Sunday, June 28, 2026
Google search engine
Homeದೇಶವಿಮಾನ ದುರಂತ ಮಾರನೇ ದಿನ ಕಚೇರಿಯಲ್ಲಿ ಪಾರ್ಟಿ: ಏರ್ ಇಂಡಿಯಾ ನಾಲ್ವರು ಸಿಬ್ಬಂದಿ ಅಮಾನತು

ವಿಮಾನ ದುರಂತ ಮಾರನೇ ದಿನ ಕಚೇರಿಯಲ್ಲಿ ಪಾರ್ಟಿ: ಏರ್ ಇಂಡಿಯಾ ನಾಲ್ವರು ಸಿಬ್ಬಂದಿ ಅಮಾನತು

ಜಗತ್ತನ್ನೇ ತಲ್ಲಣಗೊಳಿಸಿದ ಏರ್ ಇಂಡಿಯಾ ವಿಮಾನ ದುರಂತದ ಮಾರನೇ ದಿನ ಕಚೇರಿಯಲ್ಲಿ ಪಾರ್ಟಿ ಮಾಡಿದ್ದಕ್ಕಾಗಿ ನಾಲ್ವರು ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಏರ್ ಇಂಡಿಯಾ ವಿಮಾನ ನಿಲ್ದಾಣದ ಸೇವಾ ಸಿಬ್ಬಂದಿ ವಿಮಾನ ದುರಂತದ ಘಟನೆ ಬೆನ್ನಲ್ಲೇ ಕಚೇರಿಯಲ್ಲಿ ಪಾರ್ಟಿ ಮಾಡಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಎಐ-171 ವಿಮಾನ ಟೇಕಾಫ್ ಆದ ಕೆಲವೇ ಕ್ಣಣಗಳಲ್ಲಿ ಪತನಗೊಂಡಿತ್ತು. ಇದರಿಂದ 241 ಮಂದಿ ವಿಮಾನದಲ್ಲಿ ಇದ್ದವರು ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿ 30 ಮಂದಿ ಮೃತಪಟ್ಟಿದ್ದರು.

ದುರಂತದ ನೋವಲ್ಲಿ ಇರುವಾಗ ಪಾರ್ಟಿ ಮಾಡಿರುವುದು ಸರಿಯಲ್ಲ. ದುರಂತದಲ್ಲಿ ಮಡಿದವರ ಕುಟುಂಬದವರ ಪರ ನಾವಿದ್ದೇವೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದ್ದು, ನಾಲ್ವರು ಹಿರಿಯ ಅಧಿಕಾರಿಗಳ ರಾಜಿನಾಮೆ ಕೇಳಲಾಗಿದೆ ಎಂದು ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments