Tuesday, May 26, 2026
Google search engine
Homeರಾಜಕೀಯಸಂಸತ್ ಸಭೆ ಕರೆಯಲು ಪ್ರಧಾನಿ ಪತ್ರ ಬರೆದರೆ ಪ್ರತಿಕ್ರಿಯೆನೇ ಬಂದಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸಂಸತ್ ಸಭೆ ಕರೆಯಲು ಪ್ರಧಾನಿ ಪತ್ರ ಬರೆದರೆ ಪ್ರತಿಕ್ರಿಯೆನೇ ಬಂದಿಲ್ಲ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚಾರಣೆ ವಿಚಾರದಲ್ಲಿ ನಮ್ಮ ಪಕ್ಷ ಮತ್ತು ಘಟಬಂಧನ್ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದೆ. ಈ ವಿಚಾರದ ಬಗ್ಗೆ ಚರ್ಚೆಗೆ ಬೇಗನೇ ಪಾರ್ಲಿಮೆಂಟ್ ಸಭೆ ಕರೆಯಿರಿ ಮಾತಾಡೋಣ ಅಂತ ಪ್ರಧಾನಿಗೆ ಪತ್ರ ಬರೆದಿದ್ದೇವೆ.ಆದರೆ ಪ್ರಧಾನಿ ಅವರಿಂದ ಇದುವರೆಗೂ ರೆಸ್ಪಾನ್ಸ್ ಬಂದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಭಾರತ -ಪಾಕಿಸ್ತಾನ ಮಧ್ಯೆ ಕದನ ವಿಚಾರದ ಕುರಿತು ಕಲಬುರಗಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಅವರು ಟಿವಿಯಲ್ಲಿ ಮಾತಾಡೋದು ಬಿಟ್ಟು ಸದನದಲ್ಲಿ ಮಾತಾಡಲಿ ಅಂತ ನಾನು ರಾಹುಲ್ ಗಾಂಧಿ ಪತ್ರ ಬರೆದಿದ್ದೇವೆ. ದಿಢೀರ್ ಕದನ ವಿರಾಮದ ವಿಚಾರ ಬಗ್ಗೆ ನಾನು ಮಾಧ್ಯಮ ಮೂಲಕ ಮಾತನಾಡಲಾರೆ. ಸಂದರ್ಭ ಬಂದಾಗ ನಮ್ಮ ವಿಚಾರ ಹೇಳುವೆ, ಈಗ ಒಡಕಿನ ಮಾತು ನಾನು ಆಡಲಾರೆ ಎಂದರು.

ನಾವು ಸಂಕಟ ಸಮಯದಲ್ಲಿ ಒಂದಾಗಿ ಇರಬೇಕು. ಯಾವಾಗ ಲೋಕಸಭೆ ನಡೆಯುತ್ತೋ ಅಲ್ಲಿ ನಮ್ಮ ವಿಚಾರ ಹೇಳುವೆವು.ಎಲ್ಲಿ ತಪ್ಪಾಗಿದೆ ? ಎಲ್ಲಿ ಸರಿಯಾಗಿ ನಡೆದಿದೆ ಎಲ್ಲವನ್ನೂ ಲೋಕಸಭೆ ಅಧಿವೇಶನದಲ್ಲಿ ಹೇಳೋಣ. ಈಗ ನಮ್ಮ ಸೈನಿಕರು ಚನ್ನಾಗಿ ಕೆಲಸ ಮಾಡಿದ್ದಾರೆ ಅವರಿಗೆ ಧನ್ಯವಾದ ಹೇಳುತ್ತೆನೆ ಎಂದು ಖರ್ಗೆ ಹೇಳಿದರು.

ಯುದ್ದ ಸಂದರ್ಭದಲ್ಲಿ ನಮ್ಮ ದೇಶದವರೆಲ್ಲ ಒಂದಾಗಿ ಒಗ್ಗಟ್ಟಾಗಿ ಇರಬೇಕು.ಕದನ ವಿರಾಮ ವಿಚಾರ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿರುವ ವಿಚಾರ. ಇದುವರೆಗೆ ನಮ್ಮ ದೇಶದಲ್ಲಿ ಬೇರೆ ದೇಶದವರು ಮಧ್ಯಸ್ಥಿಕೆ ವಹಿಸಿ ಹೇಳಿರಲಿಲ್ಲ. ಅದಾಗ್ಯೂ ಈ ಬಗ್ಗೆ ನಾನು ಇಲ್ಲಿ ಏನನ್ನೂ ಮಾತಾಡಲ್ಲ. ಯಾವ ವೇದಿಕೆಯಲ್ಲಿ ಮಾತಾಡಬೇಕೋ ಅಲ್ಲಿ ಮಾತನಾಡುವೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments