Kannadavahini

ಬಾರಿಸು ಕನ್ನಡ ಡಿಂಡಿಮವ

kannada news

ಗ್ಯಾರಿ ಕಸ್ಟರ್ನ್ ಪಾಕಿಸ್ತಾನ ತಂಡದ ನೂತನ ಕೋಚ್!

ಭಾರತ ತಂಡದ ವಿಶ್ವಕಪ್ ವಿಜೇತ ತಂಡದ ಕೋಚ್ ಆಗಿದ್ದ ದಕ್ಷಿಣ ಆಫ್ರಿಕಾ ಮೂಲದ ಗ್ಯಾರಿ ಕಸ್ಟರ್ನ್ ಪಾಕಿಸ್ತಾನ ತಂಡದ ಸೀಮಿತ ಓವರ್ ಗಳ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾನುವಾರ 2024ರ ಟಿ-20 ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡದ ಕೋಚ್ ಆಗಿ ನೇಮಕ ಮಾಡಿರುವುದನ್ನು ಘೋಷಿಸಿದೆ. ಆಸ್ಟ್ರೇಲಿಯಾದ ಜೇಸನ್ ಗಿಲ್ಲೆಸ್ಪಿ ಟೆಸ್ಟ್…

ಗುಜರಾತ್ ನಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ, 14 ಪಾಕಿಸ್ತಾನಿಯರು ಅರೆಸ್ಟ್

ಉಗ್ರರ ನಿಗ್ರಹ ಪಡೆ ಮತ್ತು ಉದ್ದೀಪನ ನಿಗ್ರಹ ಘಟಕಗಳು ನಡೆಸಿದ ಜಂಟಿ ಕಾರ್ಯಾಚರಣೆ ನಡೆಸಿ ಗುಜರಾತ್ ಕರಾವಳಿಯಲ್ಲಿ 602 ಕೋಟಿ ರೂ. ಮೌಲ್ಯದ ಡ್ರಗ್ಸ ವಶಪಡಿಸಿಕೊಂಡಿದ್ದು, 14 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದ್ದಾರೆ. ಗುಜರಾತ್ ಕರಾವಳಿಯಲ್ಲಿ ಕಂಡು ಬಂದ ಬೋಟ್ ಅನ್ನು ಬೆಂಬತ್ತಿದಾಗ ಬೋಟ್ ನಲ್ಲಿದ್ದವರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಪ್ರತಿದಾಳಿ ನಡೆಸಿದ ಭದ್ರತಾ…

ಮನೆಕೆಲಸದಾಕೆ ಮೇಲೆ ಅತ್ಯಾಚಾರ: ಪ್ರಜ್ವಲ್ ನಂತರ ಅಪ್ಪ ರೇವಣ್ಣ ವಿರುದ್ಧ ಕೇಸು!

ಸುಮಾರು 3000 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ತನಿಖೆ ಆರಂಭವಾದ ಬೆನ್ನಲ್ಲೇ ಇದೀಗ ತಂದೆ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧವೂ ಪ್ರಕರಣ ದಾಖಲಾಗಿದೆ. ಎಚ್.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರ ಸಂಬಂಧಿ ಆಗಿದ್ದರೂ ಮನೆ ಕೆಲಸ ಮಾಡುತ್ತಿದ್ದ ವೇಳೆ ಎಚ್‍.ಡಿ. ರೇವಣ್ಣ ನನ್ನ…

ಜಾಕ್ಸ್ 2ನೇ ಅತೀ ವೇಗದ ಶತಕ: ಕೊಹ್ಲಿ ಮಿಂಚು: ಆರ್ ಸಿಬಿಗೆ 9 ವಿಕೆಟ್ ಭರ್ಜರಿ ಜಯ

ವಿಲ್ ಜಾಕ್ಸ್ ಅಜೇಯ ಶತಕ ಹಾಗೂ ವಿರಾಟ್ ಕೊಹ್ಲಿ ಅವರ ಜವಾಬ್ದಾರಿಯುತ ಪ್ರದರ್ಶನದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್ ಗಳ ಭಾರೀ ಅಂತರದಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ. ಅಹಮದಾಬಾದ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20…

ಒಲಿಂಪಿಕ್ ಚಾಂಪಿಯನ್ ಮಣಿಸಿ ವಿಶ್ವಕಪ್ ಆರ್ಚರಿಯಲ್ಲಿ ಚಿನ್ನ ಗೆದ್ದ ಭಾರತ!

ಒಲಿಂಪಿಕ್ ಚಾಂಪಿಯನ್ ಕೊರಿಯಾ ತಂಡವನ್ನು ಸೋಲಿಸಿದ ಭಾರತ ಪುರುಷರ ತಂಡ ವಿಶ್ವಕಪ್ ಆರ್ಚರಿಯಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ. ಧೀರಜ್ ಬೊಮ್ಮಾದೇವರ ತುರಣ್ ದೀಪ್ ರಾಯ್ ಮತ್ತು ಪ್ರವೀಣ್ ಜಾಧವ್ ಅವರನ್ನೊಳಗೊಂಡ ಪುರುಷರ ರಿಕ್ರೂ  ತಂಡ ಫೈನಲ್ ನಲ್ಲಿ ಕೊರಿಯಾ ತಂಡವನ್ನು 5-1 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿತು. ಭಾರತ…

ಅಶ್ಲೀಲ ವೀಡಿಯೊ ಪ್ರಕರಣ: ವಿದೇಶಕ್ಕೆ ಪ್ರಜ್ವಲ್ ರೇವಣ್ಣ ಪರಾರಿ!

ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಎಸ್ ಐಟಿ ತನಿಖೆಗೆ ಆದೇಶಿಸುತ್ತಿದ್ದಂತೆ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದಾರೆ. ಏಪ್ರಿಲ್ 26ರಂದು ಮೊದಲ ಹಂತದ ಮತದಾನ ನಡೆದಿದ್ದು, ಮತದಾನ ಮಾಡಿದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದಾರೆ. ಇದರಿಂದ ತನಿಖೆ ಆರಂಭದಲ್ಲಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಬಯಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಮೊದಲ ಹಂತದ ಚುನಾವಣೆ…

20 ಅಡಿ ಮೇಲೆ ಹಾರಿ ಮರಕ್ಕೆ ಕಾರು ಡಿಕ್ಕಿ: ಭಾರತದ ಮೂವರು ಮಹಿಳೆಯರು ಸಾವು!

20 ಅಡಿ ಮೇಲೆ ಹಾರಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಭಾರತದ ಮೂವರು ಮಹಿಳೆಯರು ಮೃತಪಟ್ಟ ಘಟನೆ ಅಮೆರಿಕದಲ್ಲಿ ಸಂಭವಿಸಿದೆ. ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ ಗ್ರೀನ್ ವೆಲ್ಲಿ ಕಂಟ್ರಿಯಲ್ಲಿ ಈ ದುರಂತ ಸಂಭವಿಸಿದ್ದು, ಗುಜರಾತ್ ನ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾ ಬೇನ್ ಪಟೇಲ್, ಸಂಗೀತಾಬೆನ್ ಪಟೇಲ್ ಮತ್ತು ಮನಿಷಾಬೆನ್ ಪಟೇಲ್ ಮೃತಪಟ್ಟ ದುರ್ದೈವಿಗಳು. ಮಿತಿ…

IPL: ಜಾಕ್ ಫ್ರೇಸರ್ ಆಟಕ್ಕೆ ಸೋತ ಮುಂಬೈ, ಡೆಲ್ಲಿ ಗೆ 10 ರನ್ ರೋಚಕ ಜಯ

ಆರಂಭಿಕ ಜಾಕ್ ಫ್ರೇಸರ್ ಮ್ಯಾಕ್ ಗುರ್ಕ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 10 ರನ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಗೆ ಮತ್ತಷ್ಟು ಹತ್ತಿರವಾಗಿದೆ. ದೆಹಲಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ ಗಳಲ್ಲಿ 4 ವಿಕೆಟ್…

ಚಾಕೊಲೇಟ್ ಐಸ್ ಕ್ರೀಂ ಡೆಲಿವರಿ ಮಾಡದ ಸ್ವಿಗ್ಗಿಗೆ 5000 ರೂ. ದಂಡ!

ಮೊಬೈಲ್ ಆಪ್ ಮೂಲಕ ಆರ್ಡರ್ ಮಾಡಿದ್ದ ಚಾಕೋಲೇಟ್ ಐಸ್ ಕ್ರೀಂ ನೀಡದ ಕಾರಣ ಸ್ವಿಗ್ಗಿಗೆ ಬೆಂಗಳೂರಿನ ಗ್ರಾಹಕರ ವೇದಿಕೆ 5000 ರೂ. ದಂಡ ವಿಧಿಸಿದೆ. ಫುಡ್ ಆರ್ಡರ್ ಡೆಲಿವರಿ ಕಂಪನಿಯಾದ ಸ್ವಿಗ್ಗಿಗೆ 3000 ರೂ. ಪರಿಹಾರ ಹಾಗೂ 2000 ರೂ. ನ್ಯಾಯಾಲದ ವೆಚ್ಚ ಸೇರಿದಂತೆ 5000 ರೂ. ದಂಡ ವಿಧಿಸಲಾಗಿದೆ. ಬೆಂಗಳೂರಿನಲ್ಲಿ 2023 ಜನವರಿಯಲ್ಲಿ ಮಹಿಳೆಯೊಬ್ಬರ…

ಜೈ ಶ್ರೀರಾಮ್, ಕೊಹ್ಲಿ, ರೋಹಿತ್ ಎಂದು ಉತ್ತರ ಬರೆದ ವಿದ್ಯಾರ್ಥಿಗಳು ಪಾಸ್! ಯುಪಿ ವಿವಿಯಲ್ಲಿ ಗೋಲ್ ಮಾಲ್!

ಉತ್ತರ ಪತ್ರಿಕೆಯಲ್ಲಿ ಜೈ ಶ್ರೀರಾಮ್ ಪಾಸ್ ಕರೊ (ಜೈ ಶ್ರೀರಾಮ್ ಪಾಸ್ ಮಾಡಿ) ಎಂದು ಬರೆದಿದ್ದ ವಿದ್ಯಾರ್ಥಿಯನ್ನು ಪಾಸ್ ಮಾಡಿದ ಪ್ರೊಫೆಸರ್ ಅನ್ನು ಅಮಾನತುಗೊಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶ ವಿಶ್ವವಿದ್ಯಾಲಯದ ಮೊದಲ ವರ್ಷದ ಪದವಿ ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ಜೈ ಶ್ರೀರಾಮ್ ಮತ್ತು ಕ್ರಿಕೆಟಿಗರ ಹೆಸರು ಬರೆದಿದ್ದರೂ ಪಾಸ್ ಮಾಡಲಾಗಿತ್ತು. ತಪಾಸಣೆ…