ನೆವದೆಹಲಿ: ನಿರರ್ಗಳ ಭಾಷಣಕ್ಕೆ ಹೆಸರಾದ ಪಿಎಂ ಮೋದಿ ಸಹ ಟೆಲೆಪ್ರಾಂಪ್ಟರ್ (ಓದು ಪರದೆ) ಕೈಕೊಟ್ಟ ಕಾರಣ ಕೆಲ ಕಾಲ ಭಾಷಣ ನಿಲ್ಲಿಸುವಂತಾಗಿ ಮುಜುಗರಕ್ಕೀಡಾದ ಪ್ರಸಂಗ ನಡೆದಿದೆ.
ದಿಲ್ಲಿ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿಗೆ ಟೆಲಿಪ್ರಾಂಪ್ಟರ್ ಕೈಕೊಟ್ಟಿತು. ಟೆಲಿಪ್ರಾಂಪ್ಟರ್ ಕೈ ಕೊಟ್ಟಿದ್ದಕ್ಕೆ ಮೋದಿ ಒಂದು ಕ್ಷಣ ಮೌನಕ್ಕೆ ಜಾರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಚಾರವನ್ನು ಇಟ್ಟುಕೊಂಡು ಕಾಂಗ್ರೆಸ್ ಹಾಗೂ ಎಎಪಿ ಮೋದಿ ಮೇಲೆ ಮುಗಿಬಿದ್ದಿವೆ.
ಟೆಲಿಪ್ರಾಂಪ್ಟರ್ ಸಹಾಯವಿಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಲಾರರು ಎಂದು ಕಾಂಗ್ರೆಸ್ ಆರೋಪಿಸಿದೆ.
ಇನ್ನು, ತಮ್ಮ ಭಾಷಣದಲ್ಲಿ ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಎಎಪಿ ಸರ್ಕಾರ ದಿಲ್ಲಿಯ ಪಾಲಿಗೆ ವಿಪತ್ತು, ದಿಲ್ಲಿಯ ಈ ವಿಪತ್ತಿನಿಂದ ಪಾರಾದ ನಂತರವೇ ಅಭಿವೃದ್ಧಿಯ ಡಬಲ್ ಇಂಜಿನ್ ಅಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದ್ದರು.
ರೋಹಿಣಿ ಬಡಾವಣೆಯಲ್ಲಿ ದೆಹಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, `ಎಎಪಿ ಸರ್ಕಾರ ದೆಹಲಿಯ ಪಾಲಿಗೆ `ವಿಪತ್ತು’. ದೆಹಲಿಯು ಈ `ವಿಪತ್ತಿ’ನಿಂದ ಪಾರಾದ ನಂತರವೇ ಅಭಿವೃದ್ಧಿಯ ಡಬಲ್ ಎಂಜಿನ್ ಇಲ್ಲಿ ಕಾರ್ಯಾರಂಭ ಮಾಡಲಿದೆ ಎಂದಿದ್ದರು.
ಎಎಪಿ ಸರ್ಕಾರ ರಾಜಧಾನಿಯಲ್ಲಿ ಕೇಂದ್ರದ ಜೊತೆಗೆ ಸಂಘರ್ಷ ಮಾಡುತ್ತಲೇ ಒಂದು ದಶಕ ಪೋಲು ಮಾಡಿತು. ಇಲ್ಲಿ ಅಭಿವೃದ್ಧಿ ಯೋಜನೆಗಳ ಸಾಕಾರಕ್ಕಾಗಿ ಬಿಜೆಪಿಗೆ ಒಂದು ಅವಕಾಶ ಕಲ್ಪಿಸಬೇಕು ಎಂದು ಹೇಳಿದ್ದರು.
ಕಾಂಗ್ರೆಸ್ ಟೀಕೆ: ಟೆಲಿಪ್ರಾಂಪ್ಟರ್ ಇಲ್ಲದೆ ಒಂದು ಶಬ್ದ ಕೂಡ ಮಾತಾಡಲು ಸಾಧ್ಯವೇ ಇಲ್ಲ ಎಂದು ಮೋದಿ ಅವರ ದೆಹಲಿ ಚುನಾವಣಾ ಪ್ರಚಾರ ಕಾರ್ಯಕ್ರಮದ ವಿಡಿಯೊ ಹಂಚಿಕೊಂಡಿದೆ.
`ದೆಹಲಿಯಲ್ಲಿ ಚುನಾವಣಾ ಪ್ರಚಾರ ಭಾಷಣದ ವೇಳೆ ಟೆಲಿಪ್ರಾಂಪ್ಟರ್ ಕೈಕೊಟ್ಟಾಗ ಮೋದಿಯಿಂದ ‘ಮೌನವೃತ’ ಆಚರಣೆ.. ನರೇಂದ್ರ ಮೋದಿ ಟೆಲಿಪ್ರಾಂಪ್ಟರ್ ಇಲ್ಲದೆ ಒಂದು ಶಬ್ದ ಕೂಡ ಮಾತಾಡಲು ಸಾಧ್ಯವೇ ಇಲ್ಲ… ಏಕೆಂದರೆ ‘ಒಳಗಡೆ’ ಏನೂ ಇಲ್ಲ.. ಎಂದು ಕಾಂಗ್ರೆಸ್ ಕುಹಕವಾಡಿದೆ.