Home ದೇಶ ದೇಶಾದ್ಯಂತ ವಾಹನ ಅಪಘಾತದ ಗಾಯಾಳುಗಳಿಗೆ ಉಚಿತ ಚಿಕಿತ್ಸೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ

ದೇಶಾದ್ಯಂತ ವಾಹನ ಅಪಘಾತದ ಗಾಯಾಳುಗಳಿಗೆ ಉಚಿತ ಚಿಕಿತ್ಸೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ

ದೇಶಾದ್ಯಂತ ವಾಹನ ಅಪಘಾತದಲ್ಲಿ ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆಯನ್ನು ಮಾರ್ಚ್ ನಿಂದ ಆರಂಭಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

by Editor
0 comments
nitin gadkari

ದೇಶಾದ್ಯಂತ ವಾಹನ ಅಪಘಾತದಲ್ಲಿ ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆಯನ್ನು ಮಾರ್ಚ್ ನಿಂದ ಆರಂಭಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರಸ್ತುತ ಅಪಘಾತಕ್ಕೊಳಗಾದ ವ್ಯಕ್ತಿಗೆ ಗರಿಷ್ಠ 1.5 ಲಕ್ಷ ರೂ. ದೊರೆಯುತ್ತಿದೆ. ಖಾಸಗಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಿದ್ದು, ಪೊಲೀಸರು, ವೈದ್ಯರು ಹಾಗೂ ಸರ್ಕಾರಿ ಸಂಘಟನೆಗಳ ಸಹಯೋಗದೊಂದಿಗೆ ಅಪಘಾತಕ್ಕೊಳಗಾದವರ ಸಂಪೂರ್ಣ ವೆಚ್ಚ ಭರಿಸುವ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದರು.

ಐಟಿ ಕಂಪನಿ ಸಹಯೋಗದಲ್ಲಿ ಇ-ಡಿಲಿಟೆಡ್ ಆಕ್ಸಿಡೆಂಟ್ ರಿಪೋರ್ಟ್ (ಇ-ಡರ್) ಅರ್ಜಿ ನೀಡಲಾಗುವುದು. ದೇಶಾದ್ಯಂತ ಯಾವುದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೊಳಗಾದವರೆ 7 ದಿನಗಳ ಒಳಗಾಗಿ ಅರ್ಜಿ ಭರ್ತಿ ಮಾಡಿದರೆ ಪೂರ್ಣ ಚಿಕಿತ್ಸಾ ವೆಚ್ಚ ಭರಿಸಲಾಗುವುದು ಎಂದು ನಿತಿನ್ ಗಡ್ಕರಿ ವಿವರಿಸಿದರು.

2024 ಮಾರ್ಚ್ ರಂದು ಕೇಂದ್ರ ಸರ್ಕಾರ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಿದ್ದು, ಮುಂದಿನ ಮಾರ್ಚ್ ತಿಂಗಳಿಂದ ದೇಶಾದ್ಯಂತ ಪೂರ್ಣ ಪ್ರಮಾಣದಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ಅವರು ಘೋಷಿಸಿದರು.

banner

 

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಚುನಾವಣಾ ಆಯುಕ್ತರ ನೇಮಕ ತಕರಾರು: ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು Tirupati ಟೋಕನ್ ವಿತರಣೆ ವೇಳೆ ತಿರುಪತಿಯಲ್ಲಿ ಕಾಲ್ತುಳಿತಕ್ಕೆ 6 ಭಕ್ತರ ದುರ್ಮರಣ ಲಾಜ್ ಏಂಜಲೀಸ್ ನಲ್ಲಿ ಕಾಡ್ಗಿಚ್ಚು: ಹಾಲಿವುಡ್ ಸ್ಟಾರ್ ಗಳು ಸೇರಿ 30,000 ಕುಟುಂಬ ಸ್ಥಳಾಂತರ! ದಿಲ್ಲಿ ಅಸೆಂಬ್ಲಿ ಚುನಾವಣೆ: ಆಪ್‌ ಗೆ ಇಂಡಿಯಾ ಬಲ ಶೇ.16ರಷ್ಟು ಕುಸಿದ ಉತ್ಪಾದನೆ: ದುಬಾರೆಯಾಗಲಿದೆ ಸಕ್ಕರೆ ದರ! ಮಹಿಳೆಯರ ದೇಹದ ಆಕಾರ ಅಪಹಾಸ್ಯ ಶಿಕ್ಷಾರ್ಹ ಅಪರಾಧ: ಕೋರ್ಟ್ ಮಹತ್ವದ ತೀರ್ಪು ಬೆಂಗಳೂರು-ತುಮಕೂರು-ರಾಮನಗರ ವರ್ತುಲ ರಸ್ತೆ ತ್ವರಿತ ಅನುಷ್ಠಾನಕ್ಕೆ ಕೇಂದ್ರ ಸಮ್ಮತಿ ಶರಣಾದ 6 ಮಂದಿ‌ ನಕ್ಸಲರ ಸಶಸ್ತ್ರ ಹೋರಾಟದ ಹಿಂದಿನ ನೋವಿನ ಕಥೆ ಏನು ಗೊತ್ತಾ? ಮಂಗಳೂರಿನಲ್ಲಿ ಸಮುದ್ರಪಾಲಾದ ಬೆಂಗಳೂರಿನ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು! ಸಿಎಂ ಸಮ್ಮುಖದಲ್ಲಿ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು: 24 ವರ್ಷಗಳಲ್ಲೇ ಇದೇ ಮೊದಲು!