ಪಾಕಿಸ್ತಾನ ವಿರುದ್ಧ ಯಶಸ್ವಿಯಾಗಿ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಹಿಂದೆ ಪ್ರಮುಖ ಪಾತ್ರ ವಹಿಸಿದ್ದ ಐಪಿಎಸ್ ಅಧಿಕಾರಿ ಪರಾಗ್ ಜೈನ್ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ 26 ಪ್ರವಾಸಿಗರನ್ನು ಉಗ್ರರು ಹತ್ಯೆಗೈದಿದ್ದಕ್ಕೆ ಪ್ರತಿಯಾಗಿ ಪಾಕಿಸ್ತಾನದ ವಿರುದ್ಧ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಹಿಂದೆ `ರಾ’ ಸಂಸ್ಥೆಯ ಎರಡನೇ ಅತೀ ದೊಡ್ಡ ಹುದ್ದೆಯಲ್ಲಿರುವ ಪರಾಗ್ ಜೈನ್ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ರಾ ಮುಖ್ಯಸ್ಥ ರವಿ ಸಿನ್ಹಾ ಜೂನ್ 30ರಂದು ನಿವೃತ್ತಗೊಳ್ಳಲಿದ್ದು, ಅವರಿಂದ ತೆರವಾಗುವ ಹುದ್ದೆಗೆ ಪರಾಗ್ ಜೈನ್ ಅಧಿಕಾರ ಸ್ವೀಕರಿಸಲಿದ್ದಾರೆ.
ಪಂಜಾಬ್ ಕೇಡರ್ ನ 1989ರ ಐಪಿಎಸ್ ಬ್ಯಾಚ್ ಗೆ ಸೇರಿರುವ ಪರಾಗ್ ಜೈನ್ ಪ್ರಸ್ತುತ ರಾ ಸಂಸ್ಥೆಯಲ್ಲಿ ಏವಿಯೇಷನ್ ರಿಸರ್ಚ್ ಸೆಂಟರ್ ನಲ್ಲಿ ಸೇವೆ ಸಲ್ಲಿಸುತ್ತಿದ್ದು, ವಿಮಾನ ಹಾರಾಟಗಳ ಕುರಿತ ಪರಿವೀಕ್ಷಣೆ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ.



