Sunday, June 28, 2026
Google search engine
Homeವಿದೇಶ450 ಕಿ.ಮೀ. ದೂರ ಚಿಮ್ಮುವ ಖಂಡಾಂತರ ಯಶಸ್ವಿಯಾಗಿ ಪರೀಕ್ಷಿಸಿದ ಪಾಕಿಸ್ತಾನ!

450 ಕಿ.ಮೀ. ದೂರ ಚಿಮ್ಮುವ ಖಂಡಾಂತರ ಯಶಸ್ವಿಯಾಗಿ ಪರೀಕ್ಷಿಸಿದ ಪಾಕಿಸ್ತಾನ!

450 ಕಿ.ಮೀ. ದೂರ ಗುರಿ ತಲುಪಬಲ್ಲ ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ಘೋಷಿಸಿದೆ.

ಪೆಹಲ್ಗಾವ್ ದಾಳಿ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ ಪಾಕಿಸ್ತಾನದ ಭೂಮಿಯಿಂದ ಭೂಮಿಗೆ ಚಿಮ್ಮುವ ಹಾಗೂ 450 ಕಿ.ಮೀ. ದೂರ ಕ್ರಮಿಸಬಲ್ಲ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಗಿದೆ ಎಂದು ಹೇಳಿಕೊಂಡಿದೆ.

ಸೊನ್ಮಿಯಾಮಿ ವಲಯದಲ್ಲಿ ಇಂಡಸ್ ಪರೀಕ್ಷೆ ಅಂಗವಾಗಿ ಅಬ್ದಾಲಿ ಶಸ್ತ್ರಾಸ್ತ್ರ ವ್ಯವಸ್ಥೆ ಎಂದು ಕರೆಯಲಾಗುವ ಕ್ಷಿಪಣಿಯನ್ನು ಪರೀಕ್ಷೆಗೊಳಪಡಿಸಲಾಗಿದೆ.  ಈ ಕ್ಷಿಪಣಿ ಅಣುಬಾಂಬ್ ಹೊತ್ತೊಯ್ಯಬಲ್ಲ ಸಿಡಿತಲೆ ಹೊಂದಿದೆ ಎಂದು ಪಾಕಿಸ್ತಾನ ಸೇನೆ ವಿವರಿಸಿದೆ.

ಭಾರತ ವಾಯುಪಡೆ ಶುಕ್ರವಾರ ರಾತ್ರಿ ಉತ್ತರ ಪ್ರದೇಶದ ಎಕ್ಸ್ ಪ್ರಸ್ ವೇನಲ್ಲಿ ಯುದ್ಧ ವಿಮಾನಗಳನ್ನು ಇಳಿಸುವ ಪರೀಕ್ಷೆ ಯಶಸ್ವಿಯಾಗಿ ಪೂರೈಸಿದ ಬೆನ್ನಲ್ಲೇ ಪಾಕಿಸ್ತಾನ ಈ ಹೇಳಿಕೆ ಬಿಡುಗಡೆ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments