ಸುಮಾರು 4 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಡ್ರೋಣ್ ಹೊಡೆದುರುಳಿಸುವ ಸ್ವದೇಶೀ ನಿರ್ಮಿತ ಡ್ರೋಣ್ ಗನ್ ವಜ್ರ ಶಾಟ್ (ವಜ್ರಾಯುಧ) ಅನ್ನು ಭಾರತ ಅಭಿವೃದ್ಧಿಪಡಿಸಿದೆ.
ವಾಯುಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ `ಸ್ವಾವಲಂಬನ್ 2024’ ಕಾರ್ಯಕ್ರಮದಲ್ಲಿ ಡ್ರೋಣ್ ಗನ್ ಅನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದರು.
ಬಿಗ್ ಬ್ಯಾಂಗ್ ಬೂಮ್ ಸೋಲುಷನ್ ಈ ಡ್ರೋಣ್ ಗನ್ ಅಭಿವೃದ್ಧಿಪಡಿಸಿದ್ದು, ಭೂಸೇನೆ ಮತ್ತು ವಾಯುಪಡೆಗೆ ಈ ಅಸ್ತ್ರಗಳು ಸೇರ್ಪಡೆಯಾಗಲಿವೆ. ಇದರಿಂದ ಭವಿಷ್ಯದಲ್ಲಿ ಡ್ರೋಣ್ ದಾಳಿ ಅಥವಾ ಡ್ರೋಣ್ ಮೂಲಕ ಅಕ್ರಮ ಶೋಧಗಳನ್ನು ತಡೆಯಬಹುದಾಗಿದೆ.
ವಜ್ರಾ ಶಾಟ್ ಕೈಯಿಂದ ಬಳಸುವ ಆಯುಧವಾಗಿದೆ. 4 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋಣ್ ಉರುಳಿಸಬಹುದು ಮತ್ತು ಡ್ರೋಣ್ ಜಾಮ್ ಮಾಡಬಹುದು. ಈ ಡ್ರೋಣ್ ಗಳಿಗೆ ಈಗಾಗಲೇ 200 ಕೋಟಿ ರೂ. ಮೌಲ್ಯದ ಆರ್ಡರ್ ಬಂದಿದೆ ಎಂದು ಅವರು ಹೇಳಿದರು.