Sunday, August 16, 2026
Google search engine
Homeಅಪರಾಧ1,13,000 ಜನ ಕೊಲ್ಲುವಷ್ಟು ಡ್ರಗ್ಸ್ ಸಾಗಿಸುತ್ತಿದ್ದ ಭಾರತೀಯ ಚಾಲಕರು ಅರೆಸ್ಟ್

1,13,000 ಜನ ಕೊಲ್ಲುವಷ್ಟು ಡ್ರಗ್ಸ್ ಸಾಗಿಸುತ್ತಿದ್ದ ಭಾರತೀಯ ಚಾಲಕರು ಅರೆಸ್ಟ್

309 ಪೌಂಡ್ (150 ಕೆಜಿ) ತೂಕದ 7 ದಶಲಕ್ಷ ಡಾಲರ್ ಮೌಲ್ಯದ ಕೊಕೆನ್ ಸಾಗಿಸುತ್ತಿದ್ದ ಇಬ್ಬರು ಭಾರತೀಯ ಚಾಲಕರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.

2017 ಮತ್ತು 2023ರಲ್ಲಿ ಅಮೆರಿಕ ಪ್ರವೇಶಿಸಿದ್ದ ಭಾರತೀಯ ಮೂಲದ ಗುರುಪ್ರೀತ್ ಸಿಂಗ್ (25) ಮತ್ತು ಜಸ್ವೀರ್ ಸಿಂಗ್ (30) ಬಂಧನಕ್ಕೆ ಒಳಗಾಗಿದ್ದಾರೆ.

ಮಿನಿ ಲಾರಿಯಲ್ಲಿ ಸ್ಲೀಪರ್ ಬರ್ತ್ ನಲ್ಲಿ ಕೊಕೆನ್ ತುಂಬಿಸಿ ಅಮೆರಿಕದ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಸಾಗಿಸುತ್ತಿದ್ದಾಗ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಅಧಿಕಾರಿಗಳ ಪ್ರಕಾರ 1,13,000 ಜನರನ್ನು ಕೊಲ್ಲುವಷ್ಟು ಕೊಕೆನ್ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಹೋಂಲ್ಯಾಂಡ್ ಸೆಕ್ಯೂರೆಟಿ ಇಲಾಖೆಯ ಶ್ವಾನಪಡೆಗಳು ನೀಡಿದ ಸೂಚನೆ ಮೇರೆಗೆ ಡ್ರಗ್ಸ್ ಜಾಲ ಬೆಳಕಿಗೆ ಬಂದಿದೆ. ಕಾವಲಿಗಿದ್ದ ಶ್ವಾನಗಳು ಡ್ರಗ್ಸ್ ಬಗ್ಗೆ ಸುಳಿವು ನೀಡಿ ಅಧಿಕಾರಿಗಳನ್ನು ಎಚ್ಚರಿಸಿದ್ದವು.

ಲಾರಿಯ ಸ್ಲೀಪರ್ ಬರ್ತ್ ಕೆಳಗೆ ಕೊಕೆನ್ ತುಂಬಿದ ಬಾಕ್ಸ್ ಗಳನ್ನು ಇರಿಸಲಾಗಿತ್ತು. ಇಬ್ಬರು ಚಾಲಕರನ್ನು ಪೌತಮ್ ಕೌಂಟಿ ಜೈಲಿಗೆ ಕಳುಹಿಸಲಾಗಿದ್ದು, ಅಕ್ರಮವಾಗಿ ಮಾದಕದ್ರವ್ಯ ಸಾಗಾಟದ ಆರೋಪ ಹೊತ್ತಿದ್ದಾರೆ.

ಆದರೆ ಬಂಧನಕ್ಕೊಳಗಾದ ಭಾರತೀಯ ಚಾಲಕರು ಮಾದಕ ದ್ರವ್ಯ ಸಾಗಾಟದ ಆರೋಪವನ್ನು ನಿರಾಕರಿಸಿದ್ದು, ರಿಚಮಂಡ್ ಹೋಟೆಲ್ ಗೆ ಸಾಮಾನು ಸಾಗಿಸಬೇಕು ಎಂದು ಕಂಪನಿ ಕಳುಹಿಸಿಕೊಟ್ಟಿದೆ. ಈ ಬಾಕ್ಸ್ ಗಳಲ್ಲಿ ಏನಿದೆ ಎಂಬ ಮಾಹಿತಿಯೇ ನಮಗೆ ಇಲ್ಲ ಎಂದು ಹೇಳಿದ್ದಾರೆ.

ಗುರುಪ್ರೀತ್ ಸಿಂಗ್ 2023ರಲ್ಲಿ ಅಕ್ರಮವಾಗಿ ಅರಿಜೊನಾ ಮೂಲಕ ಅಮೆರಿಕ ಪ್ರವೇಶಿಸಿದ್ದ. ಜಸ್ವೀರ್ ಸಿಂಗ್ 2017ರಲ್ಲಿ ಅಕ್ರಮವಾಗಿ ಕ್ಯಾಲಿಫೋರ್ನಿಯಾ ಮೂಲಕ ಅಮೆರಿಕ ಪ್ರವೇಶಿಸಿದ್ದು, ಈ ಹಿಂದೆ ಕಳ್ಳತನ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿ ನಂತರ ಬಿಡುಗಡೆ ಆಗಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments