯಾಸ್‌ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಜನಿಸುವ ಈ ನದಿಗಳು ಈಗಾಗಲೇ ಈಎರಡೂ ರಾಜ್ಯಗಳಲ್ಲಿ ಅಪಾರ ಹಾನಿ ಉಂಟು ಮಾಡಿದ್ದು, ಇದೀಗ ಪಂಜಾಬ್‌ ನಲ್ಲಿ ಹಾವಳಿ ಸೃಷ್ಟಿಸುತ್ತಿದೆ.

ನದಿಗಳು ಉಕ್ಕಿ ಹರಿಯುತ್ತಿರುವ ನಡುವೆಯೇ ಭಾರೀ ಮಳೆಯಿಂದ ಪರಿಸ್ಥಿತಿ ಬಿಗಡಾಯಿಸಿದ್ದು, ರಾಜ್ಯದ ಎಲ್ಲಾ 23 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಗುರುದಾಸ್‌ ಪುರ, ಪಠಾಣ್‌ ಕೋಟ್‌, ಫಜಿಕಿಲಾ, ಕಪುರ್ತಾಲಾ, ತರಣ್‌ ತರಣ್‌, ಫಿರೋಜ್‌ ಪುರ್‌, ಹೋಶಿರ್‌ ಪುರ್‌ ಮತ್ತು ಅಮೃತಸರ ಜಿಲ್ಲೆಗಳು ಹೆಚ್ಚು ಹಾನಿಗೀಡಾಗಿದ್ದು, ಪರಿಹಾರ ಕಾರ್ಯಗಳು ನಡೆದಿವೆ.

You may also like

Leave a Comment

Our Company

Lorem ipsum dolor sit amet, consect etur adipiscing elit. Ut elit tellus, luctus nec ullamcorper mattis.

Newsletter

Laest News

@2021 – All Right Reserved. Designed and Developed by PenciDesign