ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ ಕರ್ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯ ಪ್ರಸ್ತಾಪವನ್ನು ಉಪಾಧ್ಯಕ್ಷರು ತಿರಸ್ಕರಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಏಕಪಕ್ಷೀಯವಾಗಿ ಕಲಾಪ ನಡೆಸುತ್ತಿದ್ದಾರೆ. ಪ್ರತಿಪಕ್ಷಗಳಿಗೆ ಮಾತನಾಡಲು ಅವಕಾಶ ನೀಡದೇ ಬಿಜೆಪಿ ಪರ ನಿಲುವು ತೋರಿದ್ದಾರೆ ಎಂದು ಆರೋಪಿಸಿ ಅವಿಶ್ವಾಸ ನಿರ್ಣಯ ಮಂಡನೆಗೆ ಒತ್ತಾಯಿಸಿದ್ದವು.
ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ಪ್ರಸ್ತಾಪ ತಿರಸ್ಕರಿಸಿದ ಉಪಾಧ್ಯಕ್ಷ ಹರಿವಂಶ್, ಪ್ರತಿಪಕ್ಷಗಳು 14 ದಿನಗಳ ಮುನ್ನ ನೋಟಿಸ್ ನೀಡಿಲ್ಲ ಹಾಗೂ ಜಗದೀಪ್ ಧನ್ ಕರ್ ಅವರ ಹೆಸರನ್ನು ತಪ್ಪಾಗಿ ಬರೆದಿವೆ. ಈ ಕಾರಣಗಳಿಗೆ ಅವಿಶ್ವಾಸ ನಿರ್ಣಯ ಪ್ರಸ್ತಾಪ ತಿರಸ್ಕರಿಸಲಾಗಿದೆ ಎಂದು ಹೇಳಿದ್ದಾರೆ.