Saturday, May 16, 2026
Google search engine
Homeಕ್ರೀಡೆ2ನೇ ಟೆಸ್ಟ್ ನಲ್ಲಿ ಗಿಲ್ 2ನೇ ಶತಕ: ಇಂಗ್ಲೆಂಡ್ ಗೆ 608 ರನ್ ಗುರಿ

2ನೇ ಟೆಸ್ಟ್ ನಲ್ಲಿ ಗಿಲ್ 2ನೇ ಶತಕ: ಇಂಗ್ಲೆಂಡ್ ಗೆ 608 ರನ್ ಗುರಿ

ನಾಯಕನಾಗಿ ಶುಭಮನ್ ಮನ್ ಸಿಡಿಸಿದ ಎರಡನೇ ಶತಕದ ನೆರವಿನಿಂದ ಭಾರತ ತಂಡ 427 ರನ್ ಗೆ ಡಿಕ್ಲೇರ್ ಮಾಡಿಕೊಂಡಿದ್ದು, ಎರಡನೇ ಟೆಸ್ಟ್ ಪಂದ್ಯ ಗೆಲ್ಲಲು ಇಂಗ್ಲೆಂಡ್ ಗೆ 608 ರನ್ ಗಳ ಕಠಿಣ ಸವಾಲೊಡ್ಡಿದೆ.

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನವಾದ ಶನಿವಾರ 1 ವಿಕೆಟ್ ಗೆ 64 ರನ್ ಗಳಿಂದ ಆಟ ಮುಂದುವರಿಸಿದ ಭಾರತ ಚಹಾ ವಿರಾಮದ ನಂತರ 6 ವಿಕೆಟ್ ಕಳೆದುಕೊಂಡು 427 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನಿಂಗ್ಸ್ ನಲ್ಲಿ 180 ರನ್ ಹಿನ್ನಡೆ ಅನುಭವಿಸಿದ್ದ ಇಂಗ್ಲೆಂಡ್ ಗೆಲ್ಲಲು 608 ರನ್ ಗಳಿಸಬೇಕಾಗಿದೆ.

ಮೊದಲ ಇನಿಂಗ್ಸ್ ನಲ್ಲಿ ದ್ವಿಶತಕ ಸಿಡಿಸಿದ್ದ ಶುಭಮನ್ ಗಿಲ್ ಎರಡನೇ ಇನಿಂಗ್ಸ್ ನಲ್ಲೂ ಅಮೋಘ ಫಾರ್ಮ್ ಮುಂದುವಿರಿಸುವ ಮೂಲಕ ಶತಕದ ಸಾಧನೆ ಮಾಡಿದರು. ಗಿಲ್ 162 ಎಸೆತಗಳಲ್ಲಿ 13 ಬೌಂಡರಿ ಮತ್ತು 8 ಸಿಕ್ಸರ್ ಸಹಾಯದಿಂದ 161 ರನ್ ಗಳಿಸಿ ಮತ್ತೊಂದು ದ್ವಿಶತಕದಿಂದ ವಂಚಿತರಾದರು.

ಗಿಲ್ ಗೆ ಉತ್ತಮ ಬೆಂಬಲ ನೀಡಿದ ಕೆಎಲ್ ರಾಹುಲ್ (55), ರಿಷಭ್ ಪಂತ್ (65) ಮತ್ತು ರವೀಂದ್ರ ಜಡೇಜಾ (ಅಜೇಯ 69) ಅರ್ಧಶತಕಗಳನ್ನು ಬಾರಿಸಿ ನೆರವಾದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments