ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಶುಕ್ರವಾರ ಬೆಳಿಗ್ಗೆ ಕೊಯಮತ್ತೂರಿನಲ್ಲಿ ಛಾಟಿಯಿಂದ ಹೊಡೆದುಕೊಂಡು ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದಾರೆ.
ಕೊಯಮತ್ತೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯದಲ್ಲಿ ಡಿಎಂಕೆ ಪಕ್ಷದ ಆಡಳಿತದಿಂದ ಕಾನೂನು ಮತ್ತು ಸುರಕ್ಷತೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದ ಅಣ್ಣಾಮಲೈ ಶುಕ್ರವಾರ ಬೆಳಿಗ್ಗೆ ೬ ಬಾರಿ ಛಾಟಿಯಲ್ಲಿ ಹೊಡೆದುಕೊಂಡು ಪ್ರತಿಭಟನೆ ನಡೆಸಿದರು.
ಹಸಿರು ಬಣ್ಣದ ಲುಂಗಿ ಧರಿಸಿದ್ದ ಅಣ್ಣಾಮಲೈ ಮೈಮೇಲೆ ಬಟ್ಟೆ ಧರಿಸದೇ ಬರೀ ಮೈ ಮೇಲೆ ೬ ಬಾರಿ ಛಡಿಯೇಟು ಹೊಡೆದುಕೊಂಡರು. ಈ ವಿಶಿಷ್ಟ ಪ್ರತಿಭಟನೆಯನ್ನು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜ್ಯದಲ್ಲಿ ಡಿಎಂಕೆ ಸರ್ಕಾರ ಪತನಗೊಳ್ಳುವವರೆಗೂ ನಾನು ಬರಿಗಾಲಲ್ಲಿ ನಡೆಯುತ್ತೇನೆ. ನಾನು ಚುನಾವಣೆ ಗೆಲ್ಲಲು ಹಣ ಹಂಚಲ್ಲ. ಹಣ ಕೊಡದೇ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಅಲ್ಲಿಯವರೆಗೂ ನಾನು ಚಪ್ಪಲಿ ಧರಿಸದೇ ಬರಿಗಾಲಲ್ಲಿ ನಡೆಯುತ್ತೇನೆ ಎಂದು ಅವರು ಇದೇ ವೇಳೆ ಘೋಷಿಸಿದ್ದಾರೆ.
ಇದೇ ವೇಳೆ ದುಷ್ಟಶಕ್ತಿಗಳನ್ನು ಹೊಡೆದೋಡಿಸಲು ನಾಳೆ 6 ಬಾರಿ ಚಾಟಿಯಿಂದ ಹೊಡೆದುಕೊಳ್ಳುವೆ ಹಾಗೂ ರಾಜ್ಯದಲ್ಲಿ ಮುರುಗನ್ ದೇವರಿಗಾಗಿ 48 ಗಂಟೆಗಳ ಉಪವಾಸ ಹಮ್ಮಿಕೊಂಡಿರುವುದಾಗಿ ಅಣ್ಣಾಮಲೈ ಹೇಳಿದರು.