Thursday, May 14, 2026
Google search engine
Homeಕ್ರೀಡೆ11 ವರ್ಷದ ಹಿಂದಿನ ಧೋನಿ ದಾಖಲೆ ಮುರಿದ ಪಂತ್, ಪಲ್ಟಿ ಹೊಡೆದು ಸಂಭ್ರಮ!

11 ವರ್ಷದ ಹಿಂದಿನ ಧೋನಿ ದಾಖಲೆ ಮುರಿದ ಪಂತ್, ಪಲ್ಟಿ ಹೊಡೆದು ಸಂಭ್ರಮ!

ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಡ್ ಪಂದ್ಯದಲ್ಲಿ ಶತಕ ಸಿಡಿಸಿ 11 ವರ್ಷಗಳ ಹಿಂದಿನ ಧೋನಿ ದಾಖಲೆ ಮುರಿದಿದ್ದಾರೆ.

ಲೀಡ್ಸ್ ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನ 65 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದ ರಿಷಭ್ ಪಂತ್ ಎರಡನೇ ದಿನ ಶತಕ ಪೂರೈಸಿದರು.

ರಿಷಭ್ ಪಂತ್ ಗೆ ಇದು 7ನೇ ಟೆಸ್ಟ್ ಶತಕವಾಗಿದೆ. ಅಲ್ಲದೇ ಭಾರತದ ಪರ ಅತೀ ಹೆಚ್ಚು ಶತಕ ಗಳಿಸಿದ್ದ ಧೋನಿ ದಾಖಲೆಯನ್ನು 11 ವರ್ಷಗಳ ನಂತರ ಮುರಿದರು. ಧೋನಿ 2014ರಲ್ಲಿ ಕೊನೆಯ ಹಾಗೂ 7ನೇ ಶತಕ ಗಳಿಸಿದ್ದರು.

ಪಂತ್ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ 56 ಸಿಕ್ಸರ್ ಬಾರಿಸಿ ಭಾರತದ ಮಾಜಿ ನಾಯಕ ರೋಹಿತ್ ಶರ್ಮ ಅವರ ದಾಖಲೆಯನ್ನು ಕೂಡ ಮುರಿದರು.

ಪಂತ್ ಇದೇ ವೇಳೆ ಟೆಸ್ಟ್ ಕ್ರಿಕೆಟ್ ನಲ್ಲಿ 3000 ರನ್ ಪೂರೈಸಿದ ಮತ್ತೊಂದು ದಾಖಲೆ ಬರೆದರು. ಧೋನಿ ನಂತರ ಈ ಸಾಧನೆ ಮಾಡಿದ ಎರಡನೇ ವಿಕೆಟ್ ಕೀಪರ್ ಎಂಬ ಗೌರವಕ್ಕೆ ಧೋನಿ ಪಾತ್ರರಾದರು.

ಐಪಿಎಲ್ ನಲ್ಲಿ ಶತಕ ಬಾರಿಸಿದ ನಂತರ ಸಮರ್ ಸಾಲ್ಟ್ ಹೊಡೆದು ಸಂಭ್ರಮಿಸಿದ್ದ ಪಂತ್ ಈ ಬಾರಿಯೂ ಸಮರ್ ಸಾಲ್ಟ್ ಹೊಡೆದು ಸಂಭ್ರಮಿಸಿದರು. ವೀಕ್ಷಕ ವಿವರಣೆಗಾರರಾಗಿದ್ದ ಬ್ಯಾಟಿಂಗ್ ದಂತಕತೆ ಸುನೀಲ್ ಗವಾಸ್ಕರ್ ಆಂಬುಲೆನ್ಸ್ ತರಿಸಿ ಯಾವುದಕ್ಕೂ ಎಡವಟ್ಟು ಆಗುವ ಮುನ್ನ ಎಂದು ಹಾಸ್ಯ ಚಟಾಕಿ ಹಾರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments