Friday, May 15, 2026
Google search engine
Homeವಿದೇಶಮ್ಯಾನ್ಮರ್, ಬ್ಯಾಂಕಾಂಕ್ ಭೂಕಂಪನದಲ್ಲಿ ಮೃತರ ಸಂಖ್ಯೆ 2000ಕ್ಕೆ ಏರಿಕೆ; 3500 ಮಂದಿ ಗಾಯ

ಮ್ಯಾನ್ಮರ್, ಬ್ಯಾಂಕಾಂಕ್ ಭೂಕಂಪನದಲ್ಲಿ ಮೃತರ ಸಂಖ್ಯೆ 2000ಕ್ಕೆ ಏರಿಕೆ; 3500 ಮಂದಿ ಗಾಯ

ಮ್ಯಾನ್ಮರ್ ಮತ್ತು ಥಾಯ್ಲೆಂಡ್ ನಲ್ಲಿ ಸಂಭವಿಸಿದ ಭೀಕರ ಭೂಕಂಪನಕ್ಕೆ ಬಲಿಯಾದವರ ಸಂಖ್ಯೆ 2,000 ದಾಟಿದ್ದು, 3500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಶುಕ್ರವಾರ ಸಂಭವಿಸಿದ 2 ಬಾರಿಯ ಭೂಕಂಪನದಲ್ಲಿ ಮೊದಲ ಬಾರಿ ರಿಕ್ಟರ್ ಮಾಪಕದಲ್ಲಿ 7.7ರಷ್ಟು ತೀವ್ರತೆ ಹಾಗೂ ನಂತರ 6.8ರ ತೀವ್ರತೆ ದಾಖಲಾಗಿತ್ತು. ಮ್ಯಾನ್ಮರ್ ನಲ್ಲಿಯೇ 1644 ಮಂದಿ ಸಾವಿಗೀಡಾಗಿದ್ದಾರೆ.

ಹಲವು ಕಟ್ಟಡಗಳು ಧರೆಗುರುಳಿದ್ದು, ಎರಡೂ ದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಮೃತರ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಿದ್ದು, 2000ಕ್ಕೆ ಏರುವ ಸಾಧ್ಯತೆ ಇದೆ ಎಂದು ಭೀತಿ ವ್ಯಕ್ತಪಡಿಸಲಾಗಿದೆ.

ಮ್ಯಾನ್ಮರ್ ನಲ್ಲಿ ಪ್ರಸ್ತುತ ಧಂಗೆ ಉಂಟಾಗಿದ್ದು, ಹಲವು ಪ್ರಮುಖ ತುರ್ತು ಸೇವೆಗಳು ಬಲ ಕಳೆದುಕೊಂಡಿವೆ. ಇಂತಹ ಸಂದರ್ಭದಲ್ಲಿ ಈ ದುರಂತ ಸಂಭವಿಸಿದ್ದು, ರಕ್ಷಣಾ ಕಾರ್ಯಕ್ಕೆ ಭಾರೀ ಹಿನ್ನಡೆ ಉಂಟಾಗಿದೆ.

ಬ್ಯಾಂಕಾಕ್ ನಲ್ಲಿ ನಿರ್ಮಾಣ ಹಂತದ ಮಾರುಕಟ್ಟೆ ಕುಸಿದು ಬಿದ್ದಿರುವುದರಿಂದ 400 ಮಂದಿ ಒಂದೇ ಕಡೆ ಮೃತಪಟ್ಟಿದ್ದಾರೆ. ಅಲ್ಲದೇ ಇತರೆ ಕಡೆಗಳಲ್ಲಿ 10 ಮಂದಿ ಅಸುನೀಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments