Wednesday, May 13, 2026
Google search engine
Homeದೇಶದೀಪಾವಳಿ ಉಡುಗೊರೆ: ಟಿವಿ, ಎಸಿ, 350 ಸಿಸಿ ಬೈಕ್‌ ಜಿಎಸ್‌ ಟಿ ಕಡಿತ!

ದೀಪಾವಳಿ ಉಡುಗೊರೆ: ಟಿವಿ, ಎಸಿ, 350 ಸಿಸಿ ಬೈಕ್‌ ಜಿಎಸ್‌ ಟಿ ಕಡಿತ!

ದೀಪಾವಳಿ ಉಡುಗೊರೆ ನೀಡುತ್ತೇನೆ ಎಂದು ಘೋಷಿಸಿದ್ದ ಪ್ರಧಾನಿ ಮೋದಿ ಆಶಯದಂತೆ ಬುಧವಾರ ನಡೆದ ಜಿಎಸ್‌ ಟಿ ಕೌನ್ಸಿಲ್‌ ಸಭೆಯಲ್ಲಿ ಜಿಎಸ್‌ ಟಿ ನಾಲ್ಕು ವರ್ಗಗಳಲ್ಲಿ ಕಡಿತ ಮಾಡಲಾಗಿದ್ದು, ಟಿವಿ, ಹವಾನಿಯಂತ್ರಿತ, 350 ಸಿಸಿ ಬೈಕ್‌ ಮುಂತಾದವುಗಳ ಮೇಲಿನ ಜಿಎಸ್‌ ಟಿ ಕಡಿತ ಮಾಡಲಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ದೆಹಲಿಯಲ್ಲಿ ಬುಧವಾರ ನಡೆದ ಜಿಎಸ್‌ ಟಿ ಕೌನ್ಸಿಲ್‌ ಸಭೆಯಲ್ಲಿ ಜಿಎಸ್‌ ಟಿ ವರ್ಗಗಳಲ್ಲಿ ಕಡಿತ ಮಾಡಲಾಗಿದ್ದು, ಇನ್ನು ಮುಂದೆ ಶೇ.5 ಮತ್ತು 12 ವರ್ಗಗಳು ಮಾತ್ರ ಇರಲಿದೆ. ಶೇ.28 ವರ್ಗದಲ್ಲಿದ್ದ ದುಬಾರಿಯಾಗಿದ್ದ ವಸ್ತುಗಳು ಶೇ.18ಕ್ಕೆ ಬಂದಿವೆ. ಇದರಿಂದ ಹಲವು ವಸ್ತುಗಳ ದರ ಕಡಿತಗೊಂಡಿವೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಕೈಗೊಂಡ ತೀರ್ಮಾನಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದ್ದು, ಇನ್ನು ಮುಂದೆ ದೇಶದಲ್ಲಿ ಶೇ.5 ಮತ್ತು ಶೇ.18 ದರಗಳು ಮಾತ್ರ ಉಳಿದುಕೊಳ್ಳಲಿವೆ. ಆದರೆ ಪಾನ್ ಮಸಾಲಾ, ಸಿಗರೇಟ್, ಸಕ್ಕರೆ ಹಾಗೂ ಗಾಳಿ ತುಂಬಿದ ನೀರು, ಕಾರ್ಬೊನೇಟೆಡ್ ಪಾನೀಯಗಳು ಇತ್ಯಾದಿಗಳಿಗೆ ಮಾತ್ರ ಅನ್ವಯಿಸುವ ಶೇ. 40ರಷ್ಟು ವಿಶೇಷ ಜಿಎಸ್‌ ಟಿ ದರ ಕಡಿತಗೊಳಿಸಲಾಗಿದೆ.

ಮಧ್ಯಮ ವರ್ಗ ಬಳಸುವ ಅನೇಕ ವಸ್ತುಗಳನ್ನು ಶೇ.18ರ ಅಡಿಯಲ್ಲಿ ತರಲಾಗಿದೆ ಎಂದು ಸೀತಾರಾಮನ್ ಹೇಳಿದರು. ಇವುಗಳಲ್ಲಿ ಟೆಲಿವಿಷನ್‌ಗಳು, ಹವಾನಿಯಂತ್ರಣಗಳು ಮತ್ತು 350 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್‌ಗಳು ಸೇರಿವೆ.

“ಈ ಸುಧಾರಣೆಗಳು ಬಹು-ವಲಯ ಮತ್ತು ಬಹು-ವಿಷಯಾಧಾರಿತ ಗಮನವನ್ನು ಹೊಂದಿವೆ, ಇದು ಎಲ್ಲಾ ನಾಗರಿಕರಿಗೆ ಜೀವನ ಸುಲಭತೆ ಮತ್ತು ಎಲ್ಲರಿಗೂ ವ್ಯಾಪಾರ ಮಾಡುವ ಸುಲಭತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ” ಎಂದು ಸೀತಾರಾಮನ್ ಅವರ ಕಚೇರಿ X ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments