Thursday, May 14, 2026
Google search engine
Homeಕ್ರೀಡೆದಕ್ಷಿಣ ಆಫ್ರಿಕಾ 74ಕ್ಕೆ ಆಲೌಟ್:‌ ಭಾರತಕ್ಕೆ 101 ರನ್‌ ಜಯ

ದಕ್ಷಿಣ ಆಫ್ರಿಕಾ 74ಕ್ಕೆ ಆಲೌಟ್:‌ ಭಾರತಕ್ಕೆ 101 ರನ್‌ ಜಯ

ಭಾರತೀಯ ಆಟಗಾರರ ಸರ್ವಾಂಗೀಣ ಪ್ರದರ್ಶನಕ್ಕೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ ಮೊದಲ ಟಿ-20 ಪಂದ್ಯದಲ್ಲಿ 74 ರನ್‌ ಗಳ ಕಳಪೆ ಮೊತ್ತಕ್ಕೆ ಆಲೌಟಾಗಿದೆ. 101 ರನ್‌ ಗಳ ಭಾರೀ ಜಯದೊಂದಿಗೆ ಭಾರತ ಟಿ-20 ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.

ಕಟಕ್‌ ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ 20 ಓವರ್‌ ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 175 ರನ್‌ ಪೇರಿಸಿತು. ಸ್ಪರ್ಧಾತ್ಮಕ ಗುರಿ ಬೆಂಬತ್ತಿದ ದ.ಆಫ್ರಿಕಾ ತಂಡ 12.3 ಓವರ್‌ ಗಳಲ್ಲಿ 74 ರನ್‌ ಗೆ ಪತನಗೊಂಡಿತು.

ಭಾರತದ ಮಾರಕ ದಾಳಿ ನಡೆಸಿದ ಅರ್ಷದೀಪ್‌ ಸಿಂಗ್‌, ಜಸ್‌ ಪ್ರೀತ್‌ ಬುಮ್ರಾ, ವರುಣ್‌ ಚಕ್ರವರ್ತಿ ಮತ್ತು ಅಕ್ಸರ್‌ ಪಟೇಲ್‌ ತಲಾ ೨ ವಿಕೆಟ್‌ ಪಡೆದು ಹರಿಣಗಳ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು.

ದಕ್ಷಿಣ ಆಫ್ರಿಕಾ ಪರ ದೆವಲಾದ್‌ ಬ್ರೇವಿಸ್‌ ೨೨ ರನ್‌ ಗಳಿಸಿದರು. ಟ್ರಿಸ್ಟನ್‌ ಸ್ಟಬ್ಸ್‌ ಮತ್ತು ನಾಯಕ ಏಡಿಯನ್‌ ಮರ್ಕರಂ ತಲಾ ೧೪ ರನ್‌ ಬಾರಿಸಿ ಹೋರಾಟ ನಡೆಸಿದ್ದು ಬಿಟ್ಟರೆ ಬೇರೆ ಯಾವ ಬ್ಯಾಟ್ಸ್‌ ಮನ್‌ ಗಳು ಕ್ರೀಸ್‌ ಗೆ ಬರುತಿದ್ದಂತೆ ಪೆವಿಲಿಯನ್‌ ಕಡೆ ಮರಳುತ್ತಿದ್ದಾರೆ.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಭಾರತ ತಂಡ ಆಲ್‌ ರೌಂಡರ್‌ ಹಾರ್ದಿಕ್‌ ಪಾಂಡ್ಯ ಸಿಡಿಲಬ್ಬರದ ಅರ್ಧಶತಕ ಬಾರಿಸಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.

ಹಾರ್ದಿಕ್‌ ಪಾಂಡ್ಯ 28 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ ಒಳಗೊಂಡ 59 ರನ್‌ ಬಾರಿಸಿದರು. ಈ ಮೂಲಕ ಪಾಂಡ್ಯ 100 ಸಿಕ್ಸರ್‌ ಬಾರಿಸಿದ ೪ನೇ ಭಾರತೀಯ ಆಟಗಾರ ಎನಿಸಿಕೊಂಡರು.

ಇದಕ್ಕೂ ಮುನ್ನ ತಂಡ 17 ರನ್‌ ಗೆ 2 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಈ ಹಂತದಲ್ಲಿ ತಿಲಕ್‌ ವರ್ಮಾ (26) ಮತ್ತು ಅಕ್ಸರ್‌ ಪಟೇಲ್‌ (23) ಮತ್ತು ಅಭಿಷೇಕ್‌ ಶರ್ಮ (17) ಉತ್ತಮ ಬೆಂಬಲ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments