Friday, May 15, 2026
Google search engine
Homeದೇಶಭಾರತಕ್ಕೆ 2 ಗಂಟೆಯ ಭೇಟಿಯಲ್ಲಿ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ ಯುಎಇ ಅಧ್ಯಕ್ಷ!

ಭಾರತಕ್ಕೆ 2 ಗಂಟೆಯ ಭೇಟಿಯಲ್ಲಿ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ ಯುಎಇ ಅಧ್ಯಕ್ಷ!

ಯುನೈಟೆಡ್‌ ಅರಬ್‌ ಎಮಿರೆಟ್ಸ್‌ ಅಧ್ಯಕ್ಷ ಶೇಖ್‌ ಮೊಹಮದ್‌ ಬಿನ್‌ ಜಾಯಿದ್‌ ಅಲ್‌ ನಹ್ಯಾನ್‌ ಭಾರತಕ್ಕೆ 2 ಗಂಟೆಯ ಅತ್ಯಲ್ಪ ಅವಧಿಗಾಗಿ ಭೇಟಿ ನೀಡಿದರೂ ಪ್ರಧಾನಿ ನರೇಂದ್ರ ಮೋದಿ ಜೊತೆ ಹಲವು ಮಹತ್ವದ ಒಪ್ಪಂದಗಳ ಕುರಿತು ಮಾತುಕತೆ ನಡೆಸಿದ್ದಾರೆ.

ಸೋಮವಾರ ಮಧ್ಯಾಹ್ನ ಆಗಮಿಸಿದ ಯುಎಇ ಅಧ್ಯಕ್ಷರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಸ್ವಾಗತಿಸಿದರು. ನಂತರ ಬೆರಳೆಣಿಯ ಮುಖಂಡರ ನಿಯೋಗದ ಜೊತೆ ನಡೆದ ಮಾತುಕತೆ ವೇಳೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಮಾತುಕತೆ ವೇಳೆ ಭಯೋತ್ಪಾದನೆ, ಎಐ, ಪರಮಾಣು ಅಣ್ವಸ್ತ್ರ ಕೇಂದ್ರಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ಸಭೆಯ ನಂತರ ಭಾರತದ ವಿದೇಶಾಂಗ ಸಚಿವಾಲಯ ವಿಕ್ರಮ್‌ ಮಿಸ್ತ್ರಿ ತಿಳಿಸಿದ್ದಾರೆ.

ನಿಯೋಗದಲ್ಲಿ ಅಬುಧಾಬಿ, ದುಬೈ ರಾಜವಂಶಸ್ಥ ಕುಟುಂಬದ ಸದಸ್ಯರು ಇದ್ದರು. ಅದರಲ್ಲೂ ದುಬೈ ರಾಜಕುಮಾರ ಹಾಗೂ ರಕ್ಷಣಾ ಸಚಿವ ಶೇಖ್‌ ಹಮ್ದನ್‌ ಬಿನ್‌ ಮೊಹಮದ್‌ ಬಿನ್‌ ಮಕಟೌನ್‌ ಹಾಗೂ ಪ್ರಮುಖ ಸಚಿವರು ಇದ್ದರು.

ಇದೇ ವೇಳೆ 10 ವರ್ಷಗಳ ಕಾಲ ಎಲ್‌ ಪಿಜಿ ಗ್ಯಾಸ್‌ ಪೂರೈಕೆ ಸೇರಿದಂತೆ ಹಲವು ಖಾಸಗಿ ಕಂಪನಿಗಳ ನಡುವೆ ಒಪ್ಪಂದ ನಡೆದಿದೆ ಎಂದ ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments