Thursday, August 13, 2026
Google search engine
Homeದೇಶಉಕ್ರೇನ್ ನಲ್ಲಿರುವ ಭಾರತದ ಔಷಧ ಉಗ್ರಾಣದ ಮೇಲೆ ರಷ್ಯಾ ಬಾಂಬ್ ದಾಳಿ!

ಉಕ್ರೇನ್ ನಲ್ಲಿರುವ ಭಾರತದ ಔಷಧ ಉಗ್ರಾಣದ ಮೇಲೆ ರಷ್ಯಾ ಬಾಂಬ್ ದಾಳಿ!

ಉಕ್ರೇನ್ ರಾಜಧಾನಿ ಕೀವ್ ನಲ್ಲಿರುವ ಭಾರತದ ಔಷಧ ಉಗ್ರಾಣದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ.

ಭಾರತದಲ್ಲಿರುವ ಉಕ್ರೇನ್ ರಾಯಭಾರ ಕಚೇರಿ ಎಕ್ಸ್ ನಲ್ಲಿ ಈ ವಿಷಯ ಪ್ರಕಟಿಸಿದ್ದು, ಉಕ್ರೇನ್ ನಲ್ಲಿ ಭಾರತದ ಔಷಧ ಉದ್ಯಮಕ್ಕೆ ಧಕ್ಕೆ ತರಲು ರಷ್ಯಾ ಉದ್ದೇಶಪೂರ್ವಕವಾಗಿ ಈ ದಾಳಿ ನಡೆಸಿದೆ ಎಂದು ಆರೋಪಿಸಿದೆ.

ಉಕ್ರೇನ್ ನ ಕುಸುಮ್ ನಲ್ಲಿರುವ ಔಷಧ ಉಗ್ರಾಣದ ಮೇಲೆ ಭಾರತದ ಪರಮಾಪ್ತ ದೇಶವಾದ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಈ ಉಗ್ರಾಣದಲ್ಲಿ ಮಹಿಳೆಯರು ಮತ್ತು ಮಕ್ಕಳ ಚಿಕಿತ್ಸೆಗೆ ಅಗತ್ಯವಾದ ಔಷಧಗಳನ್ನು ಸಂಗ್ರಹಿಸಲಾಗಿತ್ತು ಎಂದು ಉಕ್ರೇನ್ ಆರೋಪಿಸಿದೆ.

ಬ್ರಿಟನ್ ರಾಯಭಾರ ಕಚೇರಿ ಕೂಡ ಉಕ್ರೇನ್ ನಲ್ಲಿರುವ ಭಾರತದ ಔಷಧ ಉಗ್ರಾಣದ ಮೇಲೆ ನಡೆದ ದಾಳಿ ನಡೆದಿರುವುದನ್ನು ದೃಢಪಡಿಸಿದೆ. ಕ್ಷಿಪಣಿ ದಾಳಿಯಲ್ಲಿ ಸಾವು-ನೋವಿನ ಕುರಿತು ಯಾವುದೇ ವರದಿ ಆಗಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments