Sunday, December 7, 2025
Google search engine
Homeಕಾನೂನುಚುನಾವಣಾ ಆಯುಕ್ತರ ನೇಮಕ ತಕರಾರು: ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು

ಚುನಾವಣಾ ಆಯುಕ್ತರ ನೇಮಕ ತಕರಾರು: ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದ 2023ರ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಫೆಬ್ರವರಿಯಲ್ಲಿ ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ಬುಧವಾರ ತಿಳಿಸಿದೆ.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ಕಾಯ್ದೆ, 2023ಕ್ಕೆ ಸಂಬಂಧಿಸಿದ ವಿಷಯವು “ವಿಚಾರಣೆಗೆ ಸಾಕಷ್ಟು ಸಮಯ ಬೇಕಾಗುತ್ತದೆ” ಮತ್ತು ಅಂತಿಮವಾಗಿ “ಇದು ನ್ಯಾಯಾಲಯದ ಅಭಿಪ್ರಾಯ, ಶಾಸಕಾಂಗ ಅಧಿಕಾರಗಳ ಪ್ರಕರಣವಾಗಿರುತ್ತದೆ” ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಅರ್ಜಿದಾರರಿಗೆ ತಿಳಿಸಿದರು.

ಸಂವಿಧಾನದ 324ನೇ ಪರಿಚ್ಛೇದದ ಪ್ರಕಾರ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕವನ್ನು ಸಂಸತ್ತು ಮಾಡುವ ಯಾವುದೇ ಕಾನೂನಿನ ನಿಬಂಧನೆಗಳಿಗೆ ಒಳಪಟ್ಟು ರಾಷ್ಟ್ರಪತಿಗಳು ಮಾಡಬೇಕು.

ಸಿಇಸಿ ಮತ್ತು ಇಸಿಗಳ ನೇಮಕಾತಿಗೆ ಕೊಲಿಜಿಯಂ ಮಾದರಿಯ ವ್ಯವಸ್ಥೆಯನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಐದು ನ್ಯಾಯಾಧೀಶರ ಸಂವಿಧಾನ ಪೀಠವು 2023ರಲ್ಲಿ ತೀರ್ಪು ನೀಡಿತ್ತು.

ಅದರಂತೆ ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರನ್ನು ಒಳಗೊಂಡ ಸಮಿತಿಯ ಸಲಹೆಯ ಮೇರೆಗೆ ನೇಂಕ ಮಾಡಲು ಹೇಳಿತ್ತು.

ಆದಾಗ್ಯೂ, ಮೋದಿ ನೇತೃತ್ವದ ಸರಕಾರವು ಮುಖ್ಯ ಚುನಾವಣಾ ಆಯೋಗ ಮತ್ತು ಇತರ ಚುನಾವಣಾ ಆಯೋಗಗಳ ಕಾಯ್ದೆಯನ್ನು ತಂದು ಸಿಜೆಐ ಅವರನ್ನು ಸಮಿತಿಯಿಂದ ಹೊರಗಿಟ್ಟಿತು.

ಹೊಸ ಕಾನೂನಿನ ಪ್ರಕಾರ, ಆಯ್ಕೆ ಸಮಿತಿಯು ಪ್ರಧಾನಿ, ಕೇಂದ್ರ ಕ್ಯಾಬಿನೆಟ್ ಸಚಿವರು ಮತ್ತು ವಿರೋಧ ಪಕ್ಷದ ನಾಯಕ ಅಥವಾ ಲೋಕಸಭೆಯಲ್ಲಿ ಅತಿದೊಡ್ಡ ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿರುತ್ತದೆ.

ಇದನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಮಧ್ಯಪ್ರದೇಶ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಸುಪ್ರೀಂ ಕೋರ್ಟಲ್ಲಿ ಪ್ರಶ್ನಿಸಿದ್ದರು, ಆದರೆ ನ್ಯಾಯಾಲಯವು ಇಲ್ಲಿಯವರೆಗೆ ಹೊಸ ಕಾನೂನಿಗೆ ತಡೆ ನೀಡಲು ನಿರಾಕರಿಸಿದೆ.

ಪ್ರಸ್ತುತ ಸಿಇಸಿ ಮುಂದಿನ ತಿಂಗಳು ನಿವೃತ್ತರಾಗುತ್ತಿರುವುದರಿಂದ ಮುಂದಿನ ವಾರ ಈ ವಿಷಯವನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ವಕೀಲ ಪ್ರಶಾಂತ್ ಭೂಷಣ್ ಬುಧವಾರ ನ್ಯಾಯಪೀಠವನ್ನು ಕೋರಿದರು. ಮಾರ್ಚ್ 2023 ರ ಸಂವಿಧಾನ ಪೀಠದ ತೀರ್ಪಿನಲ್ಲಿ ಈ ಪ್ರಶ್ನೆ ಒಳಗೊಂಡಿದೆ ಎಂದು ಅವರು ಸಲ್ಲಿಸಿದರು.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಫೆಬ್ರವರಿ ೫ ರಂದು ದೆಹಲಿ ವಿಧಾನಸಭಾ ಚುನಾವಣೆ ಮುಗಿದ ಬಳಿಕ ನಿವೃತ್ತರಾಗಲಿದ್ದಾರೆ.

ಫೆಬ್ರವರಿ 3 ರಂದು ನ್ಯಾಯಾಲಯಕ್ಕೆ ನೆನಪಿಸುವಂತೆ ನ್ಯಾಯಮೂರ್ತಿ ಕಾಂತ್ ವಕೀಲರನ್ನು ಕೇಳಿದರು, ಇದರಿಂದ ಈ ವಿಷಯವನ್ನು ಫೆಬ್ರವರಿ 4ರಂದು ಪರಿಗಣಿಸಬಹುದು ಎಂದು ಭಾವಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments