Monday, June 1, 2026
Google search engine
Homeಜಿಲ್ಲಾ ಸುದ್ದಿತಲೆಗೆ ಬಿದ್ದ ಪೆಟ್ಟಿನಿಂದ ನೋವು ತಾಳಲಾರದೇ ಗುಂಡು ಹಾರಿಸಿಕೊಂಡು ವೃದ್ದ ಆತ್ಮಹತ್ಯೆ

ತಲೆಗೆ ಬಿದ್ದ ಪೆಟ್ಟಿನಿಂದ ನೋವು ತಾಳಲಾರದೇ ಗುಂಡು ಹಾರಿಸಿಕೊಂಡು ವೃದ್ದ ಆತ್ಮಹತ್ಯೆ

ಶಿವಮೊಗ್ಗ: ತಲೆಗೆ ಬಿದ್ದ ಪೆಟ್ಟಿನಿಂದ ಆದ ನೋವು ತಾಳಲಾರದೇ ವೃದ್ಧರೊಬ್ಬರು ಗನ್‌ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ತನ್ನದೇ ಗನ್​ನಿಂದ ಗುಂಡು ಹಾರಿಸಿಕೊಂಡು ಹೊಸನಗರ ತಾಲೂಕು ನಿಟ್ಟೂರು ಗ್ರಾಮದ ಬಳಿಯ ತಟ್ಟೆಕೊಡ್ಲು ನಿವಾಸಿ ರಾಮಚಂದ್ರ ರಾವ್ (85) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಮಚಂದ್ರ ತಮ್ಮ ಮನೆಯ ಕೋಣೆಯಲ್ಲಿ ತಮ್ಮದೇ ಲೈಸನ್ಸ್ ಗನ್​ನಿಂದ ಗದ್ದಕ್ಕೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಗುಂಡು ಹಾರಿಸಿಕೊಂಡ ಪರಿಣಾಮ ತಲೆ ಸಂಪೂರ್ಣ ಛಿದ್ರಗೊಂಡಿದೆ. ಮನೆಯ ಗೋಡೆಯ ಮೇಲೆಲ್ಲ ರಕ್ತದ ಕಲೆ ಉಂಟಾಗಿದೆ.

ಮೃತ ರಾಮಚಂದ್ರ ಅವರು ಮೂರು ದಿನಗಳ ಹಿಂದೆ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ನಂತರ ಇವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ, ನೋವು ಕಡಿಮೆಯಾಗಿರಲಿಲ್ಲ. ಅತೀವ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಇವರು ಶೂಟ್ ಮಾಡಿಕೊಂಡಾಗ ಬಂದ ಶಬ್ದದಿಂದ ಮನೆಯವರೆಲ್ಲ ಎದ್ದು ನೋಡಿದಾಗ ಆತ್ಮಹತ್ಯೆ‌ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ನಗರ ಪೊಲೀಸರು ಭೇಟಿ‌ ನೀಡಿ‌ ಪರಿಶೀಲನೆ ನಡೆಸಿದ್ದಾರೆ. ಬೆಳಗ್ಗೆ ಸುಕೂ ತಂಡ ಭೇಟಿ ನೀಡಿದೆ. ಪೊಲೀಸರು ಗನ್​ಗೆ ಲೈಸೆನ್ಸ್ ಇತ್ತೆ ಎನ್ನುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments