Monday, July 22, 2024
Google search engine
Homeತಾಜಾ ಸುದ್ದಿಆಟವಾಡುತ್ತಿದ್ದ 9 ವರ್ಷದ ಬಾಲಕಿ 3ನೇ ಮಹಡಿಯಿಂದ ಬಿದ್ದು ಸಾವು

ಆಟವಾಡುತ್ತಿದ್ದ 9 ವರ್ಷದ ಬಾಲಕಿ 3ನೇ ಮಹಡಿಯಿಂದ ಬಿದ್ದು ಸಾವು

ಆಟವಾಡುತ್ತಿದ್ದ 9 ವರ್ಷದ ಬಾಲಕಿ 3ನೇ ಮಹಡಿಯ ಕಿಟಕಿಯಿಂದ ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ಸಂಭವಿಸಿದೆ.

ಕಂಡೇವಾಲಿ ಬಡಾವಣೆಯಲ್ಲಿ ಈ ಘಟನೆ ಸಂಭವಿಸಿದ್ದು, ಆಯೇಷಾ ವಿಶ್ವಕರ್ಮ ಮೃತಪಟ್ಟ ಬಾಲಕಿ.

ಮಂಗಳವಾರ ರಾತ್ರಿ ಮೂರನೇ ಮಹಡಿಯ ಕಿಟಕಿಯ ಗ್ರಿಲ್ ಹಿಡಿದು ಮೂವರು ಮಕ್ಕಳು ಆಟವಾಡುತ್ತಿದ್ದರು. ಆಕಸ್ಮಿಕವಾಗಿ ಕಿಟಕಿ ತೆರೆದಿದ್ದರಿಂದ ಬಾಲಕಿ ಕೆಳಗೆ ಬಿದ್ದಿದ್ದಳು.

ಕೆಳಗೆ ಬಿದ್ದಿದ್ದ ಬಾಲಕಿ ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರು ಆಕಸ್ಮಿಕ ಘಟನೆ ಎಂದು ದೂರು ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments