Monday, July 22, 2024
Google search engine
HomeಅಪರಾಧGujarat ರಸ್ತೆ ಬದಿಯಲ್ಲಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ!

Gujarat ರಸ್ತೆ ಬದಿಯಲ್ಲಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ!

ಇಬ್ಬರು ಮಕ್ಕಳು ಮತ್ತು ದಂಪತಿ ಸೇರಿದಂತೆ ನಾಲ್ವರ ಶವ ರಸ್ತೆ ಬದಿಯಲ್ಲಿ ಪತ್ತೆಯಾಗಿರುವ ಘಟನೆ ಗುಜರಾತ್ ನ ದೇವಭೂಮಿ ದ್ವಾರಕಾ ಜಿಲ್ಲೆಯ ಗ್ರಾಮದಲ್ಲಿ ವರದಿಯಾಗಿದೆ.

ಅಶೋಕ್ ಧುವಾ, ಪತ್ನಿ ಲಿಲುಬೆನ್, ಪುತ್ರ ಜಿಗ್ನೇಶ್ ಮತ್ತು ಪುತ್ರಿ ಕಿಂಜಲ್ ಶವಪತ್ತೆಯಾಗಿದ್ದು, ಇವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಪೊಲೀಸರ ತನಿಖೆಯಲ್ಲಿ ಶಂಕಿಸಲಾಗಿದೆ.

ಮೃತಪಟ್ಟವರ ಶವಗಳ ಸಮೀಪ ವಿಷ ಇರುವ ಬಾಟಲ್ ಗಳು ಪತ್ತೆಯಾಗಿವೆ. ದಂಪತಿಯ ವಯಸ್ಸು 40ರ ಆಸುಪಾಸಾಗಿದ್ದರೆ, ಮಕ್ಕಳ ವಯಸ್ಸು 18-ರಿಂದ 20 ಆಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತಪಟ್ಟವರು ಜಾಮ್ ನಗರದ ನಿವಾಸಿಗಳಾಗಿದ್ದು, ಇವರು ದ್ವಿಚಕ್ರ ವಾಹನದ ಮೂಲಕ ಸುಮಾರು 70 ಕಿ.ಮೀ. ಪ್ರಯಾಣಿಸಿ ಬಂದಿದ್ದು  ರಸ್ತೆಬದಿಯಲ್ಲಿ ವಿಷ ಸೇವಿಸಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments